ಕವನ: ವೃದ್ಧೆಯ ಮನಸ್ಸು

Must Read

ಒಂದು ದಿನ ಮುಂಜಾನೆ

ಹಗಲಿನಲ್ಲಿ ನನ್ನಪ್ಪನಿಗೆ
ಉಪಾಹಾರ ತೆರುತ್ತಿರುವಾಗ
ನನಗೊಬ್ಬ ವೃದ್ಧೆ ಕಾಣೆಸಿದಳು

ಎಪ್ಪಾ ಬಾರೋ ನನಪ್ಪಾ
ನನ್ನನ್ನು ಇಲ್ಲಿಂದ ಅಲ್ಲಿಗೆ
ಕರೆದೊಯ್ದು ಕೂರಿಸು
ಎಂದು ಮೇಲು ಧ್ವನಿಯಲ್ಲಿ
ಕೆಳುತ್ತಾ ಕೆಮ್ಮುತ್ತಾ ಕೊರಗುತ್ತಿದ್ದಳು

ಅದನ್ನು ನೋಡಿದ ಆ ವೃದ್ಧೆಯ
ಸೋಸೆ ನಡಿಯಪ್ಪಾ ಈ ಹಣ್ಣಾದ ಮುದುಕಿಯ ಗೋಳು
ಇಷ್ಟೇ ಎಂದು ಸನ್ನೆ ಮಾಡಿ ಹೇಳಿದಳು

ಮನೆಯೊರಗಿನ ಕಟ್ಟೆಯ ಮೇಲೆ
ಕುಳಿತಿರುವ ವೃದ್ಧೆಯ ಜೀವ
ಅಳುಮುಖದಿ
ಕರೆದು ಕರೆದು ಕೆಳುತ್ತಿರುವುದು
ನನಗಾದ ನೋವು ಅಗಾಧ

ನನಗಾಗ ಅನಿಸಿದ್ದು ಇಷ್ಟೇ
ಈ ಕಾಲದ ವೃದ್ಧಾಪ್ಯ ಜೀವನ
ಉಪ್ಪಿಲ್ಲದ ಊಟದಂತಾಗಿದೆ ಎಂದು
ಕಿರಿಯರ ಮನಸ್ಸಿಗೆ ಹಿರಿಯರ
ತವತ ತಲ್ಲಣಗಳು ಅರ್ಥವಾಗುವುದಿಲ್ಲ ಇಂದು

ಪೋನೆಂಬ ಆಡಂಬರದ ಹಬ್ಬದಲ್ಲಿ
ಕಿರಿಯರು ಮುಳುಗಿಹರು ಇಂದು
ಅವರಿಗೆ ಅರ್ಥವಾಗದು
ವೃದ್ದರ ಜೀವನ ಎಂದೆಂದು

ರಾಹುಲ್ ಸರೋದೆ
ಗಂಗಾವತಿ

1 COMMENT

  1. ಕವಿತೆಯನ್ನು ಹಾಕಿದ ಸಂಪಾದಕರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು

Comments are closed.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group