ಬಿಜೆಪಿಯಿಂದ ಹಿಂಸಾತ್ಮಕ ರಾಜನೀತಿ – ಸುರ್ಜೆವಾಲಾ

Must Read

ಬೀದರ – ಸಿದ್ದರಾಮಯ್ಯ ಕೊಲೆ‌ ಮಾಡಲು ಅಶ್ವತ್ಥನಾರಾಯಣ್ ಹೇಳುತ್ತಿಲ್ಲ. ಪ್ರಧಾನಿ ಮೋದಿ, ಜೆಪಿ ನಡ್ಡಾ ಹಾಗೂ ಸಿಎಂ ಬೊಮ್ಮಾಯಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ನಂತೆ ಹೊಡೆದು ಹಾಕಬೇಕು ಎಂದು  ಸಚಿವ ಅಶ್ವತ್ಥನಾರಾಯಣ್ ಪ್ರಚೋದನಾ ಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬೀದರನಲ್ಲಿ ಮಾತನಾಡಿದ ಅವರು, ಮೋದಿಜೀ, ನಡ್ಡಾಜೀ, ಬೊಮ್ಮಾಯಿಜೀ ನೀವು ಮರೆತು ಹೋಗಿದ್ದೀರಾ ಈ ರೀತಿ ಹಿಂಸಾತ್ಮಕ ರಾಜನೀತಿಯಿಂದಲೇ ರಾಷ್ಟ್ರಪಿತ ಹತ್ಯೆಯಾಗಿದ್ದು, ಈ ರೀತಿ ಹಿಂಸಾತ್ಮಕ ರಾಜನೀತಿಯಿಂದಲೇ ಪ್ರಧಾನಿ‌ ಇಂದಿರಾಗಾಂಧಿ ಹತ್ಯೆ ಮಾಡಿದ್ರು, ನಮ್ಮ ಪ್ರೀತಿಯ ಪ್ರಧಾನ‌ಮಂತ್ರಿ ರಾಜೀವ್ ಗಾಂಧಿ ತುಂಡು ತುಂಡಾಗಿ ಹತ್ಯೆಯಾಗಿದ್ದು ಈ ರೀತಿ ರಾಜನೀತಿಯಿಂದಲೇ ಎಂದು ಆಕ್ರೋಶ ಹೊರಹಾಕಿದರು

ಒಬ್ಬ ಕಾಂಗ್ರೆಸ್ ನಾಯಕನಿಗೆ ಹೊಡೆದರೆ ಒಬ್ಬರು,ಇಬ್ಬರು, ಮೂವರು ಬರತ್ತಾರೆ‌. ಕಾಂಗ್ರೆಸ್ ಧ್ವನಿ ಈ ದೇಶದ ಬಡವರ ಧ್ವನಿಯಾಗಿದೆ.ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಹೊಡೆಯಲು ಬಯಸುತ್ತಿದ್ದಾರೆ ಎಂದರೆ,ಬಡವರ,ಎಸ್ಪಿ,ಎಸ್ಟಿ,ಓಬಿಸಿ,ಅಲ್ಪಸಂಖ್ಯಾತರ, ಮಹಿಳೆಯರ, ರೈತರ ಧ್ವನಿ ಬಂದ್ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಬೀದರ್ ನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸುರ್ಜೆವಾಲ ಆರೋಪಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group