spot_img
spot_img

ಕನ್ನಡದ ರಾಜಾ ಕುಳ್ಳ ಇನ್ನಿಲ್ಲ

Must Read

spot_img
- Advertisement -

ಕನ್ನಡ ಚಿತ್ರರಂಗದ ರಾಜಾಕುಳ್ಳ ಎಂದೇ ಪ್ರಸಿದ್ಧರಾಗಿದ್ದ ಹಾಸ್ಯಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಪ್ರಚಂಡ ಕುಳ್ಳ   ದ್ವಾರಕೀಶ ನಿಧನರಾಗಿದ್ದಾರೆ.
ಚಿತ್ರರಂಗದ ನಾಯಕ ವಿಷ್ಣುವರ್ಧನ ಅವರ ಆಪ್ತಮಿತ್ರನಾಗಿದ್ದ ದ್ವಾರಕೀಶ ನೂರಾರು ವಿಶಿಷ್ಟ ಚಿತ್ರಗಳಲ್ಲಿ ನಟಿಸಿ, ನಿರ್ಮಿಸಿ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದರು.

೧೯೪೨ ರಲ್ಲಿ ಹುಣಸೂರಿನಲ್ಲಿ ಹುಟ್ಟಿದ ದ್ವಾರಕೀಶ ಅವರಿಗೆ ಹತ್ತು ಜನ ಮಕ್ಕಳು ಐವರು ಗಂಡು ಮಕ್ಕಳು, ಐವರು ಹೆಣ್ಣು ಮಕ್ಕಳು.

ವೀರ ಸಂಕಲ್ಪ ಚಿತ್ರದ ಮೂಲಕ ಚಿತ್ರನಟನೆ ಆರಂಭಿಸಿದ ದ್ವಾರಕೀಶ ವಿಶಿಷ್ಟ, ವಿಶೇಷ ಹಾಸ್ಯ ನಟನಾಗಿದ್ದರು. ಅವರು ಡಾ. ರಾಜಕುಮಾರ, ಉದಯಕುಮಾರ, ವಿಷ್ಣುವರ್ಧನ ಅವರಲ್ಲದೆ ಇನ್ನೂ ಅನೇಕ ನಾಯಕರ ಜೊತೆ, ನರಸಿಂಹರಾಜು, ಬಾಲಕೃಷ್ಣ ಅವರ ಜೊತೆ ಸಾಮಾಜಿಕ, ಪೌರಾಣಿಕ, ಪತ್ತೇದಾರಿ ಸಹನಟರಾಗಿ ನಟಿಸಿದ್ದಾರೆ. ನೀ ಬರೆದ ಕಾದಂಬರಿ, ಆಫ್ರಿಕಾದಲ್ಲಿ ಶೀಲಾ, ಸಿಂಗಾಪೂರದಲ್ಲಿ ರಾಜಾಕುಳ್ಳ ದ್ವಾರಕೀಶ ಅವರ ಪ್ರಮುಖ ನಿರ್ದೇಶನದ ಚಿತ್ರಗಳು.
ದ್ವಾರಕೀಶ ಅವರಿಗೆ ೮೧ ವರ್ಷ ವಯಸ್ಸಾಗಿತ್ತು.  ವಯೋಸಹಜ ಅನಾರೋಗ್ಯದಿಂದ ನಿಧನರಾದರು. ದ್ವಾರಕೀಶ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group