spot_img
spot_img

ಜಾತ್ರೆಗಳು ಜನರ ಒಗ್ಗಟ್ಟು ತಿಳಿಸಿಕೊಡುತ್ತವೆ – ಈರಣ್ಣ ಕಡಾಡಿ

Must Read

spot_img
- Advertisement -

ರಾಮದುರ್ಗ(ತೊರನಗಟ್ಟಿ): ಗ್ರಾಮೀಣ ಪ್ರದೇಶದ ಜಾತ್ರೆಗಳು ಜನರ ಒಗ್ಗೂಡುವಿಕೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ತಿಳಿಸಿಕೊಡುವ ಸಾಂಸ್ಕೃತಿಕ ಹಬ್ಬಗಳಾಗಿವೆ ಇವುಗಳನ್ನು ಇಂದಿನ ಆಧುನಿಕ ಯುಗದಲ್ಲಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಜೂ-13 ರಂದು ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ ಸರ್ವ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಎಷ್ಟೇ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದರು ಕೂಡಾ ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಇದ್ದೆ ಇರುತ್ತದೆ. ಶ್ರೀರಾಮನು ಕಾಡಿನಲ್ಲಿ ಇದ್ದರು ಕೆಡಲಿಲ್ಲ, ರಾವಣ ಅರಮನೆಯಲ್ಲಿ ಇದ್ದರು ಒಳ್ಳೆಯವನಾಗಿರಲಿಲ್ಲ, ಕೈಕೇಯಿ ಆದರ್ಶ ಪುರುಷ ಶ್ರೀರಾಮನ ಚಿಕ್ಕಮ್ಮನಾಗಿದ್ದರು ಕೂಡಾ ಒಳ್ಳೆಯ ಗುಣ ಹೊಂದಿರಲಿಲ್ಲ, ವಿಭೀಷಣ ದುಷ್ಟ ರಾವಣನ ಸಹೋದರನಾಗಿದ್ದರು ಕೂಡಾ ಅವನ ಗುಣದಲ್ಲಿ ಯಾವುದೇ ದೋಷಗಳಿರಲಿಲ್ಲ. ಇದು ಸಮಾಜದಲ್ಲಿರುವ ಜನರ ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ಹೀಗಾಗಿ ಜಾತ್ರೆಗಳು, ಹಬ್ಬ ಹರಿದಿನಗಳು ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಬದುಕಿನಲ್ಲಿ ಒಳ್ಳೆಯ ಪರಿಣಾಮಕಾರಿ ಬದಲಾವಣೆ ತರಲಿಕ್ಕೆ ಸಾಧ್ಯವಾಗಲಿದೆ ಎಂದು ಜಾತ್ರಾ ಸಂಘಟಕರನ್ನು ಪ್ರಶಂಸಿದರು.

- Advertisement -

ಕಾರ್ಯಕ್ರಮದಲ್ಲಿ ಮುನವಳ್ಳಿ ಸೋಮಶೇಖರ ಮಠದ ಪೂಜ್ಯ ಶ್ರೀ ಮುರಗೇಂದ್ರ ಮಹಾಸ್ವಾಮಿಗಳು, ಹರ್ಲಾಪೂರ ಡವಳೇಶ್ವರ ಮಠದ ಪೂಜ್ಯ ಶ್ರೀ ರೇಣುಕ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಟಕೋಳದ ಪೂಜ್ಯ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಈರಣ್ಣ ಗಡೆಣ್ಣವರ, ಪರುತಗೌಡ ಪಾಟೀಲ, ಮಾರುತಿ ಕೊಪ್ಪದ, ಮಹಾದೇವ ಚಿನ್ನಾಕಟ್ಟಿ, ವಿಠ್ಠಲ ಗಡೆಣ್ಣವರ, ಮುತ್ತನಗೌಡ ಪಾಟೀಲ, ಗುರುನಾಥ ಸಿಂಗಾರಕೊಪ್ಪ, ವಿಠ್ಠಲ ಪಾಟೀಲ, ಡಾ. ಹಣಮಂತಪ್ಪ ಮಳಲಿ, ಸಿ.ಬಿ ಪಾಟೀಲ, ಯಲ್ಲಪ್ಪ ಗಣೆಲ್ದ, ಸೋಮಶೇಖರ ಮಗದುಮ್ಮ ಸೇರಿದಂತೆ ಸ್ಥಳಿಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group