ವಾರದ ಸಾಮೂಹಿಕ ಪ್ರಾಥ೯ನೆ ಮತ್ತು ಕಣ್ಣಿಗೆ ಹನಿ ಹಾಕುವ ವಿಶೇಷ ಕಾಯ೯ಕ್ರಮ

Must Read

ಬೆಳಗಾವಿ – ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ. 17.ರಂದು ವಾರದ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡೆಸಿಕೊಟ್ಟರು ಆನಂದ ಕಕಿ೯, ಜಯಶ್ರೀ ಚಾವಲಗಿ, ಸುವರ್ಣ ಗುಡಸ,ಗೀತಾ ದೇಯಣ್ಣವರ (ಪಾಟೀಲ)ವಿ ಕೆ ಪಾಟೀಲ ಮುಂತಾದವರು ವಚನ ಗಾಯನ ಮಾಡಿದರು     

ಕಣ್ಣಿನ ಆರೋಗ್ಯ ಕುರಿತು ಡಾ ಸುಭಾಸ ಮಾರಿಹಾಳ ನೇತ್ರ ತಜ್ಞರು ಧಾರವಾಡ ಇವರು ನೇತ್ರ ಸಂರಕ್ಷಣೆ ಮತ್ತು ಆಹಾರ ಪದ್ಧತಿ ಬಗ್ಗೆ ತಿಳಿಸಿದರು. ದೂರದರ್ಶನ ಮೊಬೈಲ್ ದಿಂದ ನೋಡುವುದು ಕಣ್ಣಿಗೆ ವಿಶ್ರಾಂತಿ ಇಲ್ಲವಾಗಿದೆ ಪಚಡಿ    ತಿನ್ನುವುದು ಕಡಿಮೆ ಆಗಿದೆ ಇದರಲ್ಲಿ ಎಲ್ಲ ಸೊಪ್ಪುಗಳು ಗಜ್ಜರಿ ಮೂಲಂಗಿ ಸೌತೆಕಾಯಿ ಟೊಮೇಟೊ ಬಿಳಿ ಉಳೆಗಡ್ಡಿ ಹಾತರಕಿ ಹಾಕಿ ಮಾಡುತ್ತಿದ್ದರು ಅಗಸಿ ಗುರೆಳ್ಳು ಸೇಂಗಾ ಇತ್ಯಾದಿ ಚಟ್ನಿ ಸೇವಿಸಿರಿ. ಗಜ್ಜರಿ ದಿನಾಲೂ ಸೇವಿಸಿ ಮಾವಿನ ಹೋಳು ಮತ್ತು ಗಜ್ಜರಿ ಜೂಸ್ ಕುಡಿಯಿರಿ ಕುಂಬಳಕಾಯಿ ಬೀಜ ಅಗಸಿಬೀಜ ಪುಟ್ಟಿ ಹಣ್ಣಿನ ಬೀಜ ಕಣ್ಣ ಕೊಬ್ಬರಿ ಸೇವಿಸಿ. ಬದನೆಕಾಯಿ ಎಲೆ ಯ ಚಟ್ನಿ ಆರೋಗ್ಯಕ್ಕೆ ಒಳ್ಳೆಯದು ಎಂದರು.

ದ್ವಿದಳ ಧ್ಯಾನಗಳ ಮೊಳಕೆ ಒಡೆದ ಕಾಳುಗಳು ಅವರೆ ಕಡಲೆ ಮಡಕಿ ಇತ್ಯಾದಿ ಸದಾ ಸೇವಿಸಿರಿ ಪಪ್ಪಾಯಿ ಹಣ್ಣು ಅನಾನಸು (ಗಭಿ೯ಣಿ ಮಹಿಳೆಯರು ಬಿಟ್ಟು) ನಿತ್ಯವೂ ತಿನ್ನಿ ಮಣ್ಣಿನ ಮಡಿಕೆ ನೀರು ಉತ್ತಮ ಎಂದು ತಿಳಿಸಿದರು, ಸುಮಾರು 200 ಜನರು ಕಣ್ಣಿನ ಸುರಕ್ಷಾ ಹನಿ ಹಾಕಿಸಿಕೂಂಡರು. ದಾಸೋಹ ಸೇವೆಯನ್ನು ವಚನಾ ಮತ್ತು ಸ್ಪೂರ್ತಿ ದೇಯಣ್ಣವರ ಅವರು ನೀಡಿದರು 

ನವಣ್ಣಕ್ಕಿ ಬಿಸಿ ಬೇಳೆ ಬಾತ್ ವಿಶೇಷ ವಾಗಿತ್ತು ಸತೀಶ್ ಪಾಟೀಲ, ಸದಾಶಿವ ದೇವರಮನಿ ಶಿವಾನಂದ ರೂಡಬಸನ್ನವರ ಸುಲದಾಳ ಉಡಕೇರಿ ಎಂ ವೈ ಮೆಣಸಿನಕಾಯಿ, ಬಾಳಗೌಡ ದೊಡಬಂಗಿ ತಿಗಡಿ ಮಲ್ಲಿಕಾರ್ಜುನ ಶಿರಗುಪ್ಪಿ ಕಮಲಾ ಗಣಾಚಾರಿ ಬಾಬು ತಿಗಡಿ   ಅನಸೂಯಾ ಬಶೆಟ್ಟಿ ಸಾರಾಪೊರೆ ಕಾಪಸೆ ಗಂಗಪ್ಪ ಉಣಕಲ್ ಮುಂತಾದವರು ಉಪಸ್ಥಿತರಿದ್ದರು ಸಂಗಮೇಶ ಅರಳಿ ನಿರೂಪಿಸಿದರು ವಚನ ಗಾಯನದೊಂದಿಗೆ ಮುಕ್ತಾಯವಾಯಿತು.

Latest News

ಮನುಕುಲದ ಉದ್ಧಾರಕ್ಕಾಗಿ ವಚನಗಳು ಇವೆ – ಶಾಸಕ ಮನಗೂಳಿ

ಸಿಂದಗಿ; ೧೨ ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ದಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ ಕಾರ್ಯಕ್ಕೆ...

More Articles Like This

error: Content is protected !!
Join WhatsApp Group