ಜೀವನ
ಅಪ್ಪಿಕೋ ಕನಸುಗಳ
ಮುತ್ತಿಕ್ಕು ಭರವಸೆ
ಕೈ ಹಿಡಿದು ನಡೆ
ಬರುವ ನಾಳೆಯ
ಬದುಕು
ನೆಡು ದೂರ ದೃಷ್ಟಿ
ಕ್ರಮಿಸು ಮೈಲು ದಾರಿ
ಶ್ರಮ ನಿನ್ನ ಬಂಧು
ಕಾಡು ಗಿಡ ಮರ
ಒಂಟಿ ಪಯಣ
ಇಲ್ಲ ಶೋಕ ಬಿಕ್ಕಳಿಕೆ
ಸುಂದರ ವನ
ಶುಕ ಪಿಕಗಳ ಗಾನ
ಸಾವು ನೋವು ಮರೆತು
ಇರುವುದೆ ಜೀವನ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

© Times Of Karnataka | All rights reserved.
