ತಮ್ಮ ಜಿಲ್ಲೆಗೆ ರಸಗೊಬ್ಬರ ಪೂರೈಕೆ ಮಾಡಬೇಕೆಂದು ಕರೆ ಮಾಡಿದ ಶಿಕ್ಷಕನನ್ನು ಅಮಾನತ್ತುಗೊಳಿಸಿದ ಕೇಂದ್ರ ರಸಗೊಬ್ಬರ ಸಚಿವ ಭಗವಂತ ಖೂಬಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ ರೊಟ್ಟೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.
ರಾಷ್ಟ್ರಧ್ವಜ ಹಿಡಿದುಕೊಂಡು ಸಾಮಾಜಿಕ ಹೋರಾಟಗಾರ ಓಂ ಪ್ರಕಾಶ್ ರೊಟ್ಟೆ ಏಕಾಂಗಿ ಹೋರಾಟ ಆರಂಭಿಸಿದ್ದು ಈ ಬಗ್ಗೆ ಮಾತನಾಡಿ, ಗೊಬ್ಬರ ಕೇಳಿದ್ದ ಶಿಕ್ಷಕ ಕುಶಾಲರಾವ್ ಪಾಟೀಲ್ ಮೊದಲು ರೈತ, ಬಳಿಕ ಶಿಕ್ಷಕ ರೈತರ ಪರವಾಗಿ ಗೊಬ್ಬರ ಕೇಳಿದ್ದು ತಪ್ಪಾ,..? ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸಚಿವ ಭಗವಂತ ಖೂಬಾ ಪ್ರಜಾ ತಂತ್ರ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಮತದಾರನ ಹಕ್ಕು ಹತ್ತಿಕ್ಕುವಂತ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಖೂಬಾರನ್ನ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ರೊಟ್ಟೆ ಮನವಿ ಮಾಡಿಕೊಂಡಿದ್ದು ಈ ಬಗ್ಗೆ ತಮ್ಮ ಹೋರಾಟ ನಿರಂತರ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ವರದಿ: ನಂದಕುಮಾರ ಕರಂಂಜೆ, ಬೀದರ