- Advertisement -
ವಚನಗಳೆ ಬಸವಣ್ಣನೆನಗೆ
ವಚನಗಳೆ ಬಸವಣ್ಣನೆನಗೆ
ವಚನಗಳು ಬುದ್ಧ ಮಂತ್ರ
ವಚನಗಳೆ ಶಾಂತಿ ಸಹನೆ
ವಚನಗಳು ದಿಟ್ಟ ನುಡಿಯು
ವಚನಗಳೆ ಪ್ರಮಾಣವೆನಗೆ
ವಚನ ಲಿಂಗ ಜಂಗಮವು
ವಚನ ಶುದ್ದ ಪ್ರಸಾದವೆನಗೆ
ವಚನ ಅನುಭಾವ ಅನುಭೂತಿ
ವಚನ ದಿವ್ಯ ದರ್ಶನವು
ವಚನ ಆತ್ಮ ಶೋಧನವು
ವಚನವೇ ಸತ್ಯ ಮಾಟವು
ವಚನ ನಿತ್ಯ ಕೂಟವು
ವಚನ ಹಗಲು ಇರುಳುವೆನಗೆ
ವಚನ ವರುಷ ಹರುಷವು
ವಚನ ನನಗೆ ಬಾಳು ಬದುಕು
ವಚನ ನನ್ನ ಉಸಿರು
ವಚನ ಕುರಾನ ಬೈಬಲ್
ವಚನ ಗ್ರಂಥ ಸಾಹೇಬ್
ವಚನ ಜೈನ ದೀಪ್ತಿಮಂತ್ರ
ವಚನ ಶರಣ ಸ್ವತಂತ್ರವು
——————
ಡಾ. ಶಶಿಕಾಂತ ಪಟ್ಟಣ ರಾಮದುರ್ಗ -ಪೂನಾ