ಕವನ

0
1207

..ವೃಕ್ಷ ಸಂದೇಶ….

ಬಾಳೆಂಬ ವಿಚಿತ್ರ ಸಂತೆಯಲಿ
ಭೀಕರ ಬಿರುಗಾಳಿ,ಭೂಕಂಪ,ಪ್ರವಾಹ
ನಿನ್ನನೆಂದೂ ಅಲುಗಿಸಲಾರವು
ನಿಲ್ಲು, ನೀ ಧೃಡವಾಗಿ ನಿಲ್ಲು !!!

ನಿನಗೆ ಅದೃಷ್ಟ ದೇವತೆಯ ಕಟಾಕ್ಷವಿದೆ,
ಧೃಡವಾಗಿ, ವಿಸ್ತರಿಸಿ,ಕೊಂಬೆ-ರೆಂಬೆಗಳ ಹರಡಿ
ನಿನ್ನದೇ ಸಾಮ್ರಾಜ್ಯದಲಿ ಸಂತಸದಿ ನಲಿಯುತ್ತಿದ್ದೀ,
ಹಸಿರಾಗಿ,ಪಕೃತಿಯ ಉಸಿರಾಗಿ ನಳನಳಿಸುತ್ತಿದ್ದೀ…..

ನಿನ್ನ ಕೊಂಬೆಗಳಲಿ ಸಾವಿರ ಪಕ್ಷಿಗಳು ಕುಳಿತು,
‘ಕುಹು-ಕುಹು’ ಸಂಗೀತ ಹಾಡಿ ನಲಿಯಲಿ;
ನವಿಲು ನರ್ತಿಸಲಿ, ಶುಕ-ಪಿಕಗಳು ಆನಂದಿಸಲಿ,
ನಿನ್ನ ನೆರಳಲಿ ಜಿಂಕೆ,ಮೊಲ,ಸಾರಂಗಗಳು ನಲಿಯಲಿ…

ಓ ಮಾನವ ,ಈ ಹಸಿರು ವೃಕ್ಷದಂತೇ ನಿನ್ನ ಬಾಳು,
ಜಾತಿ,ಮತ,ಪಂಥಗಳೆಲ್ಲವ ತ್ಯಜಿಸು,
ನಾನು-ನನ್ನದೆಂಬ ಸ್ವಾರ್ಥವ ಬಿಡು,
ಕಷ್ಟಗಳೆಂಬ ಬಿರುಬಿಸಲಲಿ ಸಿಲುಕಿ
ಬಳಲಿ,ಬೆಂಡಾಗಿ ಆಶ್ರಯಿಸಿ ಬಂದವರಿಗೆ ನೆರಳು ನೀಡು…

ಬಾಳಿ ಬದುಕಿ ಬಿಟ್ಟರದು ಬದುಕಲ್ಲ !!
ಆ ಬಾಳು ಹಲವರಿಗೆ ನೆರಳಾಗಬೇಕು,
ನೊಂದವರ ಕಣ್ಣೀರು ಒರೆಸಬೇಕು,
ಹಸಿದವರ,ಬಳಲಿದವರ ಕಾಪಾಡಬೇಕು,
ಆಗಲೇ ನಿನ್ನ ಬಾಳಿಗೆ ಸಾರ್ಥಕತೆ ….

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ;94496 80583,
63631 72368