spot_img
spot_img

ವ್ಯಾಕ್ಸಿನ್ ಜನಕ ಲೂಯಿ ಪಾಶ್ಚರ್ ಜನ್ಮದಿನ ಇಂದು

Must Read

- Advertisement -

ಕರೋನ ಮಹಾಮಾರಿ ಇಡೀ ಜಗತ್ತನ್ನೆ  ಆವರಿಸಿ ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.  ಇಂತಹ  ಸಂದರ್ಭದಲ್ಲಿ ಮಹಾನ್ ಮಾನವತಾವಾದಿ ವಿಜ್ಞಾನಿ ಲೂಯಿ ಪಾಶ್ಚರ್ ರವರ  ಜನ್ಮದಿನ ಬಂದಿದೆ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಮಹಾಮಾರಿ ರೋಗಗಳಿಗೆ  ವ್ಯಾಕ್ಸಿನ್ ಕಂಡುಹಿಡಿದು ಜನತೆಯ ಪ್ರಾಣಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ರೇಬಿಸ್, ಆಂಥ್ರಾಕ್ಸ್ ರೋಗಕ್ಕೆ ಚುಚ್ಚುಮದ್ದನ್ನು ತಯಾರಿಸಿ ವ್ಯಾಕ್ಸಿನ್ ನೀಡುವುದನ್ನು ಜಗತ್ತಿಗೆ ಪರಿಚಯಿಸಿದ್ದು ಪಾಶ್ಚರ್. ಹಾಲು ಮೊಸರಾಗಲು, ಆಹಾರ ಪದಾರ್ಥಗಳು ಕೆಡುವುದು, ಸೋಂಕು ರೋಗಗಳು ಹರಡುವುದು ಇನ್ನಿತರ ಕ್ರಿಯೆಗಳಿಗೆ ಸೂಕ್ಷ್ಮಾಣು ಜೀವಿಗಳು ಕಾರಣ ಎಂದು ತಿಳಿಸಿಕೊಟ್ಟವರೂ ಇವರೆ.

ಇವರನ್ನು ನೆನೆಯುವುದು ನಮ್ಮ ಕರ್ತವ್ಯ. ಇವರ ತ್ಯಾಗಮಯ ಜೀವನ ಆದರ್ಶಗಳನ್ನು  ನಾವುಗಳು ಅಳಡಿಸಿಕೊಳ್ಳುವುದು ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ. ಈ ನಿಟ್ಟಿನಲ್ಲಿ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ಮನೆ ಮನೆಗಳಲ್ಲೂ ನೆನಪಿಸಿಕೊಳ್ಳುವ ಕಾರ್ಯಕ್ರಮವಇಂದು ಹಮ್ಮಿಕೊಳ್ಳಲಾಗಿದೆ.

- Advertisement -

ವಿಜ್ಞಾನಕ್ಕೆ ಗಡಿ ಇಲ್ಲ. ಅದು ಸೂರ್ಯನ ಕಿರಣಗಳಂತೆ ತೀಕ್ಷ್ಣತೆಯಿಂದ ಮೂಲೆಮೂಲೆಗೂ ಪಸರಿಸಿ ಸಮುದ್ರದ ಹಾಗೆ ವಿಶಾಲವಾಗಿ ಹರಡುತ್ತದೆ. ಅದೇ ರೀತಿ ವಿಜ್ಞಾನದ ಅನ್ವೇಷಣೆಗಳು ಯಾರಿಂದಲೋ,  ಎಲ್ಲಿಂದಲೋ ಬರಬಹುದು ಹೀಗೆ ನೋಡಿದಾಗ ಫ್ರೆಂಚ್  ದೇಶದ ಒಬ್ಬ ಚರ್ಮ

