spot_img
spot_img

ಬೀದರ ಜಿಲೆಟಿನ್ ಜಪ್ತಿ ; ಇನ್ನೂ ಆರೋಪಿಗಳ ಬಂಧನವಿಲ್ಲ

Must Read

- Advertisement -

ಬೀದರ – ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಪೋಟ ಮಾಸುವ ಮುನ್ನವೇ ಗಡಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜೀವಂತ ಜಿಲೆಟಿನ್ ಗಳು ಪತ್ತೆಯಾಗಿದ್ದು ಜಿಲ್ಲೆಯ ನಾಲ್ಕು ಕಡೆ ಪೊಲೀಸರು ಭಾರೀ ಸ್ಪೋಟಕಗಳನ್ನ ಶೀಘ್ರ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ ಯಶಸ್ವಿಯಾಗಿದ್ದಾರೆ.ಆದರೆ ಜಿಲ್ಲೆಯ ಪ್ರಮುಖ ವ್ಯಕ್ತಿಯೊಬ್ಬರಿಗೆ ಸೇರಿದ್ದ ಕನ್ಸ್ ಟ್ರಕ್ಷನ್ ಒಂದರಲ್ಲೆ 16 ಕ್ವಿಂಟಲ್ ಗೂ ಜಾಸ್ತಿ ಸ್ಫೋಟಕ ಅಕ್ರಮವಾಗಿ ಕ್ವಾರಿಯಲ್ಲಿ‌ ಸಿಕ್ಕಿದೆಯಾದರೂ ಈವರೆಗೂ ಪ್ರಮುಖ ಆರೋಪಿಯನ್ನ ಬಂಧಿಸದೆ ಇರುವುದು ಮತ್ತು ಎಫ್ ಐ ಆರ್ ನಲ್ಲಿ ಹೆಸರು ನಮೂದು ಮಾಡದೇ ಇರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹೌದು ಗಡಿ ಜಿಲ್ಲೆ ಬೀದರ್ ನಲ್ಲಿ ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಪೊಲೀಸರು ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಜೀವಂತ ಜಿಲೆಟನ್ ಗಳನ್ನು ವಶಪಡಿಸಿಕೊಂಡಿದ್ದರು.ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ನಡೆದಿದ್ದು ಒಂದು ಪ್ರಕರಣದಲ್ಲಿ6.875 ಕೆಜಿ ಜೆಲಟಿನ್, 66 ನಾನ್ ಎಲೆಕ್ಟ್ರಿಕಲ್ ಡೆಟೋನೆಟರ್ ಸಿಕ್ಕಿದ್ದು ಇಬ್ಬರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.ಇನ್ನೊಂದು ಪ್ರಕರಣದಲ್ಲೂ 24.875 ಜೆಲೆಟಿನ್ ಜಪ್ತಿ ಮಾಡಿ ಇಬ್ಬರನ್ನ ಬಂಧಿಸಲಾಗಿದೆ.ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 30 ಮೀಟರ್ ಕಾರ್ ಡೆಸ್ಕ್ ಕೇಬಲ್ ಗಳು, 60 ಡೆಟೋನೆಟರ್ ಗಳು, 9 ಬಾಕ್ಸ್ ಲಿಕ್ವಿಡ್ ಜಿಲೆಟಿನ್ ಜಪ್ತಿಯಾಗಿದೆ…ಅತಿ ಹೆಚ್ಚು ಅಂದರೆ ಬೀದರ್ ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿ ಇರುವ ಜಿಕೆ ಕನ್ಸ್ ಟ್ರಕ್ಷನ್ (ಗುರುನಾಥ್ ಕೊಳ್ಳುರ್ ಕನ್ಸ್ ಟ್ರಕ್ಷನ್) ನಲ್ಲಿ 1675 ಕೆಜಿಯ ಜೀವಂತ ಜಿಲೆಟಿನ್ ನ 67 ಬಾಕ್ಸ್, 500 ನಾನ್ ಎಲೆಕ್ಟ್ರಿಕ್ ಡೆಟೋನೆಟರ್ ವಶಪಡಿಸಿಕೊಂಡು ನಾಲ್ಕು ಜನರ ಮೇಲೆ ಬೀದರ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…ಆದರೆ‌ ಬಿಜೆಪಿ ಪಾಳ್ಯಯದಲ್ಲಿ ಗುರುನಾಥ್ ಕೊಳ್ಳುರ್ ಪ್ರಭಾವಿ ವ್ಯಕ್ತಿಯಾಗಿದ್ದು ಮತ್ತು ಬೀದರ್ ನ ಕ್ಲಾಸ್ ಒನ್ ಕಾಂಟ್ರ್ಯಾಕ್ಟ ರ್ ಕೂಡ ಆಗಿದ್ದಾರೆ…ಅಲ್ಲದೇ ಈ ಪ್ರಕರಣಕ್ಕೆ ಸಂಭಂಧಿಸಿದಂತೆ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದೆಯಾದರೂ ಅದರಲ್ಲಿ ಮೂವರ ಹೆಸರು ಮಾತ್ರ ನಮೂದು ಮಾಡಲಾಗಿದೆ ಆದರೆ ಎ ಒನ್ ಆರೋಪಿಯಾದ ಜಿಕೆ ಕನ್ಸ್ ಟ್ರಕ್ಷನ್ ಮಾಲೀಕರ ಹೆಸರು ಮಾತ್ರ ಬರೆಯದೆ ಪ್ರಕರಣದಲ್ಲಿ ಆರೋಪಿಯ ಹೆಸರು ಬರೆಯದೇ ಕೇವಲ ಜಿಕೆ ಕನ್ಸ್ ಟ್ರಕ್ಷನ್ ಮಾಲೀಕ ಅಂತ ಬರೆಯಲಾಗಿದೆ.

