spot_img
spot_img

ದಾಲ್ಮಿಯಾದಿಂದ ಮಹಿಳಾ ಸಬಲೀಕರಣ ಕಾರ್ಯಕ್ರಮಕ್ಕೆ ಚಾಲನೆ

Must Read

- Advertisement -

ಮೂಡಲಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಗೌರವಾರ್ಥವಾಗಿ, ದಾಲ್ಮಿಯಾ ಭಾರತ ಸಂಸ್ಥೆಯು  ಸಾಮಾಜಿಕ ಹೊಣೆಗಾರಿಕೆ ಅಂಗವಾದ ದಾಲ್ಮಿಯಾ ಭಾರತ್ ಫೌಂಡೇಶನ್ ಗ್ರಾಮೀಣ ಮಹಿಳೆಯರನ್ನು ಟೈಲರಿಂಗ್ ಉದ್ಯಮದಲ್ಲಿ ಉದ್ಯಮಶೀಲತೆ ಮಾಡಲು ನೆರವು ನೀಡುವ ಮೂಲಕ ಸಬಲೀಕರಣಗೊಳಿಸುವ ಉದ್ದೇಶದಿಂದ ಸುಸ್ಥಿರ ಜೀವನೋಪಾಯಕ್ಕಾಗಿ ಗ್ರಾಮೀಣ ಮಹಿಳೆಯರಿಗಾಗಿ ಟೈಲರಿಂಗ್ ಉದ್ಯಮಶೀಲತೆ ಕಾರ್ಯಕ್ರಮ ಪ್ರಾರಂಭಿಸಲಾಗಿದೆ ಇದರಲ್ಲಿ 400ಕ್ಕೂ ಹೆಚ್ಚು ಮಹಿಳೆಯರು ತಮ್ಮ ಉದ್ಯಮಗಳನ್ನು ನಿರ್ಮಿಸಲು ಬೇಕಾದ ಕೌಶಲ್ಯ ಮತ್ತು ಬೆಂಬಲವನ್ನು ಪಡೆಯಲಿದ್ದಾರೆ ಎಂದು ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಯಾದವಾಡ ಘಟಕದ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್ ಹೇಳಿದರು. 

ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜರುಗಿದ  ತೊಂಡಿಕಟ್ಟಿ, ಕುನ್ನಾಳ, ಬುದ್ನಿ ಖುರ್ದ, ಕಾಮನಕಟ್ಟಿ, ಗುಲಗಂಜಿಕೊಪ್ಪ ಮತ್ತು ಕೊಪ್ಪದಟ್ಟಿ 7 ಗ್ರಾಮಗಳ ಹೊಲಿಗೆ ತರಬೇತಿ ಪೂರ್ಣಗೊಳಿಸಿದ 28 ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮತ್ತು ಮಹಿಳಾ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,  ಪರಿವರ್ತಕ ಉಪಕ್ರಮವು “ಮಹಿಳೆಯರಿಗೆ ಅವಕಾಶ ಒದಗಿಸಿ -ಬೆಳವಣಿಗೆಯನ್ನು ವೇಗಗೊಳಿಸಿ” ಎಂಬ ವಿಶ್ವಸಂಸ್ಥೆಯ ಜಾಗತಿಕ ಥೀಮ್‍ಗೆ ಪೂರಕವಾಗಿ ರೂಪಗೊಂಡಿದೆ. ಕಾರ್ಖಾನೆಯ ಕಾರ್ಯಾಚರಣೆಯ ಪ್ರದೇಶಗಳ ಸುತ್ತಮುತ್ತಲಿನ ಸಮುದಾಯಗಳಲ್ಲಿ ಲಿಂಗ ಸಮಾನತೆ ಮತ್ತು ಆರ್ಥಿಕ ಸಬಲೀಕರಣವನ್ನು ಸಾಧ್ಯವಾಗಿಸಲು ದಾಲ್ಮಿಯಾ ಭಾರತ ಪೌಂಡೇಶನ್ ಕಾರ್ಯನಿರ್ವಹಿಸಲಿದೆ. ಸಮಗ್ರ ಮೌಲ್ಯಮಾಪನದ ನಂತರ,  ದಾಲ್ಮಿಯಾ ಭಾರತ ಫೌಂಡೇಶನ 16 ಸ್ಥಳಗಳ 440 ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ಗುರುತಿಸಿದೆ. ಈ ಮಹಿಳೆಯರಿಗೆ ಉಡುಪನ್ನು ತಯಾರಿಸುವ ಕೌಶಲ್ಯ ಮತ್ತು ಆರ್ಥಿಕ ಸಹಾಯದ ಮೂಲಕ ಪರಿಣಾಮಕಾರಿ ತರಬೇತಿ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು

ಈ ಕಾರ್ಯಕ್ರಮವು ಅವರು ತಮ್ಮದೇ ಆದ ಸೂಕ್ಷ್ಮ ಉದ್ಯಮಗಳನ್ನು ಸ್ವತಂತ್ರವಾಗಿ ಸ್ಥಾಪಿಸಲು ಮತ್ತು ಬೆಳೆಸಲು ಅನುವು ಮಾಡಿಕೊಡುತ್ತದೆ. ಪ್ರತಿ ಮಹಿಳೆಯು ಉತ್ತಮ ಗುಣಮಟ್ಟದ ಟೈಲರಿಂಗ್ ಯಂತ್ರದ ರೂಪದಲ್ಲಿ ಬೆಂಬಲವನ್ನು ಪಡೆಯುತ್ತಾರೆ. ಅದರ ವೆಚ್ಚವನ್ನು ಫಲಾನುಭವಿ ಮತ್ತು ದಾಲ್ಮಿಯಾ ಭಾರತ ಫೌಂಡೇಶನ ಸಮಾನವಾಗಿ ಹಂಚಿಕೊಳ್ಳುತ್ತದೆ. ಪ್ರತೀ ಮಹಿಳೆಯು ತಿಂಗಳಿಗೆ ರೂ.40,000ದಷ್ಟು ಆದಾಯ ಪಡೆಯುವ ಸಾಮರ್ಥ್ಯ ಗಳಿಸಿಕೊಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದರು. 

- Advertisement -

ದಾಲ್ಮಿಯಾ ಭಾರತ್ ಫೌಂಡೇಶನ್‍ನ ಸಿಇಒ  ಅಶೋಕ್ ಕುಮಾರ್ ಗುಪ್ತಾ ಮಾತನಾಡಿ,  “ಭಾರತದಾದ್ಯಂತ ಗ್ರಾಮೀಣ ಸಮುದಾಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ವೇಗಗೊಳಿಸುವುದು ದಾಲ್ಮಿಯಾ ಭಾರತ್‍ನಲ್ಲಿನ ನಮ್ಮ ಧ್ಯೇಯವಾಗಿದೆ. ಈ ಉಪಕ್ರಮದೊಂದಿಗೆ ನಾವು ಗ್ರಾಮೀಣ ಮಹಿಳೆಯರಿಗೆ ಅಗತ್ಯವಿರುವ ಪರಿಕರಗಳು ಮತ್ತು ಕೌಶಲ್ಯಗಳನ್ನು ಒದಗಿಸಿ ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಟೈಲರಿಂಗ್ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಿ, ಅವರ ಸಮಗ್ರ ಅಭಿವೃದ್ಧಿಗೆ ಕಾರಣರಾಗುವ ಉದ್ದೇಶ ಇದೆ. ನಾವು ಈ ಮೂಲಕ ಘನತೆ ಮತ್ತು ಸ್ವಾವಲಂಬನೆಯ ಮಾರ್ಗವನ್ನು ಒದಗಿಸುತ್ತಿದ್ದೇವೆ.ಮಹಿಳೆಯರು ಸಬಲೀಕರಣಗೊಂಡಾಗ ಮಾತ್ರ ತಮ್ಮ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಬದಲಾವಣೆಯನ್ನು ತರುತ್ತಾರೆ. ಪ್ರಗತಿ ಮತ್ತು ಸಮೃದ್ಧಿ ಪಡೆಯಲು ಸ್ಫೂರ್ತಿಯಾಗುತ್ತಾರೆ. ಮಹಿಳೆಯರಿಗೆ ಅವಕಾಶ ಒದಗಿಸುವ ಮೂಲಕ, ನಾವು ನಮ್ಮ ರಾಷ್ಟ್ರದ ಭವಿಷ್ಯದಲ್ಲಿ ಹೂಡಿಕೆ ಮಾಡುತ್ತಿದ್ದೇವೆ, ಮುಂದಿನ ಪೀಳಿಗೆಗೆ ಹೆಚ್ಚು ಒಳಗೊಳ್ಳುವಿಕೆಯ ಮತ್ತು ಸಮಾನ ಸಮಾಜವನ್ನು ನಿರ್ಮಿಸುತ್ತಿದ್ದೇವೆ”, ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು 2-3 ತಿಂಗಳ ಅವಧಿಯೊಳಗೆ ಸ್ಥಳೀಯ ಕೌಶಲ್ಯ ಕೇಂದ್ರಗಳು ಅಥವಾ ದಾಲ್ಮಿಯಾ ಭಾರತ್ ಫೌಂಡೇಶನ್‍ನ ಬೆಂಬಲಿತ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪ್ರದೇಶದ ಬೇಡಿಕೆ ಮತ್ತು ಅಸ್ತಿತ್ವದಲ್ಲಿರುವ ಟೈಲರಿಂಗ್ ಘಟಕಗಳ ಆಧಾರದ ಮೇಲೆ ಫಲಾನುಭವಿಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಈ ಯೋಜನೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವು ದಾಲ್ಮಿಯಾ ಭಾರತ್ ಫೌಂಡೇಶನ್‍ನ ಸ್ಲಾರ್ಜರ್ ಉಪಕ್ರಮವಾದ ಗ್ರಾಮ ಪರಿವರ್ತನ್ ಕಾರ್ಯಕ್ರಮ ಮಾಡಲಿದೆ. ಗ್ರಾಮ ಪರಿವರ್ತನ್ ಕಾರ್ಯಕ್ರಮವು ಹಳ್ಳಿಯ ಕುಟುಂಬಗಳಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಕೃಷಿ, ಬೇಸಾಯ ಮತ್ತು ಕೌಶಲ್ಯ ಅಭಿವೃದ್ಧಿಯ ಅಡಿಯಲ್ಲಿ ವಿವಿಧ ಸುಸ್ಥಿರ ಉಪಕ್ರಮಗಳ ಮೂಲಕ ಹಿಂದುಳಿದ ವರ್ಗದ ಕುಟುಂಬಗಳ ಜೀವನಮಟ್ಟದಲ್ಲಿ ಗುಣಾತ್ಮಕ ಸುಧಾರಣೆಗಳನ್ನು ತರುತ್ತದೆ ಎಂದರು. 

ಬೆಂಗಳೂರಿನ ಆರಂಭಿಕ ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿ, ಮೊಬೈಲ್ ಕ್ರೆಚ್ಚಸ್ ಸಂಸ್ಥೆ  ತಜ್ಞರಾದ  ಕುಮಾರಿ ಮಹಾದೇವಿ ಘೋರ್ಪಡೆ ಅವರು ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಮಹತ್ವ ಕುರಿತು ವಿಷಯ ಮಂಡಿಸಿದರು.

ವೇದಿಕೆಯಲ್ಲಿ ಬೆಳಗಾವಿ ಸ್ಪೂರ್ತಿ ಮಹಿಳಾ ಕ್ಲಬ್ ಅಧ್ಯಕ್ಷೆ ವಂದನಾ ಸಿಂಗ್, ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಮಾನವ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಮಯಾಂಕ್ ಕುಮಾರ ಪಟ್ಟಾಕ್ ಇದ್ದರು.  

- Advertisement -

ಕಾರ್ಖಾನೆಯ ಅಧಿಕಾರಿಗಳಾದ ಡಾ. ನೀಲಕಂಠಗೌಡ ನಿರೂಪಿಸಿದರು, ಕಾರ್ಯಕ್ರಮಾಧಿಕಾರಿ ರಾಮನಗೌಡ ಬಿರಾದರ ಸ್ವಾಗತಿಸಿದರು, ಈರಸಂಗಯ್ಯ ಭಾಗೋಜಿಮಠ ವಂದಿಸಿದರು

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group