ಹದಮಾಡುವವನ ಮಗನಾಗಿ 1822,  ಡಿಸೆಂಬರ್ 27ರಂದು ಹುಟ್ಟಿದ ಲೂಯಿ ಪಾಶ್ಚರ್ ಇಂದು ಜಗತ್ತಿನ ವೈಜ್ಞಾನಿಕ ಅನ್ವೇಷಣೆಗಳಿಗೆ  ಅವರ ಕೊಡುಗೆಗಳು ಬುನಾದಿಯಾಗಿವೆ. ಪಾಶ್ಚರ್  ರವರು ತಮ್ಮ ಬಾಲ್ಯದಲ್ಲಿಯೇ ರಸಾಯನ ಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ಲೂಯಿಸ್ ಎಲ್ಲೇ ಇರಲಿ ತಮ್ಮ ಸುತ್ತಮುತ್ತಲಿನ  ಜನರಿಗೆ ಆಗುತ್ತಿರುವ ಕಷ್ಟದ ಬಗ್ಗೆ ಗಮನ ಕೊಟ್ಟು ಅದನ್ನು ನಿವಾರಿಸುವ ಬಗ್ಗೆ ಯೋಚಿಸುತ್ತಿದ್ದರು. ಮಹಾನ್ ವ್ಯಕ್ತಿಗಳೇ ಹಾಗೆ ತಮ್ಮ ಅತ್ಯಂತ ಬಡತನ, ಕಷ್ಟದ ಪರಿಸ್ಥಿತಿಯಲ್ಲೂ ಬೇರೆಯವರ ಏಳಿಗೆಯನ್ನು ಬಯಸುವವರು.

ಅವರ ಅನ್ವೇಷಣೆಗಳನ್ನು  ನೋಡಿದಾಗ ಮೊದಲನೆಯದಾಗಿ ಮಧ್ಯ,  ಬ್ರೆಡ್ ತಯಾರಿಸುವ ಕಾರ್ಖಾನೆಗಳಲ್ಲಿ ಆಗುತ್ತಿದ್ದ ತೊಂದರೆ ಬಗ್ಗೆ ಸಂಶೋಧನೆ ನಡೆಸಿದಾಗ ಸೂಕ್ಷ್ಮಾಣು ಜೀವಿಗಳ ಬಗ್ಗೆ ಅವರಿಗೆ ತಿಳಿಯಿತು.ಅವುಗಳು ಗಾಳಿಯಲ್ಲಿ ಹರಡುತ್ತಿರುವ ಮತ್ತು ಯಾರನ್ನು ಅಥವಾ ಯಾವುದನ್ನು ಬೇಕಾದರೂ ಸೋಂಕಿಸಬಹುದು ಎಂದು ತೋರಿಸಲು ಹಲವಾರು ಪ್ರಯೋಗಗಳನ್ನು ಸಾರ್ವಜನಿಕವಾಗಿ ಮಾಡಿತೋರಿಸಿದರು.

- Advertisement -

ಪಾಶ್ಚರ್ ಮಾಡಿದ ಮತ್ತೊಂದು ಸಂಶೋಧನೆ ಪಾಶ್ಚರೀಕರಣ ಮಧ್ಯ ಅಥವಾ  ಹಾಲನ್ನು 50 ಅಥವಾ 60 ಡಿಗ್ರಿ ಸೆಂಟಿಗ್ರೇಡ್ ಕಾಯಿಸಿದಾಗ ಅದರಲ್ಲಿ ಕ್ರಿಮಿ ನಾಶವಾಗಿ, ಮಧ್ಯ  ಅಥವಾ ಹಾಲು ಕೆಡುವುದಿಲ್ಲ ಹೇಗೆ ಪಾಶ್ಚರ್ ಕ್ರಿಮಿಗಳ ಅಧ್ಯಯನ ಮಾಡಿ  ಉದ್ಯಮಕ್ಕೆ ಹಾನಿಗಳ ಬಗ್ಗೆ ತಿಳಿಯಲು ಮೂರು ವರ್ಷ ಕಾಲ ದುಡಿದರು.

ಪ್ಯಾಶ್ಚರ್ ಮನುಷ್ಯರಿಗೆ ಹಾಗೂ ದನಕರುಗಳಿಗೆ, ಮೇಕೆಗಳಿಗೆ ಬರುವಂತ ರೋಗಕ್ಕೆ ಮದ್ದು ಕಂಡು ಹಿಡಿದು ಅದರಲ್ಲೂ ಯಶಸ್ವಿ ಕಂಡರು ಅಚ್ಚರಿಯ ಅನ್ವೇಷಣೆ ಮಾಡಿ ಎಲ್ಲರ ಮನಗೆದ್ದರು.ಮಹಾಮಾರಿ ಯಾದ ರೇಬಿಸ್ ರೋಗಕ್ಕೆ ಲೂಯಿ ಪಾಶ್ಚರ್ ಅವರು ಲಸಿಕೆಯನ್ನು ಕಂಡುಹಿಡಿದು ರಾಸಾಯನಿಕ ವಿಜ್ಞಾನದಲ್ಲಿ ಆವಿಷ್ಕಾರ ಮಾಡಿದ್ದಾರೆ.

ಎಮ್ ವೈ ಮೆಣಸಿನಕಾಯಿ

ಬೆಳಗಾವಿ

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group