- Advertisement -
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏನೇ ಮಾಡಿದರೂ ಡಿಫರಂಟ್ ಆಗಿ ಮಾಡುತ್ತಾರೆ. ಅದಕ್ಕೆ ಉದಾಹರಣೆಯಾಗಿ ಮೋದಿಯವರು ಭಾರತದ ಪ್ರಮುಖ ಮೊಬೈಲ್ ಗೇಮರ್ಸ ಜೊತೆ ಸಂವಾದ ಮಾಡಿ, ಗೇಮ್ ಆಡಿ ಒಂದು ಹೊಸ ಪರಂಪರೆಯನ್ನೇ ಹುಟ್ಟು ಹಾಕಿದ್ದಾರೆ. ಇದರಿಂದ ಅವರು ಅಂತರ್ಜಾಲವನ್ನು ಎಷ್ಟೊಂದು ಪ್ರಮುಖವಾಗಿ ಅನುಭವಿಸುತ್ತಾರೆನ್ನುವುದು ಸ್ಪಷ್ಟವಾಗುತ್ತದೆ.
೨೦ ಸಾವಿರ ಕೋಟಿ ಆರ್ಥಿಕತೆ ಹೊಂದಿರುವ ಮೊಬೈಲ್ ಗೇಮಿಂಗ್ ದಿಗ್ಗಜರ ಜೊತೆ ಮೋದಿ ಗೇಮ್ ಆಡಿದರು, ಸಖತ್ ಎಂಜಾಯ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೇಮಿಂಗ್ ಯುವಕರಲ್ಲಿ ಒಬ್ಬರು, ಸರ್ಕಾರವು ನಮ್ಮ ಪ್ರತಿಭೆಯನ್ನು ಗುರುತಿಸಿರುವದು ತುಂಬಾ ಸಂತೋಷ. ಪ್ರಧಾನಿಯವರೊಂದಿಗೆ ಗೇಮ್ ಎಂಜಾಯ್ ಮಾಡುವ ಇಂಥ ಸದವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದರು.
- Advertisement -
ಅನಿಮೇಶ್ ಅಗರ್ ವಾಲ್, ನಮನ್ ಮಾಥುರ್, ಮಿಥಿಲೇಶ ಪಾಟನಕರ್, ಪಾಯಲ್ ಧರೆ, ತೀರ್ಥ ಮೆಹ್ತಾ, ಗಣೇಶ ಗಂಗಾಧರ ಮತ್ತು ಅಂಶು ಬಿಷ್ಟ್ ಇವರೆಲ್ಲ ಮೋದಿಯವರ ಜೊತೆ ಗೇಮಿಂಗ್ ಸಂವಾದದಲ್ಲಿ ಭಾಗವಹಿಸಿದ್ದರು.