- Advertisement -

ಈ ಬಗ್ಗೆ ಪೊಲೀಸ್ ಜಿಲ್ಲಾ ವರಿಷ್ಠ ಅಧಿಕಾರಿಗಳನ್ನ ಕೇಳಿದರೆ ಜಿಕೆ ಕನ್ಸ್ ಟ್ರಕ್ಷನ್ ಮಾಲೀಕರು ಯಾರೆಂದು ಇನ್ನೂ ಈ ಬಗ್ಗೆ ಸ್ಪಷ್ಟನೆ ಇಲ್ಲ ಆ ಬಗ್ಗೆ ದಾಖಲಾತಿ ನೋಡಿಕೊಂಡು ಹೆಸರು ಹೇಳುತ್ತೇವೆ ಅಂತಿದ್ದಾರೆ ಮತ್ತು ತಂದೆಯ ಹೆಸರಲ್ಲಿದೆಯೋ ಅಥವಾ ಮಗನ ಹೆಸರಲ್ಲಿ ಇದೆಯೋ ಅಂತ ಹೇಳುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿಯ ಹೆಸರು ಬರೆಯದೆ ಇರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ…

ಗ್ರಾಮಕ್ಕೆ ತೊಂದರೆ

ಇನ್ನು ಬೀದರ್ ತಾಲೂಕಿನ ತೆಲಂಗಾಣ ಗಡಿಗೆ ಹೊಂದಿಕೊಂಡ ಸುಲ್ತಾನಪುರ ಬಳಿ ಜಿಕೆ ಕನ್ಸ್ ಟ್ರಕ್ಷನ್ ನ ಕ್ವಾರಿ ಇದ್ದು ಟಿಪ್ಪರ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸ್ಪೋಟಕಗಳು ಪತ್ತೆಯಾಗಿವೆ…
ಜಿಕೆ ಮಾಲೀಕತ್ವದ ಒಡೆತನದ ಸ್ಟೋನ್ ಕಟಿಂಗ್ ಕ್ರಶರ್ ತೆಲಂಗಾಣದಲ್ಲಿ ಇದೆ…ಈ ಕನ್ಸ್ ಟ್ರಕ್ಷನ್ ನ ಪ್ರಮುಖ ಕಚೇರಿ ಬೀದರ್ ನಲ್ಲಿ ಇದೆ ಮತ್ತು ಬೀದರ್ ತಾಲೂಕಿನ ಸುಲ್ತಾನಪುರದ ಬಳಿ ಕ್ವಾರಿ ಇರವುದರಿಂದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ…ಈ ವೇಳೆ ಕ್ವಾರಿಯಲ್ಲೆ ನಿಂತಿದ್ದ ಟಿಪ್ಪರ್ ನಲ್ಲಿ ಈ ಸ್ಪೋಟಕಗಳು ಪತ್ತೆಯಾಗಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…ಅಲ್ಲದೇ ನಂಬರ ಪ್ಲೇಟ್ ಹೊಂದಿರದ ಯಾರ ಹೆಸರಲ್ಲಿ ಟಿಪ್ಪರ್ ಇದೆ ಅನ್ನೋ ಬಗ್ಗೆ ಕೂಡ ಮಾಹಿತಿ ಇಲ್ಲ…ಇನ್ನೂ ಈ ಬಗ್ಗೆ ಸುಲ್ತಾನಪುರ ಗ್ರಾಮಸ್ಥರೊಬ್ಬರು ಮಾತನಾಡಿದ್ದು ನಮ್ಮ ಗ್ರಾಮದ ಕೂದಲೆಳೆ ಅಂತರದಲ್ಲೆ ಜಿಕೆ ಕನ್ಸ್ ಟ್ರಕ್ಷನ್ ದ ಕ್ವಾರಿ ಇದ್ದು ಇಲ್ಲಿ ಪ್ರತಿನಿತ್ಯ ಭಾರೀ ಪ್ರಮಾಣದಲ್ಲಿ ಸ್ಪೋಟ ಮಾಡಲಾಗುತ್ತೆ ಇದರಿಂದಾಗಿ ನಮ್ಮ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು‌ ಬಾರಿ ನಾವು ಜಿಲ್ಲಾಧಿಕಾರಿಗಳ ಗಮನಕ್ಕೂ ಸಹ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಹೀಗಾಗಿ ಏನಾದರೂ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಷ್ಟೊಂದು ಪ್ರಮಾಣದಲ್ಲಿ ಜಿಲೆಟಿನ್ ಗಳ ಅವಶ್ಯಕತೆ ಏತಕ್ಕೆ ಇದರಿಂದ ಏನಾದರೂ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಿದ್ದರೆ ಹೇಗೆ ಮತ್ತು ಇಲ್ಲಿಂದ ಅನಧಿಕೃತವಾಗಿ ಬೇರೆಡೆ ಸಾಗಾಟವಾಗುತ್ತಿದೆಯಾ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ…

- Advertisement -

ಒಟ್ಟಿನಲ್ಲಿ ಕರ್ನಾಟಕದ ಜನತೆ ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ‌ ನಡೆದ ಮಹಾ ಜೆಲಿಟಿನ್ ಸ್ಪೋಟ್ ದಿಂದ ಬೆಚ್ಚಿ ಬಿದ್ದಿತ್ತು…ಅದೇ ತರಹದ ಇನ್ನೊಂದು ದುರ್ಘಟನೆ ನಡೆಯುವ ಮುನ್ನ ಬೀದರ್ ಪೊಲೀಸರು ಎಚ್ಚೆತ್ತುಕೊಂಡು ಅಕ್ರಮವಾಗಿ ಜೆಲೆಟಿನ್ ಸಂಗ್ರಹಿಸಿ ಇಟ್ಟಿದ್ದವರ ಮೇಲೆ ದಾಳಿ ನಡೆಸಿ ಕಾನೂನಿನ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಆದರೆ ಬೀದರ್ ತಾಲೂಕಿನ ಸುಲ್ತಾನಪುರ ಬಳಿ ಅತಿ ಹೆಚ್ಚು ಜೆಲೆಟಿನ್ ಪತ್ತೆಯಾದ ಜಿಕೆ ಕನ್ಸ್ ಟ್ರಕ್ಷನ್ ನ ಮಾಲೀಕರ್ ಹೆಸರು ಹೇಳದೇ ಇರುವುದು ಮತ್ತು ಅವರ ಮೇಲೆ ಕ್ರಮ ಜರುಗಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣ ಆಗಿದೆ…ಆದಷ್ಟು ಬೇಗನೆ ಯಾವುದೇ ರಾಜಕೀಯ ಒತ್ತಡಗಳಿಗೂ ಮಣೆಯದೇ ಮಾಲೀಕರ ಹೆಸರು ಬಹಿರಂಗ ಪಡಿಸಿ‌ ಅವರ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸ ಬೇಕಾದ ಅವಶ್ಯಕತೆ ಇದೆ…

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group