- Advertisement -
ಪಂಚಮಿ ಹಬ್ಬ
ಪಂಚಮಿ ಹಬ್ಬವು ಬಂದೈತಿ
ಅಕ್ಕತಂಗೇರ ಮ್ಯಾಳದು ಕೂಡೈತಿ
ಜೋಕಾಲಿ ಆಟಾ ಜೋರೈತಿ
ಅತ್ತಿಂದಿತ್ತ ಇತ್ತಿಂದತ್ತ ತೂಗಾಡ್ತೈತಿ||1||
ಅವ್ವಾ ಮಾಡಿದ ಉಂಡಿ ಕಡಬು
ನಾಗಪ್ಪಗಿಂತ ನಮಗ ಮೊದಲು
ಭಕ್ತೀಲಿ ಮಾಡ್ತೇವಿ ನಾವ್ ಪೂಜೆ
ನಮ್ಮಮ್ಯಾಗ ಇರ್ಲಪ್ಪಾ ನಿನ್ ದಯೆ||2||
- Advertisement -
ಗೆಳ್ತ್ಯಾರ ಗೆಳ್ತ್ಯಾರ ಸೇರೋದು
ಸೀರಿಯುಟ್ಕೊಂಡ್ ಜೋಕಾಲಿ ಜೀಕೋದು
ಓಣಿ ತುಂಬಾ ಓಡಾಡೋದು
ಎಳ್ಳುಂಡಿ ತಿಂದ ತೇಗೋದು||3||
ಬಗೆ ಬಗೆ ಉಂಡಿ ಮನಿಯಾಗ
ಬೀಗರ ಉಂಡಿ ನಾಗೋನಿಮ್ಯಾಗ
ದಿನಾ ಎನ್ಸಿ ಇಡೋದ ನಾವಾಗ
ಕೊಟ್ಟ ಕಳಿಸೋದ ಯಾವಾಗ||4||
ಎಷ್ಟಬೇಕಾದಷ್ಟ ಉಂಡಿ ತಿಂದ್ರೂ
ಇನ್ನೂ ಕೋಡ್ರಿ ಅಂತಿದ್ವಿ ಆಗಾ
ಒಂದೊಂದೆ ಎಣಿಸಿ ಕೊಟ್ರೂ
ಬ್ಯಾಡ ಅನ್ನೋವಂಗ ಆತ್ರೀಗಾ||5||
- Advertisement -
ಹಿರಿಯಾರ ಮಾಡ್ತಿದ್ರು ರೀತಿ ಪದ್ದತಿ
ನಾವ್ ಮಾಡೋದ ಬರೀ ರೀಲ್ಸ್ಗಾಗಿ
ನಮ್ಮ ಸಂಸ್ಕೃತಿ ನಾವ್ ಉಳಿಸೋಣು
ಮುಂದಿನ ಪೀಳಿಗೆಗೆ ತಿಳ್ಸಿಕೊಡೋಣು||6||
ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ .ಚ. ಕಿತ್ತೂರು