Homeಸುದ್ದಿಗಳುಬೆಡಸೂರಿನ ಶಾಲೆಯಲ್ಲಿ ಪಾಲಕರ ಸಭೆ

ಬೆಡಸೂರಿನ ಶಾಲೆಯಲ್ಲಿ ಪಾಲಕರ ಸಭೆ

ಸವದತ್ತಿ ಃ ತಾಲೂಕಿನ ಬೆಡಸೂರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಪಾಲಕರ ಸಭೆಯನ್ನು ಜರುಗಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಸುಧೀರ ಪತ್ತಾರ, ಕರೀಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಅರುಣಾ ಮ್ಯಾಗೇರಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಪರಮೇಶ್ವರ ಗಡೆಪ್ಪನವರ ಉಪಸ್ಥಿತರಿದ್ದರು.

“ಸರಕಾರ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಇತ್ಯಾದಿ ಹಲವು ಯೋಜನೆಗಳನ್ನು ನೀಡುವ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಿದ್ದು ಪಾಲಕರು ತಮ್ಮ ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳಿಸುವ ಮೂಲಕ ಅವರಲ್ಲಿ ಗುಣಮಟ್ಟದ ಶಿಕ್ಷಣ ಮೂಡುವಂತೆ ಕಾಳಜಿ ವಹಿಸಬೇಕು. ಶಿಕ್ಷಕರು ತರಗತಿಯಲ್ಲಿ ನೀಡುವ ಬೋಧನೆ ಪರಿಣಾಮಕಾರಿಯಾಗಿ ಮಕ್ಕಳನ್ನು ತಲುಪಲು ನಿಯಮಿತ ಹಾಜರಾತಿ ಅವಶ್ಯ. ಈ ದಿಸೆಯಲ್ಲಿ ಪಾಲಕರು ತಮ್ಮ ತಮ್ಮ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು”ಎಂದು ಕರೆ ನೀಡಿದರು.

ಗ್ರಾಮ ಪಂಚಾಯತಿ ವತಿಯಿಂದ ಆಟದ ಮೈದಾನ, ಸುತ್ತುಗೋಡೆ ದುರಸ್ತಿ.ಕಾರ್ಯ ಕೈಗೊಂಡಿದ್ದು ಇನ್ನೂ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಡುವುದಾಗಿ ತಿಳಿಸುತ್ತ ಶಿಕ್ಷಣದ ಮಹತ್ವ ಕುರಿತು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸುಧೀರ ಪತ್ತಾರ ತಿಳಿಸಿದರು.

ಪ್ರೌಢಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರಾದ ಎಸ್.ಬಿ.ನದಾಫ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಎಸ್.ಸಿ.ವೆಂಕಲಕುಂಟೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ತಿಳಿಸಿ ಎಲ್ಲ ಸದುಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿಯ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕ ಶಿಕ್ಷಕಿಯರು. ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಉದಯ ಸಿಂಗಾರಗೊಪ್ಪ ಬೆಡಸೂರ ಯಡ್ರಾವಿ ಗ್ರಾಮಗಳ ಗುರು ಹಿರಿಯರು ಉಪಸ್ಥಿತರಿದ್ದರು. ಗುರುಮಾತೆ ಆರ್ ಆರ್ ಶಹಪೂರಕರ ನಿರೂಪಿಸಿದರು. ಎಸ್.ಸಿ.ವೆಂಕಲಕುಂಟೆ ಸ್ವಾಗತಿಸಿದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕುಶಾಲ್ ಮುದ್ದಾಪುರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group