ರಂಗು ರಂಗಿನ ಹೋಳಿ
ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ಸುಟ್ಟು ಹಾಕಿ ,
ಪ್ರೀತಿ,ವಾತ್ಸಲ್ಯ, ಮಮತೆಗಳನ್ನು ಬೆಳೆಸುವ ಹಬ್ಬವಿದು ಸುಂದರ ಹೋಳಿ (1)
ಕಾಮನಹಬ್ಬವಿದು ತರಲಿ ಎಲ್ಲರ ಮನದಲಿ ಹರುಷ
ಓಡಿಸಲಿ ಎದೆಯಲ್ಲಿನ ಅಂಧಕಾರದ
ಸಂಘರ್ಷ (2)
ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಎಲ್ಲರ ಹಬ್ಬವಿದು ಸುಂದರ
ಜೀವನವೆಲ್ಲವೂ ಆಗಲಿ ರಂಗು ರಂಗಿನ ಸುಗಂಧರ (3)
ವರ್ಷಕ್ಕೊಮ್ಮೆ ಬಂದು ಮನದಲಿ ಚಿಗುರಿಸುತ್ತಿದೆ ನವ ಚೈತನ್ಯಗಳು
ಎಲ್ಲರ ಮನದಲಿ ಮೂಡಲಿ ಭಾವೈಕ್ಯತೆಯ ಚಿಂತನೆಗಳು (4)
ರಂಗು ರಂಗಿನ ಹೋಳಿ
ಬೆಳಗಲಿ ನಮ್ಮೆಲ್ಲರ ಬದುಕಿನ ಹಾಳಿ
ರಚನೆ:- ಶಿವಕುಮಾರ ಕೋಡಿಹಾಳ, ಕನ್ನಡ ಸಹಾಯಕ ಪ್ರಾಧ್ಯಾಪಕರು.
ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಮೂಡಲಗಿ ಜಿ ಬೆಳಗಾವಿ