ಸಿಂದಗಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ಶರಣರ, ಸಂತರ ಮಹಾಂತರ ಜೀವನ ಚರಿತ್ರೆಗಳು ಮರೆಯಾಗುತ್ತಿದ್ದು ಅದಕ್ಕೆ ಭಕ್ತರ ಮನೆಂಗಳಕ್ಕೆ ಪಸರಿಸುವ ನಿಟ್ಟಿನಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಯಲ್ಲಾಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವ ಸಂಸಾರ, ಸಂಪತ್ತಿನೆಡೆಗೆ ಹೆಚ್ಚಿನ ಗಮನ ಹರಿಸದೆ ಧರ್ಮ, ಸಂಸ್ಕಾರ, ಸಂಸ್ಕೃತಿ ಪಸರಿಸುವ ಮಠ-ಮಂದಿರಗಳಲ್ಲಿ ಹಮ್ಮಿಕೊಳ್ಳುವ ಪುರಾಣ ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಚನಕಾರರಾದ ಕಾಖಂಡಕಿಯ ಶಿವಾನಂದ ಶಾಸ್ತ್ರಿಗಳು, ಪಂಪನಗೌಡ ಹಳಕೋಟೆ, ಮಲ್ಲಿಕಾರ್ಜುನ ಶಹಾಪೂರ, ವೇ.ಮೂ. ಶಂಕ್ರಯ್ಯ ಹಿರೇಮಠ, ಅರ್ಜುನ ಮಾಲಗಾರ, ಪ್ರಭುಗೌಡ ಬಿರಾದಾರ, ಚಂದ್ರಶೇಖರ ಹರನಾಳ, ಮಲ್ಲನಗೌಡ ಪಾಟೀಲ, ಮಹಾಂತೇಶ ಮಣೂರ, ಗುರುಸ್ವಾಮಿ ಹಿರೇಮಠ ಸೇರಿದಂತೆ ಶ್ರೀಮಠದ ಭಕ್ತರು ಮತ್ತು ಹಿರಿಯರು ಇದ್ದರು.