- Advertisement -
ಹುಟ್ಟುತ್ತವೆ ಕವನಗಳು
ಹುಟ್ಟುತ್ತವೆ ಕವನಗಳು
ಜಲಧಾರೆಯಂತೆ
ಭೋರ್ಗರೆದು
ಒಮ್ಮಿoದೊಮ್ಮೆಲೆ
ಮಂದಗತಿಯಲ್ಲಿ
ತನ್ನ ಗತಿ ಬದಲಿಸಿ
ಹೊರಳುತ್ತವೆ ತಮಗೆ
ಬೇಕಾದಕಡೆಗೆ
ಒಳಗಿನ ಕಿಚ್ಚನ್ನು
ಹದವಾಗಿ ಬೇಯಿಸಿ
ತಣ್ಣನೆಯ ಪ್ರತಿರೂಪದಲ್ಲಿ
ಹೊರಹೊಮ್ಮುತ್ತವೆ
ಯಾರಿಗೂ
ಗೊತ್ತಾಗದ ರೀತಿಯಲ್ಲಿ
ನನ್ನೀ ಕವನಗಳು
ಪ್ರತಿಬಿಂಬದಂತೆ
ಫಳಫಳಿಸುತ್ತವೆ
ಎಲ್ಲೆಲ್ಲೂ ಹುಲುಸಾಗಿ
ಧಾರಾಳತನದಿಂದ
ಹುಟ್ಟುತ್ತವೆ ತಮ್ಮಷ್ಟಕ್ಕೆ
ತಾವೇ
ಯಾರ ಹಂಗಿಲ್ಲದೆ
ಮುಜುಗರವಿಲ್ಲದೆ
ಹರಿಯುತ್ತವೆ ನಿಧಾನವಾಗಿ
ನದಿಯಂತೆ
ತಮ್ಮದೇ ಗತಿಯಲ್ಲಿ
ನನ್ನೀ ಕವನಗಳು
- Advertisement -
ಹುಟ್ಟುತ್ತವೆ ಕವನಗಳು
ತಮಗೆ ಬೇಕೇನಿಸಿದಾಗ
ಸರಾಗವಾಗಿ
ಯಾವುದೇ ಅಡೆತಡೆಯಿಲ್ಲದೆ
ತಂಟೆ -ತಕರಾರಿಲ್ಲದೆ
ತಮ್ಮಿಂದ ತಾವೇ
ಉಯ್ಯಾಲೆಯಲ್ಲಿ ತೂಗಿ
ಲಾಲಿ ಹಾಡುತ್ತವೆ
ಮುದ್ದು ಮಾಡುತ್ತವೆ
ಎಲ್ಲರ ಮನ ಗೆಲ್ಲುತ್ತವೆ
ಸುಧಾ ಪಾಟೀಲ
ಬೆಳಗಾವಿ