spot_img
spot_img

ಜ್ಯೋತಿಷ್ಯ: ಗುರು ಚಂಡಾಲ ಯೋಗ

Must Read

- Advertisement -

ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಂಮಗಳ ಯೋಗವಿದ್ದರೆ, ಹಿಡಿದ ಕಾರ್ಯಗಳು ಕೈಗೂಡದೇ ಹೋಗುತ್ತವೆ, ಅವರ ಜೀವನದಿಂದ ಸಂತೋಷ ಮತ್ತು ಶಾಂತಿ ನಾಶವಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ತೊಂದರೆ ಮುಂದುವರಿಯುತ್ತದೆ. ಜನರೊಂದಿಗಿನ ಸಂಬಂಧ ಹದಗೆಡುತ್ತದೆ ಮತ್ತು ವ್ಯಕ್ತಿಯು ಅಲೆದಾಡಬೇಕಾಗುತ್ತದೆ. ಶಾಂತಿಯೆಂಬುದು ಮಾಯವಾದರೆ ಗೊತ್ತಲ್ಲ, ಮಾನಸಿಕ ಒತ್ತಡ ಆರಂಭವಾಗಿತ್ತದೆ. ಅದು ಬೇರೆ ಬೇರೆ ರೀತಿಯ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ. ಒಟ್ಟಿನಲ್ಲಿ ಮನಶ್ಯಾಂತಿ ಅನ್ನುವುದು ಹಾಳಾಗಿ ಜೀವನ ನರಕ ಅನ್ನಿಸಿಬಿಡುತ್ತದೆ. ಗುರು ಚಂಡಾಲ ಯೋಗ ಎಂದು ಕರೆಸಿಕೊಳ್ಳುವ ಈ ಯೋಗವೆ ವ್ಯಕ್ತಿಯ ಅಶುಭ ಯೋಗಕ್ಕೆ ಕಾರಣವಾಗಿ ಮನಶ್ಯಾಂತಿ ಹಾಳುಮಾಡುತ್ತದೆ.

ಗುರು ಚಂಡಾಲ ಯೋಗ

ಜ್ಯೋತಿಷ್ಯದಲ್ಲಿ, ಗುರು ಗ್ರಹ ಮತ್ತು ರಾಹು ಗ್ರಹ ಒಟ್ಟಿಗೆ ಸೇರಿದಾಗ ಅಥವಾ ಪರಸ್ಪರರ ಮೇಲೆ ಅಥವಾ ಜಾತಕದಲ್ಲಿ ಕಣ್ಣಿಟ್ಟಾಗ “ಗುರು ಚಂಡಾಲ ಯೋಗ” ಉಂಟಾಗುತ್ತದೆ ಗುರು ಹಾಗೂ ರಾಹು ಪರಸ್ಪರ ಸಂಬಂಧ ಹೊಂದಿದ್ದಾರೆ. ಇಬ್ಬರೂ ಒಟ್ಟಾಗುವ ಪರಿಸ್ಥಿತಿ ಎದುರಾದಾಗ ಗುರು ಚಂಡಾಲ ಯೋಗ ಸೃಷ್ಟಿಯಾಗುತ್ತದೆ.

ಗುರು ಚಂಡಾಲ ಯೋಗದ ಪರಿಣಾಮ

ವ್ಯಕ್ತಿಯ ಜೀವನದಲ್ಲಿ ಗುರು ಚಂಡಾಲ ಯೋಗವು ರೂಪುಗೊಂಡಾಗ, ವ್ಯಕ್ತಿಯು ಯಶಸ್ಸಿಗೆ ಹೆಣಗಾಡಬೇಕಾಗುತ್ತದೆ. ಏನು ಮಾಡಿದರೂ ಯಶಸ್ಸು ಸಿಗದು. ಹಣದ ಕೊರತೆ ಉದ್ಭವಿಸುತ್ತದೆ. ವ್ಯಕ್ತಿಯು ಹತಾಶೆ ಮತ್ತು ನಕಾರಾತ್ಮಕ ಶಕ್ತಿಯಿಂದ ಸುತ್ತುವರೆಯಲ್ಪಡುತ್ತಾನೆ. ಹಿಡಿದ ಕೆಲಸಗಳು ನಡೆಯದೆ ಅಪಯಶಸ್ಸು ಕಾಡುತ್ತದೆ. ಮಾನಸಿಕ ಸಂತುಲನ ಮಾಯವಾಗಬಹುದು. ಇಂಥದರಲ್ಲಿ ತಾಳ್ಮೆ ಮುಖ್ಯವಾದುದು.

