spot_img
spot_img

ಕಾರ್ತಿಕಮಾಸ+ಸೋಮವಾರ+ಛಟ್ಟಿ ಅಮಾವಾಸ್ಯೆ

Must Read

spot_img
- Advertisement -

ತ್ರಿವಳಿ ಸಂಗಮದ ಮಹಾ ಪುಣ್ಯದಿನ

‌ಮಾಸಗಳಲ್ಲಿ ಅತ್ಯಂತ ಶ್ರೇಷ್ಠ ಮಾಸವೆಂದರೆ ಅದು ಕಾರ್ತಿಕ ಮಾಸವಂತೆ. ನ ಕಾರ್ತಿಕ ಸಮೋ ಮಾಸ: ಎಂದು ವೇದ ಮತ್ತು ಶಾಸ್ತ್ರಗಳು ಕಾರ್ತಿಕ ಮಾಸವನ್ನು ಕೊಂಡಾಡಿವೆ. ಸ್ವಯಂ ಶಂಭುವೇ ಕಾರ್ತಿಕ ಮಾಸದ ಅಧಿಪತಿಯಾಗಿದ್ದಾನೆ. ಶಿವನಿಗೆ ಅತ್ಯಂತ ಪ್ರೀತಿಯ ಮಾಸ ಅಂದರೆ ಅದು ಕಾರ್ತಿಕ ಮಾಸ.

ಶಿವನಿಗೆ ಅತ್ಯಂತ ಪ್ರೀತಿಯ ದಿನವೆಂದರೆ ಸೋಮವಾರ. ಹಾಗೆಯೇ ತಿಥಿಗಳಲ್ಲಿ ಶಿವನಿಗೆ ಅತ್ಯಂತ ಸಂಪ್ರೀತಿಯ ತಿಥಿ ಎಂದರೆ ಅದು ಅಮಾವಾಸ್ಯೆಯ ತಿಥಿ.

ಈ ಮೂರು ಮಹೋನ್ನತ ಕಾಲದ ಮಿಲನದ ಮಧ್ಯೆ ಕಾರಿಂಜೇಶ್ವರನ ಸನ್ನಿಧಿಯಲ್ಲಿ 14.12.2020 ರಂದು ದೀಪಾರಾಧನೆ ನಡೆಯಲಿರುವುದು. ಈ ಮಹಾಪುಣ್ಯ ಕಾಲದಲ್ಲಿ ಸರ್ವ ಶ್ರೇಷ್ಠ ಸೇವೆಯಾದ…

- Advertisement -

ತೈಲ ದೀಪ ಸೇವೆ

ಶಿವ ಪಾರ್ವತಿಯರ ಮುಂದೆ ನೀವು ಎಳ್ಳೆಣ್ಣೆ ದೀಪ ಉರಿಸಿದರೆ ನಿಮ್ಮ ಪಾಪ ಪುಣ್ಯದ ಜೋಳಿಗೆಯಲ್ಲಿ ಕೋಟಿ ಪುಣ್ಯದ ದೇಣಿಗೆ ನಿಮ್ಮದಾಗಲಿದೆ. ಇಂತಹ ಮಹೋನ್ನತವಾದ ಕಾಲದಲ್ಲಿ ಶಿವ ಸನ್ನಿಧಿಯಲ್ಲಿ ದೀಪಾರಾಧನೆ ಮಾಡಿದರೆ ಸಿಗುವ ಪುಣ್ಯದ ಲೆಕ್ಕಾಚಾರ ಈ ಕೆಳಗಿನಂತಿದೆ

  1. ‌ಸೋಮವಾರದ ದಿನ ಯಾರು ಶಿವ ಸನ್ನಿಧಿಯಲ್ಲಿ ಎಳ್ಳೆಣ್ಣೆ ದೀಪ ಉರಿಸಿ ಸೇವೆಯನ್ನು ಮಾಡುತ್ತಾರೋ, ಆ ಭಕ್ತರ ಸೇವೆ ಶನಿ ಪರಮಾತ್ಮನಿಗೆ ಸಂದಾಯವಾಗಲಿ ಎಂದು ಶಿವ ಶನಿಗೆ ವರ ನೀಡಿದರೆ, ಶನಿದೇವರು ಯಾರು ಸೋಮವಾರ ಶಿವ ದೇಗುಲದಲ್ಲಿ ಎಳ್ಳೆಣ್ಣೆ ದೀಪವನ್ನು ಬೆಳಗುತ್ತಾರೋ ಅವರು ಶನಿ ಕಾಟದಿಂದ ಮುಕ್ತರಾಗುತ್ತಾರೆ ಎಂದು ಹರಸುತ್ತಾನೆ.
  2. ಕಾರ್ತಿಕ ಮಾಸದಲ್ಲಿ ಶಿವ ಪಾರ್ವತಿ ಸನ್ನಿಧಾನದಲ್ಲಿ ಬೆಳಗುವ ದೀಪ ಕೇವಲ ಈ ಜನ್ಮದ ಪಾಪವನ್ನು ಮಾತ್ರವಲ್ಲದೇ ಜನ್ಮ ಜನ್ಮಗಳ ಪಾಪವನ್ನೂ ಸಹ ದಹಿಸಬಲ್ಲ ಶಕ್ತಿ ಕಾರ್ತಿಕ ದೀಪಕ್ಕಿದೆ.
  3. ಕಾರ್ತಿಕ ಮಾಸದಲ್ಲಿ ಶಿವ ಸಾನಿಧ್ಯದಲ್ಲಿ ದೀಪ ಬೆಳಗುವುದರಿಂದ ಪಿತೃ ದೇವತೆಗಳು ಸಂತಸಗೊಂಡು ನಮ್ಮ ಪಿತೃಗಳಿಗೆ ಸದ್ಗತಿಯನ್ನು ಕರುಣಿಸುತ್ತಾರೆಂದು ಶಾಸ್ತ್ರಗಳು ಹೇಳಿವೆ.
  4. ಕಾರ್ತಿಕ ಮಾಸದಲ್ಲಿ ಉರಿಸುವ ದೀಪವು ದಾರಿದ್ರ್ಯ ಹರಣ ಮಾಡಿ ಸಂವೃದ್ಧಿಯನ್ನು ನೀಡುವುದು ಖಚಿತ.
  5. ನೆನಪಿರಲಿ ನಾವು ಮಾಡುವ ಪುಣ್ಯಕಾರ್ಯಗಳು ಹೇಗೆ ನಮ್ಮನ್ನು ಬೆಂಬಿಡದೆ ಕಾಯುವುದೋ … ಹಾಗೆಯೇ ನಾವು ಮಾಡುವ ದೋಷಗಳು ನಮ್ಮನ್ನು ಬೆಂಬಿಡದೇ ಕಾಡುವುದು ಅಷ್ಟೇ ಸತ್ಯ.
  6. ದೇವರ ದೀಪಾರಾಧನೆಯ ಸಮಯ ಬೆಚ್ಚನೆಯ ಮಲಗದಿರಿ
    ಬನ್ನಿ ಈ ಪುಣ್ಯಕಾಲದಲ್ಲಿ ಪುಣ್ಯ ಭಾಗಿಗಳಾಗೋಣ

    ಸಂಗ್ರಹಿತ ಮಾಹಿತಿ

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group