ಶ್ರೀ ಮಹಾ0ತ ಲಿಂಗ ಶಿವಾಚಾರ್ಯರ ‘ನಿಜ ವೀರಶೈವ ಬಸವೇಶ್ವರ’ ಶೀರ್ಷಿಕೆ ಲೇಖನ ಅತ್ಯಂತ ಬಾಲಿಶ ಹಾಗು ಸತ್ಯಕ್ಕೆ ದೂರವಾದದ್ದು.
1 ವೀರಶೈವ ಪದ ಮೊಟ್ಟ ಮೊದಲಿಗೆ ಬಂದದ್ದು 1368 ರಲ್ಲಿ ಭೀಮ ಕವಿ ಫಾಲಗುರಿಕೆ ಸೋಮನಾಥನ ‘ತೆಲುಗು ಬಸವ ಪುರಾಣವನ್ನು’ ಕನ್ನಡಕ್ಕೆ ಅನುವಾದಿಸುವಾಗ ವೀರ ಮಾಹೆಶ್ವರದ ಬದಲಾಗಿ ವೀರಶೈವ ಪದ ಬಳಸಿದ್ದಾನೆ
ಖೋಟಾ ವಚನಗಳಲ್ಲಿ ಬಸವೊತ್ತರ ಕಾಲದ ಶೈವವಾದಿಗಳು ವೀರಶೈವ ಪದ ಸೇರಿಸಿದ್ದಾರೆ.
ವಸ್ತು ಸ್ಥಿತಿ ಹೀಗಿರುವಾಗ ಅದನ್ನು ವಿರೋಧಿಸುವ ಭರದಲ್ಲಿ ರೇಣುಕಾಚಾರ್ಯರೆ ವೀರಶೈವ ಸ್ಥಾಪಕರು ಎಂದು ಹೇಳುವುದು ಕೂಡ ಅಕ್ಷಮ್ಯ ಅಪರಾಧ
ಲಿಂಗಾಯತರಿಗೂ ವೀರಶೈವರಿಗೂ ಯಾವುದೇ ಸಂಬಂಧವಿಲ್ಲ ಕೂಡಲ ಸಂಗಮ ಬಸವನ ಬಾಗೆವಾಡಿಯಲ್ಲಿ ಜಾತ ವೇದ ಮುನಿಯನ್ನು ಯಾರು ಪ್ರತಿ ಸ್ಥಾಪಿಸಿದರು.
ಪಂಚ ಪೀಠದವರಿಗೆ ಇಷ್ಟು ಸಾಕಾಗಿತ್ತು. ವೀರಶೈವರು ಲಿಂಗಾಯತ ಧರ್ಮದ ಭಾಗ ಎಂದು ಕಾನೂನು ರೀತಿಯಲ್ಲಿ ಒಪ್ಪಿ ಕೊಳ್ಳಬಹುದು. ಆದರೆ ತಾತ್ವಿಕವಾಗಿ ಅವರು ಬೇರೆ.
ಬಸವಣ್ಣನವರನ್ನು ಒಪ್ಪಿ ಕೊಳ್ಳುವವರು ಬಸವ ಧರ್ಮಿಗಳು ಬಸವಣ್ಣ ಗುರುವಿಲ್ಲದ ಗುಡ್ಡ
ಜಾತ ವೇದ ಮುನಿಯೊ ಅಥವಾ ಶಿವಾಚಾರ್ಯನೋ
ಚರ್ಚೆಯು ಅನಗತ್ಯ. ಹುರುಳಿಲ್ಲದ ವಿಷಯದಲ್ಲಿ
ಪಾಂಡಿತ್ಯ ಪ್ರದರ್ಶನ ಲಿಂಗಾಯತರು ಬಸವ ಭಕ್ತರು ಕೈ ಬಿಡಲಿ.
ಬಸವಣ್ಣ ಇಷ್ಟಲಿಂಗ ಅರಿವಿನ ಕುರುಹಿನ ಸ್ಥಾಪಕ
ಬೇರೆಯವರ ಕಡೆಯಿಂದ ದೀಕ್ಷೆ ಪಡೆದದ್ದು ಭ್ರಮೆ
ಮುಖ್ಯಮಂತ್ರಿಗಳು ಇಂತಹ ಹುರುಳಿಲ್ಲದ ವಾದ ಚರ್ಚೆಗೆ ವಿದಾಯ ಕೊನೆ ಹೇಳುವ ದೊಡ್ಡ ಅವಕಾಶ ಅಂದರೆ
ನ್ಯಾ. ನಾಗಮೊಹನ ದಾಸ ವರದಿ ಆಧಾರಿತ ಕೇಂದ್ರ ಸರಕಾರಕ್ಕೆ ಕರ್ನಾಟಕ ಸರಕಾರಿ ಶಿಫಾರಸ್ಸು ತಿರಸ್ಕಾರಕ್ಕೆ ಒಳ ಪಟ್ಟಿದೆ .ಅದನ್ನು ಈಗ ಮತ್ತೆ ಕಾನೂನು ತಜ್ಞರನ್ನು ಸಾಹಿತಿಗಳನ್ನು ಕರೆಸಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡುವಲ್ಲಿ ಕ್ರಿಯಾಶೀಲರಾಗಲು ಆಗ್ರಹ.
ಪೌರಾಣಿಕ ಕಲ್ಪನೆಯನ್ನೆ ಐತಿಹಾಸಿಕ ಸಂಗತಿ ಎಂದು ಸಾಧಿಸುವವರ ಜೊತೆಗೆ ಚರ್ಚೆ ಅನಗತ್ಯ
ಲಿಂಗಾಯತ ಒಂದು ಸಾರ್ವಕಾಲಿಕ ಸಮಾನತೆ ಸಾರುವ ಸ್ವತಂತ್ರ ಧರ್ಮ, ವೀರಶೈವ ಒಂದು ವೃತ
ನಮ್ಮವರು ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಅಡ್ಡ ಗೋಡೆ ಮೇಲೆ ದೀಪ ಇಡುವದನ್ನು ಮೊದಲು ಕೈ ಬಿಡಲಿ.
ಡಾ.ಶಶಿಕಾಂತ ಪಟ್ಟಣ ರಾಮದುರ್ಗ