ಒಂದೇ ‌ನಾಡಿನ‌ ಮಕ್ಕಳು ನಾವು ಸೋದರರಂತೆ‌‌ ನಾವೆಲ್ಲಾ – ಜ಼ಮೀರ್ ಅಹಮದ್ ಖಾನ್

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಬೆಂಗಳೂರು: ನಗರದ ಚಾಮರಾಜಪೇಟೆಯ ಕನ್ನಡ ತಿಂಡಿ ಕೇಂದ್ರದ ಮುಂಭಾಗದಿಂದ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಒಂದು ವಾರಗಳ ಕಾಲ ಆಗಸ್ಟ್  22 ಪೂರ್ಣಿಮೆಯ ಭಾನುವಾರದಿಂದ  ಆರಂಭಗೊಂಡು  29 ಆಗಸ್ಟ್ ವರೆಗೆ ಒಂದು ವಾರ ಕಾಲ ರಕ್ಷಾ ಬಂಧನ ಕಾರ್ಯಕ್ರಮ  ವನ್ನು  ಚಾಮರಾಜಪೇಟೆಯ ಸುತ್ತ ಮುತ್ತ ಆಚರಿಸಲಾಗುತ್ತಿದೆ.

ಇಂದಿನ ಕಾರ್ಯಕ್ರಮ ದಲ್ಲಿ ಸೋದರತ್ವದ ಸಂಕೇತ ಆದ ರಕ್ಷಾಬಂಧನದ ಆಚರಣೆಯನ್ನು  ಚಾಮರಾಜಪೇಟೆ  ಶಾಸಕರ ಕಚೇರಿಯಲ್ಲಿ  ಕನ್ನಡ ತಿಂಡಿ ಕೇಂದ್ರ ಹಾಗೂ ಅಖಿಲಾ ಕರ್ನಾಟಕ  ಬ್ರಾಹ್ಮಣ  ಮಾಧ್ವ  ಮಹಾಸಭಾದ ಖಜಾಂಚಿ ಡಾ . ಕೆ.ವೈ. ರಾಮಚಂದ್ರ ಅವರು ಭಾತೃತ್ವದ   ಸಂಕೇತವಾದ  ರಾಖಿ ಯನ್ನು  ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ   ಕಟ್ಟುವ ಮೂಲಕ  ಆಗಸ್ಟ್ 27 ರಂದು ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ  ಚಾಮರಾಜ ಪೇಟೆಯ ಶಾಸಕರಾದ ಜಮೀರ್ ಅಹಮದ್ ಖಾನ್  ರಾಖಿ ಕಟ್ಟಿಸಿಕೊಂಡು ಮಾತನಾಡಿ, ಒಂದೇ ‌ನಾಡಿನ‌ ಮಕ್ಕಳು ನಾವು ಸೋದರರಂತೆ‌‌ ನಾವೆಲ್ಲಾ ಎಂದು ನುಡಿದರು.

ಶಾಸಕರ ಕಚೇರಿಯಲ್ಲಿ ಚಹಾ

- Advertisement -

ರಕ್ಷಾ ಬಂಧನ ಕಾರ್ಯಕ್ರಮದ ನಂತರ  ಶಾಸಕ  ಜಮೀರ್ ಅವರ  ಕಚೇರಿಯಲ್ಲಿ ಮ. ೧೨ ಗಂಟೆಗೆ  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಿಗೆ ಚಹಾವನ್ನು ನೀಡಿ ಸತ್ಕಾರ ಮಾಡಲಾಯಿತು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾದ ರೇಣುಕಾ ವೈಕುಂಠಯ್ಯ ,
ಎನ್ ಸಿ ನಂದೀಶ್, ಕಿರಣ್ ಕುಮಾರ್, ಶಶಾಂಕ್ ,ಪ್ರಣವ್, ರಮೇಶ್ ಕುಮಾರ್ ಗುಪ್ತ ,  ವಿರೂಪಾಕ್ಷ ಬಿ.ಪಿ  ಮತ್ತಿತರು  ಭಾಗವಹಿಸಿದ್ದರು.


ವರದಿ: ತೀರ್ಥಹಳ್ಳಿ ಅನಂತ, ಕಲ್ಲಾಪುರ

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!