ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ತಿಂಡಿ ಕೇಂದ್ರದ ಮುಂಭಾಗದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಒಂದು ವಾರಗಳ ಕಾಲ ಆಗಸ್ಟ್ 22 ಪೂರ್ಣಿಮೆಯ ಭಾನುವಾರದಿಂದ ಆರಂಭಗೊಂಡು 29 ಆಗಸ್ಟ್ ವರೆಗೆ ಒಂದು ವಾರ ಕಾಲ ರಕ್ಷಾ ಬಂಧನ ಕಾರ್ಯಕ್ರಮ ವನ್ನು ಚಾಮರಾಜಪೇಟೆಯ ಸುತ್ತ ಮುತ್ತ ಆಚರಿಸಲಾಗುತ್ತಿದೆ.
ಇಂದಿನ ಕಾರ್ಯಕ್ರಮ ದಲ್ಲಿ ಸೋದರತ್ವದ ಸಂಕೇತ ಆದ ರಕ್ಷಾಬಂಧನದ ಆಚರಣೆಯನ್ನು ಚಾಮರಾಜಪೇಟೆ ಶಾಸಕರ ಕಚೇರಿಯಲ್ಲಿ ಕನ್ನಡ ತಿಂಡಿ ಕೇಂದ್ರ ಹಾಗೂ ಅಖಿಲಾ ಕರ್ನಾಟಕ ಬ್ರಾಹ್ಮಣ ಮಾಧ್ವ ಮಹಾಸಭಾದ ಖಜಾಂಚಿ ಡಾ . ಕೆ.ವೈ. ರಾಮಚಂದ್ರ ಅವರು ಭಾತೃತ್ವದ ಸಂಕೇತವಾದ ರಾಖಿ ಯನ್ನು ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಕಟ್ಟುವ ಮೂಲಕ ಆಗಸ್ಟ್ 27 ರಂದು ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಚಾಮರಾಜ ಪೇಟೆಯ ಶಾಸಕರಾದ ಜಮೀರ್ ಅಹಮದ್ ಖಾನ್ ರಾಖಿ ಕಟ್ಟಿಸಿಕೊಂಡು ಮಾತನಾಡಿ, ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ ಎಂದು ನುಡಿದರು.
ಶಾಸಕರ ಕಚೇರಿಯಲ್ಲಿ ಚಹಾ
ರಕ್ಷಾ ಬಂಧನ ಕಾರ್ಯಕ್ರಮದ ನಂತರ ಶಾಸಕ ಜಮೀರ್ ಅವರ ಕಚೇರಿಯಲ್ಲಿ ಮ. ೧೨ ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಿಗೆ ಚಹಾವನ್ನು ನೀಡಿ ಸತ್ಕಾರ ಮಾಡಲಾಯಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ ರೇಣುಕಾ ವೈಕುಂಠಯ್ಯ ,
ಎನ್ ಸಿ ನಂದೀಶ್, ಕಿರಣ್ ಕುಮಾರ್, ಶಶಾಂಕ್ ,ಪ್ರಣವ್, ರಮೇಶ್ ಕುಮಾರ್ ಗುಪ್ತ , ವಿರೂಪಾಕ್ಷ ಬಿ.ಪಿ ಮತ್ತಿತರು ಭಾಗವಹಿಸಿದ್ದರು.
ವರದಿ: ತೀರ್ಥಹಳ್ಳಿ ಅನಂತ, ಕಲ್ಲಾಪುರ