ಯಾವ ಕುಲಜಾತಿ ಮತಪಂಥಧರ್ಮಗಳಲ್ಲಿ
ಯಾವೂರು ತಾಯ್ನಾಡು ದೇಶದಲ್ಲಿ
ಹುಟ್ಟಿದ್ದರೇನಾಯ್ತು ಸರಹದ್ದುಗಳ ದಾಟಿ
ವಿಶ್ವಮಾನವನಾಗು – ಎಮ್ಮೆತಮ್ಮ
ಶಬ್ಧಾರ್ಥ
ಸರಹದ್ದು = ಮೇರೆ, ಗಡಿ
ತಾತ್ಪರ್ಯ
ಯವುದೇ ಕುಲದಲ್ಲಿ ಜನಿಸಿರಲಿ, ಯಾವುದೇ ಜಾತಿಯಲ್ಲಿ, ಜನಿಸಿರಲಿ, ಯಾವುದೇ ಮತಪಂಥದಲ್ಲಿ ಜನಿಸಿರಲಿ,
ಯಾವುದೇ ಧರ್ಮದಲ್ಲಿ ಜನಿಸಿರಲಿ, ಯವುದೇ ಊರಿನಲ್ಲಿ
ಜನಿಸಿರಲಿ, ಯಾವುದೇ ನಾಡಿನಲ್ಲಿ ಜನಿಸಿರಲಿ ಮತ್ತು
ಯಾವುದೇ ದೇಶದಲ್ಲಿ ಜನಿಸಿರಲಿ ಅವುಗಳಿಗೆ ಅಂಟಿಕೊಳ್ಳದೆ
ಅವುಗಳನ್ನು ಮೀರಿ ಬೆಳೆದು ಎಲ್ಲರನ್ನು ಪ್ರೀತಿಸುವ ವಿಶ್ವಮಾನವನಾಗಬೇಕು. ಜಗತ್ತಿನಲ್ಲಿರುವ ಎಲ್ಲರೂ
ನಮ್ಮವರು ಎಂಬ ಭಾವನೆಯಿರಬೇಕು. ಮಹಾತ್ಮರೆಲ್ಲ
ಹೀಗೆ ವಿಶ್ವದ ಜನರೆಲ್ಲರನ್ನು ನಮ್ಮವರೆಂದು ಭಾವಿಸಿ
ಆತ್ಮೀಯತೆಯಿಂದ ಬಾಳಿದರು. ಅವರಿಗೆ ಕುಲಜಾತಿ, ವರ್ಗವರ್ಣ ಮತಧರ್ಮ ದೇಶಭಾಷೆಗಿಂತ ಮಾನವತೆ ಮುಖ್ಯ. ಎಲ್ಲರಲ್ಲಿ ದೇವ ಇದ್ದಾನೆಂದು ಅವರನ್ನು ಪ್ರೀತಿಸಿ ಮಾನವತೆ ಮೆರೆದರು. ಮದರಥೆರಸಾ ಪರದೇಶವಳಾದರು
ಭಾರತದಲ್ಲಿ ಬಂದು ವೃದ್ಧರ, ಮಹಿಳೆಯರ, ಬಾಲಕರ ಬಡವರ ಮತ್ತು ರೋಗಿಗಳಲ್ಲಿ ಏಸು ಸ್ವಾಮಿಯಿದ್ದಾನೆಂದು ಅವರನ್ನು ಸಾಂತ್ವನಗೊಳಿಸಿ ಪ್ರೀತಿಯಿಂದ ಸೇವೆ ಮಾಡಿ ಸಂತಳಾಗಿ ಬಾಳಿದಳು. ಅವಳ ಸೇವೆಯನ್ನು ಪರಿಗಣಿಸಿ ನೋಬಲ್ ಪಾರಿತೋಷಕ ಪ್ರದಾನಮಾಡಿ ಗೌರವಿಸಿದರು. ಇಂಥ ಸಂತ ಮಹಾಂತರಂತೆ ನಾವು ವಿಶ್ವಮಾನವರಾಗಿ ಸಕಲ ಜೀವಿಗಳಿಗೆ ಲೇಸು ಬಯಸಬೇಕು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990