spot_img
spot_img

ರಾಜಕೀಯದಲ್ಲಿ ಮುಳುಗಿದ ಮನಸಿಗೆ ರಾಜಯೋಗ ಕಾಣುವುದಿಲ್ಲ

Must Read

- Advertisement -

“ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವಂತೆ ವೇದ ಕಾಲದಲ್ಲಿದ್ದ ಸಮಾಜ ಇಂದಿಲ್ಲ ಆದರೆ ಗಾದೆ ಮಾತಿನ ಸತ್ಯದ ಅನುಭವಗಳು ಮಾನವನಿಗೆ ಚೆನ್ನಾಗಿ ಅರಿವಿಗೆ ಬರುತ್ತಿದೆ.

ಹಾಗಾದರೆ ಗಾದೆಯೇ ದೊಡ್ಡದೆ? ವೇದ ಬೇಡವೆ? ವೇದಗಳಲ್ಲಿ ಅಡಗಿರುವ ಆಧ್ಯಾತ್ಮ ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಗಾದೆಯೊಳಗಿನ ಸತ್ಯವನ್ನು ಅರ್ಥ ಮಾಡಿಕೊಂಡು ವೇದ ಪುರಾಣಗಳ ಕಡೆಗೆ ನಡೆಯುವುದೇ ಉತ್ತಮ.

ಸಾಮಾನ್ಯಜ್ಞಾನದಿಂದ ವಿಶೇಷ ಜ್ಞಾನ ಬೆಳೆದಾಗಲೆ  ಮಹಾಜ್ಞಾನವಾಗೋದು. ಒಂದೊಂದು ಮೆಟ್ಟಿಲಲ್ಲಿ ನಿಂತು ಮೇಲೆ ಹತ್ತಿದಾಗಲೆ ಕೆಳಗಿನ ಮೆಟ್ಟಿಲು ನೆನಪಿನಲ್ಲಿರೋದು. ಮೆಟ್ಟಿಲು ಹತ್ತದೆ ಕೆಳಗೆ ನಿಂತು ಮೇಲೆ ನೋಡೋದರಿಂದ ಸಾಧನೆಯಾಗೋದಿಲ್ಲ.

- Advertisement -

ಹಿಂದಿನವರು ಹೇಳಿದ್ದಾರೆ, ಬರೆದಿದ್ದಾರೆ, ಮಾಡಿದ್ದಾರೆ,ನಡೆದಿದ್ದಾರೆ ಎನ್ನುವುದು ವೇದ, ಹಿಂದಿನವರು ಅನುಭವಿಸಿದ್ದಾರೆ ಎನ್ನುವುದು ಗಾದೆ. ಅನುಭವ ಜ್ಞಾನವಿಲ್ಲದೆ ಕಾಲ ಬದಲಾದರೂ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದೆ ಓದಿ ಇದೇ ಸತ್ಯ ಎನ್ನುವುದರಿಂದ ಸಾಮಾನ್ಯಜ್ಞಾನಕ್ಕೆ ಬೆಲೆಯಿರೋದಿಲ್ಲ.

ಸಾಮಾನ್ಯರನ್ನು ಆಳೋದರಲ್ಲಿಯೂ ಧರ್ಮವಿರೋದಿಲ್ಲ. ಈ ಮಾತನ್ನು ಎಷ್ಟೋ ಸಮಾಜ ಸುಧಾರಕರು, ಸೇವಕರು, ದೇಶಭಕ್ತರು ಹೇಳಿಕೊಂಡೇ ಮುಂದೆ ಬಂದಿದ್ದಾರೆ. ಆದರೂ ಭಾರತೀಯರು ಮಾತ್ರ ನಾನಿರೋದೆ ಹೀಗೆ ಎಂದು ಒಂದೆ ಕಡೆ ಇದ್ದು ಚೌಕಟ್ಟಿನಲ್ಲಿ ತಾನೇ ಬಂಧಿಗಳಾದರೆ ಹೊರಗಿನ ಸತ್ಯ ಅರ್ಥ ವಾಗದೆ ಸತ್ಯ ಹಿಂದುಳಿಯುತ್ತದೆ.

ಈಗ ಪರಕೀಯರಿಗೆ ನಾವೇ ಮಣೆಹಾಕಿ ಸ್ವಾಗತ ಮಾಡಿ,ನಮ್ಮವರ ಸತ್ಯವನ್ನು ತಿರಸ್ಕರಿಸಿ ವಿದೇಶಕ್ಕೆ ಹೋಗುವಂತೆ ಮಾಡಿರೋದಕ್ಕೆ ಕಾರಣ ನಮ್ಮದೇ ಆದ ಸ್ವಾರ್ಥ ಅಹಂಕಾರದ ಸಹಕಾರ. ರಾಜಕೀಯದಲ್ಲಿ ಮುಳುಗಿದ ಮನಸ್ಸಿಗೆ ಒಳಗಿದ್ದ ರಾಜಯೋಗ ಕಾಣೋದಿಲ್ಲ.

- Advertisement -

ಶಾಸ್ತ್ರ ಗಳಲ್ಲಿ ಅಡಗಿದ್ದ ಸತ್ವ,ಸತ್ಯವನ್ನು ಆಚರಣೆಯ ಮೂಲಕ ಅರ್ಥ ಮಾಡಿಕೊಳ್ಳಲೂ ನಮ್ಮಲ್ಲಿ ಸತ್ಯ ಸತ್ವದ ನಂಬಿಕೆ,ವಿಶ್ವಾಸ,ಭಕ್ತಿ, ಶ್ರದ್ದೆಯಿರಬೇಕು.ಅದಿಲ್ಲದೆ ಯಾರೋ ಹೇಳಿದ್ದಾರೆಂದು ನಡೆಸುತ್ತಾ ಭೌತಿಕಾಸಕ್ತಿ ಬೆಳೆದಂತೆಲ್ಲಾ ಶಾಸ್ತ್ರಪುರಾಣಗಳು ವ್ಯವಹಾರಕ್ಕೆ ಬಳಕೆಯಾದವು.

ವ್ಯವಹಾರದಿಂದ ಹಣ,ಅಧಿಕಾರ,ಸ್ಥಾನಮಾನಗಳು ಹೆಚ್ಚಾಗಿ ಜನಸಾಮಾನ್ಯರ ಜ್ಞಾನ ಹಿಂದುಳಿಯಿತು. ಈಗ ಸಮಾಜದಲ್ಲಿ ರೋಗ ಹೆಚ್ಚಾಗಿ ವಿಜ್ಞಾನದಿಂದ ಶಸ್ತ್ರ ಚಿಕಿತ್ಸೆ ಬೆಳೆದಿದೆ. ವೇದ ಶಾಸ್ತ್ರ ಚಿಕಿತ್ಸೆ ಹಿಂದುಳಿದಿದೆ. ಕಾಲದ ಪ್ರಭಾವವೆನ್ನಬಹುದು.

ಆದರೆ ಜೀವವೇ ಎಲ್ಲವನ್ನೂ ಅನುಭವಿಸುವಾಗ ಕಾಲದಲ್ಲಿ ತಲೆ ಹಾಗು ಕಾಲು ಒಂದೆ ಸಮನಾಗಿರೋದು ಅಗತ್ಯವಿತ್ತು. ತಲೆಗೆ ಕೊಡುವ ಗೌರವ ಕಾಲಿಗೆ ಕೊಡದಿದ್ದರೆ ಮುಂದೆ ನಡೆಯೋದಿಲ್ಲವಲ್ಲ. ಬುದ್ದಿವಂತಿಕೆ ಇರಬೇಕು ಹೃದಯವಂತಿಕೆ ಬಹುಮುಖ್ಯ.

ಶ್ರೀಮಂತಿಕೆಯನ್ನು ಹೃದಯದಿಂದ ಅಳೆಯುವುದೇ ಜ್ಞಾನ ಹಠಯೋಗಿಗಳಿಗೆ ಸ್ವತಂತ್ರ ಜ್ಞಾನವಿದ್ದ ಕಾರಣ. ಆಧ್ಯಾತ್ಮ ಸಾಧನೆ ಸಾಧ್ಯವಾಯಿತು. ಆದರೆ, ಈಗಿನ ಪ್ರಜಾಪ್ರಭುತ್ವ ನಡೆದಿರೋದೆ ಪ್ರಜೆಗಳ ಸಹಕಾರದಲ್ಲಿ ಯೋಗಿಗಳು ಸಂನ್ಯಾಸಿಗಳು ಜನಬಲ ಹಣಬಲವಿಲ್ಲದೆ ಸಾಧನೆ ಮಾಡಲು ಕಷ್ಟವಾಗಿರುವಾಗ ಋಣಮುಕ್ತರಾಗಲು ಸಾಮಾನ್ಯಜ್ಞಾನದ ಅಗತ್ಯವಿದೆ. ಕೆಳಗಿನಿಂದ ಮೇಲಕ್ಕೆ ಹೋಗಬಹುದು.

ಮೇಲಿನಿಂದ ಕೆಳಕ್ಕೆ ಬೀಳಲೂಬಹುದು. ಎಚ್ಚರಿಕೆಯಿಂದ ಹೆಜ್ಜೆ ಹಾಕುವುದಕ್ಕೂ ನಮ್ಮಲ್ಲಿ ಒಗ್ಗಟ್ಟು ಇರಬೇಕಿದೆ.ಪ್ರಜೆಗಳ ಒಗ್ಗಟ್ಟು ಸತ್ಯ ಧರ್ಮ,ದೇಶದ ಪರವಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ. ವಿದೇಶದ ಪರ

ಇದ್ದರೆ ರೋಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗುತ್ತದೆ. ದೇಹವೇ ದೇಗುಲವಾಗಿದ್ದನ್ನು ರೋಗದ ಗೂಡಾಗಿಸೋದು ಪ್ರಗತಿ ಎನ್ನಬಹುದೆ? ಯಾರದ್ದೋ ಮೆದುಳು ನಿಷ್ಕ್ರಿಯ ಎಂದು ಅವರ ಉಳಿದ ಭಾಗವನ್ನು ಬಳಸಿದರೆ ಆತ್ಮಕ್ಕೆ ಶಾಂತಿ,ತೃಪ್ತಿ, ಮುಕ್ತಿ ಸಿಗುವುದೆ? ಆಧ್ಯಾತ್ಮ ಚಿಂತಕರು ಇದಕ್ಕೆ ಉತ್ತರ ನೀಡಬೇಕಾಗಿ ವಿನಂತಿ.

ಕೆಲವು ವಿಪರೀತ ವೈಜ್ಞಾನಿಕ ಸಂಶೋಧನೆಗಳು ಆತ್ಮಹತ್ಯೆಯ ರೂಪ ಪಡೆದಿರೋದು ಭೂಮಿಯ ಹೆಚ್ಚು ಹೆಚ್ಚು ಸಮಸ್ಯೆಗಳಿಗೆ ಕಾರಣವಾಗೋದಿಲ್ಲವೆ? ಭೂಮಿ ಮೇಲಿರುವ ಸಣ್ಣ ಅಣು ಇಡೀ ಮನುಕುಲಕ್ಕೆ ಸವಾಲಾಗಿ ನಿಂತು ನಿನ್ನ ನೀ ತಿಳಿದು ನಡೆ ಎಂದರೂ ಸಾವಿನಲ್ಲಿಯೂ ಬುದ್ದಿವಂತಿಕೆ ಪ್ರದರ್ಶನ ಮಾಡಿ ವ್ಯವಹಾರಕ್ಕೆ ಇಳಿದರೆ ನಷ್ಟ ಯಾರಿಗೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group