ಕವನ
ಕರುಣೆ ತೋರು ತಂದೆ
ಕರುಣೆ ತೋರು ತಂದೆ
ನಾ ನಿನ್ನ ಮಗಳಾಗಿ ಹುಟ್ಟಿ ಬಂದೆ
ಚೊಚ್ಚಲ ಹೆರಿಗೆಯಲ್ಲಿ ಹೆಣ್ಣಾಗಿ ಹುಟ್ಟಿ ಬಂದೆ ನನ್ನನ್ನು ಕೊಲ್ಲಲು ಮುಂದಾಗದಿರು ತಂದೆ
ನಿನ್ನ ಮಗಳಾಗಿ ಹುಟ್ಟಿ
ನಿನ್ನ ಹೆಸರಿಗೆ ಕೀರ್ತಿ ತರುವೆ ತಂದೆ ನನಗಾಗಿ ಹಿಂಜರಿಯದಿರು ಎಂದೆ
ನಾ ಹುಟ್ಟಿದ ಆ ದಿನ ಸಿಹಿ ಹಂಚಿ ಸಂಭ್ರಮಿಸಿದೆ
ನಾ ಹುಟ್ಟಿದ ಖುಷಿಯಲ್ಲಿ ಬಂಧುಗಳಿಗೆ ಹೆಣ್ಣಾಯಿತೆಂದು ಹೇಳಿಕೊಂಡೆ
ನೀ ಹೆಣ್ಣು ಮಗುವ ಕೊಂದರೆ ಮುಂದೆಂದೂ ಮಕ್ಕಳಾಗದು ಎಂದೆ
ಒಂದು ಹೆಣ್ಣು ಮಗುವ ಕೊಂದ ಶಾಪ ಕೊನೆಯ ವರೆಗೂ ಬಿಡದು ತಂದೆ
ಕರುಣೆ ತೋರು ಎನಗೆ ತಂದೆ ನಾ ನಿನ್ನ ಮಗಳಾಗಿ ಹುಟ್ಟಿ ಬಂದೆ
ನಾ ಹುಟ್ಟದಿದ್ದರೆ ಮಕ್ಕಳಿಲ್ಲವೆಂಬ ಶಾಪದಿಂದ ಮುಕ್ತಿ ಸಿಗುತ್ತಿರಲಿಲ್ಲ ತಂದೆ
ನಾ ಹುಟ್ಟಿದ ಆ ಕ್ಷಣದಿಂದ ನೀ ಶಾಪದಿಂದ ಮುಕ್ತನಾಗಿ ಬದುಕಿರುವೆ ತಂದೆ
ಕರುಣೆ ತೋರು ಎನಗೆ ತಂದೆ
ರಾಹುಲ್ ಸುಭಾಷ್
ಸರೋದೆ
ಗಂಗಾವತಿ 583227
ಮೊ : 7204636991