- Advertisement -
ಬೆಂಗಳೂರು: ಯಲ್ಲಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಎಲ್ಲರ ಹುಬ್ಬೇರುವಂತಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗಳು ನಡೆದ ನಂತರ ಯಾಕೋ ಬಿಜೆಪಿಯ ಹಣೆಬರಹವೇ ಚೆನ್ನಾಗಿಲ್ಲವೆನ್ನಬಹುದು. ಚುನಾವಣೆಯಲ್ಲಿ ಹೀನಾಯ ಸೋಲು ಉಂಡಿದ್ದಲ್ಲದೆ ಶೆಟ್ಟರ, ಸವದಿಯವರಂಥವರು ಪಕ್ಷ ಬಿಡುವಂತಾಯಿತು. ( ಆಮೇಲೆ ಶೆಟ್ಟರ ಅವರು ಮರಳಿ ಬಿಜೆಪಿಗೆ ಬಂದರು) ಇತ್ತೀಚೆಗೆ ಇದೇ ಶಿವರಾಮ ಹೆಬ್ಬಾರ ಕೂಡ ಪಕ್ಷ ತೊರೆದಿದ್ದು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತು.
ಕಾಂಗ್ರೆಸ್ ಪಕ್ಷ ಸೇರಿರುವ ಬಗ್ಗೆ ಮಾತನಾಡಿದ ವಿವೇಕ ಹೆಬ್ಬಾರ ಅವರು, ನಮ್ಮ ತಂದೆಯವರನ್ನ ಪಕ್ಷ ನಡೆಸಿಕೊಂಡ ರೀತಿಯ ಬಗ್ಗೆ ನನಗೆ ಅಸಮಾಧಾನ ಇದೆ ಅದಕ್ಕಾಗಿ ಕಾಂಗ್ರೆಸ್ ಪಕ್ಷ ಸೇರಿದ್ದಾಗಿ ಹೇಳಿದರು.
- Advertisement -
ಶಿವರಾಮ ಹೆಬ್ಬಾರ ಅವರೇ ಮೊನ್ನೆ ಬಿಜೆಪಿಗೆ ದ್ರೋಹ ಮಾಡಿದ್ದಾರೆಂದರೆ ಇದೇನೂ ಆಶ್ಚರ್ಯವಲ್ಲ ಎಂದು ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.