ಸೈಕಲ್ ಮೇಲೆಯೇ ದೇಶ ಸುತ್ತುವ ನಂದಿ

0
226

ಬೆಂಗಳೂರು –  ಸೈಕಲ್ ನಲ್ಲಿಯೇ ದೇಶದ , 27  ರಾಜ್ಯ ಸುತ್ತುತ್ತಾ  ದೇಶದಲ್ಲಿ  ಸೈಕಲ್ ಸವಾರಿ ಮಾಡಿ ಪರಿಸರ ಉಳಿಸಿ ಎಂಬ ಅಭಿಯಾನ ಮಾಡುತ್ತಾ ಕಳೆದ ಒಂದೂವರೆ ವರ್ಷದಿಂದ  26 ವರ್ಷದ ನಂದಿ  ಎಂಬ  ಯುವಕ , ತನ್ನ ಸೈಕಲ್ ಗೆ ಭಾರತದ  ತ್ರಿವರ್ಣ ಧ್ವಜ ವನ್ನು  ಕಟ್ಟಿ ಕೊಂಡು ಪರ್ಯಟನೆ ಬೆಳೆಸಿದ್ದು ಕರ್ನಾಟಕ ದ ಬೆಂಗಳೂರಿಗೆ ಆಗಮಿಸಿದ್ದಾನೆ.

ಇಲ್ಲಿಂದ ಆಂಧ್ರಪ್ರದೇಶ ಕ್ಕೆ ಪ್ರಯಾಣ ಮಾಡಿ ಅಲ್ಲಿಂದ ವಿಶಾಖಾ ಪಟ್ಟಣಕ್ಕೆ ಹೋಗಿ ಅಲ್ಲಿಂದ ತನ್ನ ಮೂಲವಾದ ಓರಿಸ್ಸಾಕ್ಕೆ ಪಯಣಿಸಿದರೆ ದೇಶದ 28  ರಾಜ್ಯಗಳನ್ನು ಸೈಕಲ್  ಸವಾರಿ ಮೂಲಕ  ಪೂರೈಸುವುದಾಗಿ ಹೇಳುತ್ತಾರೆ ನಂದಿ. ಇವರ ತಂದೆಯ ಹೆಸರು ತಪುಧಾನ್ ಹಾಗೂ ತಾಯಿಯ ಹೆಸರು ದ್ರೌಪದಿ

ನಂದಿಯದು ಸೈಕಲ್ ತುಳಿಯುವುದೇ ಉದ್ಯೋಗ  ಎನ್ನುತ್ತಾರೆ, ಅದರಲ್ಲಿಯೇ  ಭಾರತಕ್ಕಾಗಿ ಸೈಕಲ್ ಸವಾರಿ ಮಾಡುವುದೇ ನನ್ನ ಗುರಿ ಎನ್ನುತ್ತಾರೆ ಈ ಮೂಲಕ ದೇಶದ ವಿವಿಧ ಜನರನ್ನು, ವಿವಿಧ ಸಂಸ್ಕೃತಿ ಯನ್ನು ಅರಿಯುವ ಜೊತೆಗೆ   ಸೈಕಲ್ ಸವಾರಿ ಮಾಡುತ್ತಾ ದೇಶಕ್ಕಾಗಿ ಸಾಧನೆ ಮಾಡುವುದೇ ನನ್ನ ಗುರಿ ಎನ್ನುತ್ತಾರೆ ನಂದಿ.

ಓರಿಸ್ಸಾ, ಚತ್ತಿಸ್ ಗಢ, ಜಾರ್ಕಂಡ್ , ಪಶ್ಚಿಮ ಬಂಗಾಳ, ಆಸ್ಸಾಂ, ತ್ರಿಪುರ,  ಮಿಜೋರಾಮ್,  ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ, ಬಿಹಾರ,  ಉತ್ತರ ಪ್ರದೇಶ, ಉತ್ತರಾಖಂಡ್,  ಹಿಮಾಚಲ ಪ್ರದೇಶ, ಜಮ್ಮು –  ಕಾಶ್ಮೀರ , ಪಂಜಾಬ್, ಹರಿಯಾಣ, ದೆಹಲಿ, ರಾಜಸ್ತಾನ್, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡು, ಹೀಗೆ ಎಲ್ಲ ಸುತ್ತಾಡಿ ಈಗ ಕರ್ನಾಟಕ ಮುಗಿಸಿ ಆಂಧ್ರಪ್ರದೇಶ ಕ್ಕೆ ಹೋಗಿ ಅಲ್ಲಿಂದ  ಒಡಿಸ್ಸಾ ಕ್ಕೆ ಹೋಗಿ ಸೈಕಲ್ ಸವಾರಿ   ಅಭಿಯಾನ ಮುಗಿಸುವ ಬಗ್ಗೆ ಹೇಳುತ್ತಾರೆ ನಂದಿ.

ಅವರ ಒಂದು ಯುಟ್ಯೂಬ್ ಚಾನಲ್ ಅಲ್ಲಿ  ಅವರ ಸೈಕಲ್ ಸವಾರಿ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ಸೈಕಲ್ ಸವಾರಿ ಮಾಡುತ್ತಾ ಇವರು ಪೆಟ್ರೋಲ್ ಬಂಕ್, ಅಥವಾ ಪೊಲೀಸ್ ಸ್ಟೇಷನ್, ಅಥವಾ ಆಶ್ರಮ ಅಥವಾ ದೇವಾಲಯ ಗಳಲ್ಲಿ  ರಾತ್ರಿ ಉಳಿಯುತ್ತಾರೆ. ಇವರು ಮನೆ ಬಿಟ್ಟು ಕಳೆದ  ಒಂದೂವರೆ ವರ್ಷ  ದಿಂದ ಇವರು ಸೈಕಲ್ ಸವಾರಿ ಮಾಡುತ್ತಾ  ಇದ್ದಾರೆ. ದೇಶದಲ್ಲಿ ಶಾಂತಿ ಸ್ಥಾಪನೆಗೆ ನಂದಿಯವರ ಪರ್ಯಟನೆ ಯಶಸ್ವಿಯಾಗಿ ಮುಂದಯವರೆಯಲಿ ಎಂದು ಪತ್ರಿಕೆ ಹಾರೈಸುತ್ತದೆ

ಚಿತ್ರ :ಮಾಹಿತಿ : 
ತೀರ್ಥಹಳ್ಳಿ ಅನಂತ ಕಲ್ಲಾಪುರ