- Advertisement -

ಗುರು ಚಂಡಾಲ ಯೋಗ ಪರಿಹಾರ

ಗುರು ಚಂಡಾಲ ಯೋಗಕ್ಕೆ ಪರಿಹಾರ ಸಾಧ್ಯ. ಈ ಯೋಗದಿಂದ ಭಯಪಡುವ ಅಗತ್ಯವಿಲ್ಲ. ಗುರು ಮತ್ತು ರಾಹು ಸಮಾಗಮದ ಸಮಯದ ಬಗ್ಗೆ ನಿಮಗೆ ತಿಳಿದಿದ್ದರೆ, ನಷ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಯಬಹುದು. ಈ ಅಮಂಗಳ ಯೋಗದ ಪರಿಣಾಮವನ್ನು ಕೊನೆಗೊಳಿಸಲು ಗುರುಗಳಿಂದ ಆಶೀರ್ವಾದ ಪಡೆಯಿರಿ. ಕಾಲಕಾಲಕ್ಕೆ ಗುರುಗಳಿಗೆ ಉಡುಗೊರೆಗಳನ್ನು ನೀಡಿ ಮತ್ತು ಅವರನ್ನು ಸಂತೋಷವಾಗಿಡಿ. ಹಿರಿಯ ಸಹೋದರ ಇರಬಹುದು, ಬಾಸ್ ಇರಬಹುದು, ಯಾವುದೇ ರೀತಿಯಲ್ಲಿ ಗುರು ರೂಪದಲ್ಲಿರುವ ವ್ಯಕ್ತಿ ಇರಬಹುದು ಅಂಥವರನ್ನು ಗೌರವಿಸಿ. ಉತ್ತಮ ಸಾಹಿತ್ಯ ಮತ್ತು ವಿದ್ವತ್ಪೂರ್ಣ ಜನರನ್ನು ಪರಸ್ಪರ ಕೂಡಿಸಬೇಕು. ಕೆಟ್ಟ ಅಭ್ಯಾಸಗಳನ್ನು ತಪ್ಪಿಸಿ ಮತ್ತು ಕೆಟ್ಟ ಜನರಿಂದ ದೂರವಿರಿ. ಅನುಚಿತ ವರ್ತನೆ ಮಾಡಬಾರದು.

ಪರಿಹಾರ

ಬಾಳೆ ಗಿಡವನ್ನು ನೆಟ್ಟು ಪ್ರತಿದಿನ ಪೂಜಿಸಬೇಕು. ವಿಷ್ಣುವನ್ನು ಗುರುವಾರ ಪೂಜಿಸಿ, ಹಳದಿ ಬಣ್ಣ ಹೆಚ್ಚು ಬಳಸಿ. ರಾಹುವಿನ ಮಂತ್ರಗಳನ್ನು ಪಠಿಸಿ. ಶೈಕ್ಷಣಿಕ ವಸ್ತುಗಳನ್ನು ಶಾಲೆಗೆ ದಾನ ಮಾಡಿ. ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ.

- Advertisement -
- Advertisement -

Latest News

ದೆಹಲಿ ಮುಖ್ಯಮಂತ್ರಿ ಯಾರಾಗುತ್ತಾರೆ ?

ಹೊಸದಿಲ್ಲಿ - ತಮ್ಮ ಆಮ್ ಆದ್ಮಿ ಪಕ್ಷದಲ್ಲಿನ ಯಾರೋ ಒಬ್ಬರು ದೆಹಲಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಮಾಜಿ ಉಪ...
- Advertisement -

More Articles Like This

- Advertisement -
close
error: Content is protected !!
Join WhatsApp Group