spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ‘ಬಸವ ಭಾವಪೂಜೆ’ ಕಾರ್ಯಕ್ರಮದ ಸಮಾರೋಪ ಮತ್ತು ಸತ್ಸಂಗ

Must Read

- Advertisement -

ಶರಣರ ವಚನಗಳಂತೆ ನಡೆದರೆ ಸಾಕು ಜೀವನ ಸಾರ್ಥಕ- ಅನಿಲ್ ಬೆನಕೆ.

ಬೆಳಗಾವಿ – ಶರಣರ ವಚನಗಳಂತೆ ನಾವು ಜೀವನದಲ್ಲಿ ನಡೆದರೆ ವಚನಗಳು ನಮ್ಮಲ್ಲಿ ಪಾಲನೆ ಆದರೆ ನಮ್ಮ ಜೀವನದ ಎಲ್ಲ ಕಷ್ಟಕಾರ್ಪಣ್ಯಗಳು ದೂರವಾಗಿ ಜೀವನ ಸಾರ್ಥಕತೆಯನ್ನು ಕಾಣುವುದು ಎಂದು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಯವರು ರವಿವಾರ ದಿ. 4ರಂದು ಲಿಂಗಾಯತ ಸಂಘಟನೆ ವತಿಯಿಂದ  ಬೆಳಗಾವಿ ನಗರದ ಫ. ಗು. ಹಳಕಟ್ಟಿ ಭವನದಲ್ಲಿಹಮ್ಮಿಕೊಂಡಿದ್ದ ಮನೆಮನಗಳಲ್ಲಿ ಗುರುಬಸವ ಭಾವಪೂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವದಿಸುತ್ತಾ ತತ್ವಗಳನ್ನು ನಾವು ಆಚರಿಸಿ ನಂತರ ಅನುಭಾವ ಹಂಚಬೇಕು. ನಮ್ಮನ್ನು ನಾವು ತಿದ್ದಿಕೊಂಡು ನಡೆ-ನುಡಿ ಒಂದಾಗಿದ್ದಾಗ  ಮಾತ್ರ ಸಮಾಜ ಒಳ್ಳೆಯತನದ ದಾರಿ ಹಿಡಿಯುತ್ತದೆ ಎಂದು ನುಡಿದರು.

- Advertisement -

ವಿಶೇಷ ಉಪನ್ಯಾಸ ನೀಡಿದ ಪ್ರವಚನಕಾರ ಮೃತ್ಯುಂಜಯ ಸ್ವಾಮಿ ಹಿರೇಮಠ ಮಾತನಾಡಿ ಇಂದು ವೈದ್ಯಕೀಯ ಲೋಕ, ಶಿಕ್ಷಣಲೋಕ,ರಾಜಕೀಯ ಕ್ಷೇತ್ರ ಎಲ್ಲವುಗಳು ಸಹ ತಮ್ಮ ಮೂಲತನವನ್ನು ಬಿಟ್ಟು ಬೇರೆ ದಾರಿ ಹಿಡಿಯುವತ್ತ ಸಾಗಿವೆ. ಮೋಸ, ಅನ್ಯಾಯ, ಅನೀತಿ  ಎಲ್ಲೆಡೆ ತೊಳಲಾಡುತ್ತಿದೆ. ಅದೇ ರೀತಿ ಧರ್ಮಗಳಲ್ಲೂ  ಸಹ ನಂಬಿಕೆ ಕಡಿಮೆಯಾಗುತ್ತಿದೆ ಇವೆಲ್ಲ ಹೋಗಲು ನಾವು ವಿಚಾರವಂತರಾಗಿ ಬದುಕು ಸಾಗಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರಾವಣ ಮಾಸ ಪರ್ಯಂತ ಗುರುಬಸವ ಭಾವಪೂಜೆ ತಮ್ಮ ಮನೆಗಳಲ್ಲಿ ನಡೆಸಿಕೊಟ್ಟ ಎಲ್ಲಾ ಶರಣರನ್ನು ಮತ್ತು ತಿಂಗಳ ಪರ್ಯಂತ ಉಪನ್ಯಾಸ ನಡೆಸಿಕೊಟ್ಟ  ತೇಜಸ್ವಿನಿ ಹಿರೇಮಠ, ಬಿ. ಬಿ. ಮಠಪತಿ, ಅಡಿವೇಶ  ಇಟಗಿ, ಬಿ ಹೆಚ್. ಮಾರದ, ಶಂಕರ ಗುಡಸ ಸೇರಿದಂತೆ ಸರ್ವರನ್ನು  ಗೌರವಿಸಲಾಯಿತು.

ಗೌರವ ಸ್ವೀಕರಿಸಿದ  ನಗರ ಸೇವಕ           ಹಣಮಂತ ಕೊಂಗಾಲಿ ಮಾತನಾಡಿ ನಿಜಕ್ಕೂ ಶ್ರಾವಣಮಾಸ ನಗರದಲ್ಲಿ ಮನೆ-ಮನಗಳಲ್ಲಿ ಮನಸ್ಸುಗಳನ್ನು ಸ್ವಚ್ಛಗೊಳಿಸಿ ನಮ್ಮ ಜೀವನವನ್ನು ಪಾವನಗೊಳಿಸಿದವು. ಧರ್ಮವನ್ನು ಪಾಲಿಸಿದರೆ ಧರ್ಮ ನಮ್ಮನ್ನು ಎತ್ತಿಹಿಡಿಯುತ್ತದೆ ಎಂದರು.

- Advertisement -

ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ ಶರಣ ಪರಂಪರೆ ಆಡಂಬರವಿಲ್ಲದ ಸರಳ ಪರಂಪರೆಯಾಗಿದೆ.  ಅಂತಹ ಸರಳ ಪರಂಪರೆಯನ್ನು ನಾವು ಪಾಲಿಸುತ್ತಾ ತತ್ವಗಳನ್ನು ಅಳವಡಿಸಿಕೊಳ್ಳುತ್ತ ಮುಂದೆ ಸಾಗೋಣ ಎಂದರು.

ಕಾರ್ಯಕ್ರಮದಲ್ಲಿ ನಗರ ಸೇವಕರಾದ ರಾಜಶೇಖರ ಡೋಣಿ, ಮಾಜಿ ಮಹಾಪೌರ ಎನ್. ಬಿ ನಿರ್ವಾಣಿ, ರಮೇಶ ಕಳಸಣ್ಣವರ, ಸಂಗಮೇಶ  ಅರಳಿ , ಮಲ್ಲಿಕಾರ್ಜುನ ಸಿರಗುಪ್ಪಿ ಶೆಟ್ಟರ, ಶಶಿಭೂಷಣ ಪಾಟೀಲ, ಪ್ರೇಮಾ ಚಿನಿವಾಲರ,ಆಶಾ ಸಂಸುದ್ದಿ, ಶೈಲಾ ಹಿರೇಮಠ, ಜ್ಯೋತಿ ಬದಾಮಿ, ಎಂ. ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ,ಉಮೇಶ ಪಾಟೀಲ, ರಮೇಶ  ತುಬಚಿ ಸೇರಿದಂತೆ ಸಂಘಟನೆಯ ಸದಸ್ಯರು ಶರಣ-ಶರಣೆಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸುರೇಶ ನರಗುಂದ ಸ್ವಾಗತಿಸಿದರು ಸತೀಶ ಪಾಟೀಲ ಮತ್ತು ಕಮಲಾ ಗಣಾಚಾರಿ ಕಾರ್ಯಕ್ರಮ ನಡೆಸಿಕೊಟ್ಟರು. ವಚನ ಮಂಗಲ ದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group