- Advertisement -
ಏಳಿ, ಎದ್ದು ಬಿಡಿ
ಏಳಿ, ಎದ್ದುಬಿಡಿ
ತಡಮಾಡದೆ ನಡೆದು ಬಿಡಿ
ಸಾಧನೆಯ ಶಿಖರ ಏರಲು
ಕನಸು ನನಸಾಗಿಸಲು.
ಗೀಳಿನ ಬಾಳೇಕೆ
ಹಪಹಪಸಿ ಕೊರಗೇಕೆ
ನಾಳೆಯ ನಿರೀಕ್ಷೆಯಲಿ
ದಾಳ ಹೂಡುವ ಬಯಕೆಯಲಿ.
- Advertisement -
ತಾಳ ಮೇಳ ಸೇರುವಂತೆ
ಬಿಸಿ ಉಸಿರು ಕಟ್ಟುವಂತೆ
ಓರೆ ಕೋರೆ ಸರಿಪಡಿಸುತ
ಬಿರುಕಿಗೆ ಗಾರೆ ತುಂಬುತ.
ರಣ ಕಹಳೆ ಮೊಳಗಿಸಿ
ಕರಣ ಹರಿಸಿ
ಚಾರಣದ ಸ್ಥಿತಿಯಲಿ
ಪರಿಶ್ರಮದ ಸ್ತುತಿಯಲಿ.
ಆವಕಾಶದಲಿ ತೂರಿಬಿಡು
ಹುಸಿ ನಿದ್ರೆ ಸರಿಸಿಬಿಡು
ಘಾಸಿ ತರುವವರ ಮುಂದೆ
ತಾರೆ ಬೆಳಕು ಬೀರುವಂತೆ.
- Advertisement -
ಕಡಿದಾದ ದಾರಿ
ಮೊನಚು ತೋರಿ
ಜಾಗೃತಿಯ ಕಹಳೆ ಊದಿ
ಸುಕೃತಿಯ ಸರದಿ.
ಕಾಲದ ಕನ್ನಡಿ
ಭರವಸೆಯ ಮುನ್ನುಡಿ
ಗತಿಶೀಲ ಹಿಡಿ
ನಂದಿಸಿ ಸ್ವಾರ್ಥದ ಕಿಡಿ.
ಮುಂದೆ ಮುಂದೆ ನಡೆ
ಭಾವುಕತೆಯ ಬಿಡೆ
ಕಾಸಿದ ಕಬ್ಬಿಣದಂತೆ
ಎಡೆ ಬಿಡದೆ ಸಾಧಿಸುವ ಛಲದಂತೆ.
ಸದ್ದಿಲ್ಲದೆ ಸಾಧಿಸು
ಶುದ್ಧಿಯಲಿ ಕ್ರಮವಹಿಸು
ಬುದ್ಧಿಯ ಹಿಡಿತದಿ
ಅತ್ಮ ಬಲದ ವರದಿ.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು