ರಾಷ್ಟ್ರಕವಿ ಕುವೆಂಪು ಜನ್ಮದಿನ ವಿಶೇಷ ಕವನಗಳು

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ರಸಋಷಿ ಕುವೆಂಪು

ನೂರು ಮತದ ಹೊಟ್ಟು
ಗಾಳಿಗೆ ತೂರಿ
ಮನುಜಮತಕೆ ದಾರಿ
ತೋರಿ
ಎಲ್ಲ ಕುಬ್ಜತೆ ಯ ಎಲ್ಲೆಯನು
ಮೀರಿ
ಬೆಳೆದ ಚೇತನ ನೀವಾದಿರಿ.

ಕಾಡ ಹಾಡಿಗೆ ಕೊರಳಾದ
ಧೀಮಂತ
ಕಾವ್ಯ ನವರಸ ಧ್ವನಿಯ
ಭಾವಾತೀತ
ಸುಮ್ಮನಿರೆ ಸಲ್ಲುವಿರಿ
ಎದೆಯಾಳದಿ
ಮಾತನಾಡಲು ಜ್ಯೋತಿರ್ಲಿಂಗ
ಸಮಾನರು

ರಸಋಷಿ ಕುವೆಂಪು ಬರೆದ
ಪದ ಪದಗಳೆಲ್ಲ ನಿಜಸ್ವರೂಪ
ಬೆಳಕೆ ಅಕ್ಷರಗಳಾಗಿ ಭುವಿಗೆ
ಬಂದು ಮಂಗಲವೆ ಮೈದಾಳಿ
ಮೂಡಿಹುದು
ಹೊರಗೆಲ್ಲ ತುಂಬಿ
ತುಳುಕುವದು
ಕಾಂತಿ
ಒಳಗೆ ಎದೆಯೊಳಗೆ ಮೇರೆ
ಮೀರಿದ ಶಾಂತಿ.

- Advertisement -

ಪುರೋಹಿತಶಾಹಿಯ ಬಣ
ಗರ್ವ ಮೆಟ್ಟಿ
ಶ್ರೀಸಾಮಾನ್ಯನಿಗೆ ಭಗವತ್ಪಥ
ಕಟ್ಟಿ
ತ್ರೇತಾಯುಗದ ಕುಬ್ಜೆ ಮಂಥರೆ
ಇರಲಿ
ಕಲಿಯುಗದ ಮಲ ಎತ್ತುವ
ಜಲಗಾರನಿರಲಿ
ಲೋಕದ ಪಾಲಿಗೆ ಯಾರಿಹರು
ತ್ಯಾಜ್ಯ
ನಿಮ್ಮ ಕರ ಸ್ಪರ್ಶಕೆ
ಅವರಾದರು
ಪೂಜ್ಯ.

ಸಾರಸ್ವತ ಲೋಕದಲ್ಲಿ
ಪಸರಿಸಿದ ಕಾವ್ಯ ರಸಋಷಿ
ಅಮರರಾದಿರಿ ನಾಡು
ನುಡಿಯಲಿ
ಕಾಲ ಮೀರಿದ ತಮಗೆ
ನುಡಿನಮನಗಳು.

ಪುಷ್ಪ ಮುರುಗೋಡ, ಗೋಕಾಕ್


🌷🌷 ಕವಿ ನಮನ 🌷🌷

ಕನ್ನಡದ ಕಂಪು ನೀವೇ ಕುವೆಂಪು
ನಿಮ್ಮ ನುಡಿಗಳೆನ್ನ ಕರ್ಣಕೆ ಇಂಪು
ಜ್ಞಾನಪೀಠದ ಗರಿಯ ಸೊಂಪು
ರಾಷ್ಟ್ರಕವಿ ಕೀರ್ತಿಯೇ ನಿಮಗೆ ತಂಪು

ಸಾಹಿತ್ಯ ಲೋಕದ ದಿಗ್ಗಜರಾಗಿ
ವಿಶ್ವ ಮಾನವತೆಯ ತಿಲಕವಾಗಿ
ಬಾಳ ತೋರಿದಿರಿ ಅನಿಕೇತನವಾಗಿ
ಕನ್ನಡದ ಮುದ್ದು ಕುವರನೇ ನೀವಾಗಿ

ಗಡಿ ಇರದ ಗುಡಿಯ ತೋರಿ
ಹೃದಯ ವೈಶಾಲ್ಯತೆಯ ಬೀರಿ
ಜಗ ಯುಗದಾಚೆಗೂ ದೂರಿ
ವಿಶ್ವ ಮಾನವ ಸಂದೇಶ ಸಾರಿ.

ಕನ್ನಡ ನೆಲದ ದಿವ್ಯ ಚೇತನ
ಸಾರ್ಥಕವಾಯ್ತು ನಿಮ್ಮ ಜನನ
ಕನ್ನಡಾಂಬೆಯ ಕೀರ್ತಿವೆತ್ತ ಮನ
ಚಿರಸ್ಥಾಯಿಯಾಗಿರಲಿ ನಿಮ್ಮತನ

ನಿಮಗಿದೋ ನನ್ನ ನಮನ..

✍🏻 ಮಹೇಂದ್ರ ಕುರ್ಡಿ


“ಕುವೆಂಪುರವರಿಗೊಂದು ನಮನ”

ಮಂಥರೆಯ ಮಮತೆಯ ಜಗಕೆ ತೋರಿದೆ ಪ್ರೀತಿ ತುಂಬಿದೆದೆಯ ಸುಳಿಯ ಅಳೆದು ತೂಗಿದೆ
ಊರ್ಮಿಯ ವಿರಹತಾಪರಹಿತ ಬದುಕಿನ ಮಹತಿಯ ಜಗಕೆ ತೋರಲು ಕನ್ನಡಿ ಹಿಡಿದೆ
ರಾವಣನ ರಕ್ಕಸ ಮನದೊಳಗೂ ಮಾನವೀಯತೆ ನೆಲೆಯ ಬಯಲು ವಿಸ್ತರವಾಗಿಹುದೆಂಬುದ ತೋರಿದೆ….
ಕವಿಗೆ ಕವಿ ತಲೆ ಬಾಗಿ ಸಹೃದಯದಿ ನಮಿಸಿದರೆ ಮಾತ್ರ ನಿಜದ ಕವಿಯ ಸೃಷ್ಟಿ
ಸಾಹಿತ್ಯದ ಯಾವ ವಿಭಾಗವನು ಬಿಟ್ಟಿಲ್ಲ ಮತ್ತು ಟೊಳ್ಳಾಗದೆ ಗಟ್ಟಿ ಬೀಜವಾಗಿ ಮೊಳೆತಿದೆ ನಿಮ್ಮ ದೃಷ್ಟಿ…
ತಾತ…
ನಿನ್ನ ಭಾವ ಅನುಭವ ಅನುಭಾವಗಳ ನಮಗಾಗಿ ಅಕ್ಷರದಿ ಮೂಡಿಸಿ ಕರುನಾಡ ಸಾಹಿತ್ಯವ ಉತ್ತುಂಗಕೇರಿಸಿದ ಜಗದ ಕವಿ
ಯಾವ ನಿರ್ಬಂಧವಿರದೆ ಭಾವತರಂಗಗಳ ವಿಶ್ವಕೆ ಪಸರಿಸಿದ ಶತಮಾನದ ಕವಿ…….
ನಿನಗೆ ನನ್ನ ಪುಟ್ಟ ಅಕ್ಕರದ ನಮನ

ರವಿ ಬಾಣಾವರ


ಜಗದ ಕವಿ ಯುಗದ ಕವಿ

ಜಗದ ಕವಿಗಳು ಯುಗದ ಕವಿಗಳು
ನಮ್ಮ ಹೆಮ್ಮೆಯ ಕುವೆಂಪು
ನಗದ ಮನಸಿಗೆ ನಗುವವುಣಿಸಿದ
ಇವರೆ ಕಿಂದರ ಜೋಗಿಯು ||

ಮಲೆಯ ನಾಡಲಿ ಮದುವೆ ಮಗಳಿನ
ಪಾತ್ರ ರಚಿಸಿದ ಕರ್ತೃವು
ನೆನಪು ಮೂಟೆಯ ಕಟ್ಟಿ ದೋಣಿಯ
ದಡವ ಸೇರಿದ ಯಾತ್ರಿಯು ||

ರಾಮ ಮಹಿಮೆಯ ಜಗಕೆದರ್ಶನ
ಮಾಡಿ ನಿಂತರು ರಸಋಷಿ
ಜ್ಞಾನ ಪೀಠವ ಪಡೆದ ಮೊದಲಿಗ
ನಾಡ ಕನ್ನಡ ಕಣ್ಮಣಿ ||

ಕೊಳಲು ಕೈಯಲಿ ಪಿಡಿದು ನುಡಿಸುತ
ಮನವ ಸೆಳೆಯುವ ಕಲೆಗಾರ
ಇತ್ತ ದಡದಿಂ ಅತ್ತ ದಡಕೂ
ಜನರ ಸಾಗಿಸೊ ಜಲಗಾರ ||

ಯುದ್ಧ ರಂಗದಿ ಪಾಂಚ ಜನ್ಯವ
ನುಡಿಸಿ ಜಯಿಸಿದ ರಣಧೀರ
ಮುದ್ದು ಪುಟ್ಟನು ಬೆರಳು ಕೊರಳಿಗೆ
ಲೋಕಕರ್ಪಿಸೆ ಕಲಿವೀರ ||

ರಾಷ್ಟ್ರಕವಿಗಳು ನಮ್ಮಕುಪ್ಪಳ್ಳಿ
ಕುಡಿಯು ಕನ್ನಡ ಕಳಸವು
ಶ್ರೇಷ್ಠ ಕವಿಗಳು ಸಿಹಿಯ ಮೊಗ್ಗೆಯ
ಬಾಡದಂತಹ ಕುಸುಮವು ||

ಶ್ರೀ_ಈರಪ್ಪ_ಬಿಜಲಿ

- Advertisement -
- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!