spot_img
spot_img

ಉಭಯ ಪ್ರಧಾನ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ಜಾಗತಿಕ ಸಮಾಜಶಾಸ್ತ್ರಕ್ಕೆ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ- ಚನ್ನವೀರಶ್ರೀ

Must Read

- Advertisement -

ವಿಶಾಖಪಟ್ಟಣಂ-ದಯವೇ ಧರ್ಮದ ಮೂಲ ಬಸವಣ್ಣನವರ ಮಾತು ಮಂತ್ರವಾಗಿತ್ತು. ಉಭಯ ಪ್ರಧಾನ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ಜಾಗತಿಕ ಸಮಾಜಶಾಸ್ತ್ರಕ್ಕೆ ನೀಡಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಸ್ತ್ರೀ ವಿಮೋಚನೆಗೆ ತೊಡಗಿದ ಮೊದಲ ಭಾರತೀಯ ಆಲೋಚನೆ ಬಸವಣ್ಣನವರದಾಗಿತ್ತು ಎಂದು ಪೂಜ್ಯಶ್ರೀ ವೇ. ಚನ್ನವೀರಸ್ವಾಮಿಗಳು ಹಿರೇಮಠ (ಕಡಣಿ) ಹೇಳಿದರು.

ಅವರು ದಿ.15 ರಂದು ಆಂಧ್ರಪ್ರದೇಶದ ವಿಶಾಖಾಪಟ್ಟಣದಲ್ಲಿ ಕಾವೇರಿ ಕನ್ನಡ ಸಂಘದ *ಬಸವ ಜಯಂತಿ ಆಚರಣೆಯ* ಸಮಾರಂಭದಲ್ಲಿ ವಿಶ್ವಗುರು ಬಸವಣ್ಣನವರ ಕುರಿತು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು.

ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಮಾಜ ನಿರ್ಮಾಣಕ್ಕೆ ಯತ್ನಿಸಿದರು. ಮಡಕೆ, ಮೊರ, ಬೀದಿಯ ಕಲ್ಲು ದೈವ ಕೊಳಗ, ಗಿಣ್ಣಲು ದೈವಗಳನ್ನು ಕಾಣುವುದನ್ನು ತಪ್ಪಿಸಿ ತನ್ನೊಳಗಿನ ದೇವರನ್ನು ಕಾಣುವ ಬಗೆಯನ್ನು ತಿಳಿಸಿಕೊಟ್ಟರು ಎಂದು ಹೇಳಿದರು. ಸುಧೀರ್ಘ ಉಪನ್ಯಾಸ ನೀಡಿದ ಪೂಜ್ಯರು, ದೇವರನ್ನು ದೇಹದ ಮೇಲೆ ಧರಿಸಿಕೊಳ್ಳುವ ಅವಕಾಶವನ್ನು ಕೊಟ್ಟವ ಬಸವಣ್ಣ. ಲಿಂಗವನ್ನು ಆಯತ ಮಾಡಿಕೊಂಡವ ಮಾತ್ರ ಲಿಂಗಾಯತ. ಲಿಂಗದೇಹಿ ಸದಾ ಶುಚಿ ಲಿಂಗಧಾರಿಗೆ ಜಾತಿ ಸೂತಕವಿಲ್ಲ ಲಿಂಗವನ್ನು ಯಾರು ಬೇಕಾದರೂ ಧರಿಸಿಕೊಳ್ಳ ಬಹುದು ದೇಹದ ಮೇಲೆ ದೇವರ ಧರಿಸಿದ ನಂತರ ಬೇರೆ ದೇವರ ಗುಡಿಗೆ ಹೋಗ ಬೇಕಾಗಿಲ್ಲ ಎಂದು ಹೇಳಿದರು.

- Advertisement -

ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಜಿ. ರಾಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾನೂನು ವಿಶ್ವವಿದ್ಯಾಲಯದ ಉಪನ್ಯಾಸಕರಾದ ದಯಾನಂದ ಮೂರ್ತಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಇಂದಿನ ಸಂವಿಧಾನದಲ್ಲಿ ಹೇಳಿದ ವಿಷಯ ಬಸವಣ್ಣನವರು 8 ನೂರು ವರ್ಷಗಳ ಹಿಂದೆ ಹೇಳಿದ್ದರು ಎಂದು ಹೇಳಿದರು. ಕನ್ನಡ ಸಂಘದ ಕಾರ್ಯದರ್ಶಿ ಎಂ. ಸಾಮ್ ಕೋಶಾಧಿಕಾರಿ ಕುಮಾರಸ್ವಾಮಿ ಹಿರೇಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ 30 ವರ್ಷಗಳಿಂದ ಪ್ರವಚನ ಸೇವೆ ಸಲ್ಲಿಸುತ್ತಾ ಬಂದ ಪೂಜ್ಯಶ್ರೀ ವೇ. ಚನ್ನವೀರಸ್ವಾಮಿಗಳಿಗೆ ಕಾವೇರಿ ಕನ್ನಡ ಸಂಘದಿಂದ ಗುರು ಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

1960 ರಿಂದ ಹೊರನಾಡಿನಲ್ಲಿ ಕನ್ನಡ:

ಕನ್ನಡತವನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಕಾವೇರಿ ಕನ್ನಡ ಸೇವೆಯನ್ನು ಸ್ಮರಿಸಿದ ಚನ್ನವೀರಸ್ವಾಮಿಗಳು ಪ್ರಸ್ತುತ ಅಧ್ಯಕ್ಷರಾಗಿರುವ ಜಿ. ರಾಮ ಕಾರ್ಯದರ್ಶಿ ಎಂ.ಸಾಮ್ ಇವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಿದರು.

- Advertisement -

ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಸಂಚಾಲಕಾರಾಗಿ, ಕಾವೇರಿ ಕನ್ನಡ ಸಂಘಕ್ಕೆ ತಮ್ಮನ್ನು ಬರಮಾಡಿಕೊಳ್ಳಲು ಕಾರಣರಾದ ಕುಮಾರಸ್ವಾಮಿ ಹಿರೇಮಠ CISF ಇವರಿಗೆ ಪುಟ್ಟರಾಜ ಗುರು ಸೇವಾ ಧೀಕ್ಷೆ ಪ್ರಮಾಣಪತ್ರ ನೀಡಿ ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಯಾನಂದ್ ಮೂರ್ತಿ,ರಾಜಶೇಖರ್, ಸಿದ್ದಪ್ಪ ಬಿರಾದಾರ,ಸಾಗರ್ ಹಿರೇಮಠ, ಮಹೇಶ್, ಡಾ. ನಂದಿನಿವಿಜಯಲಕ್ಷ್ಮಿ ಹಿರೇಮಠ ಇವರುಗಳಿಂದ ವಚನ ಗಾನ ವಚನ ಚಿಂತನ ನಡೆಯಿತು. ಸಂಘದ ಉಪಾಧ್ಯಕ್ಷರಾದ ಅನಂತ್ ಭಟ್, ಸಾಂಸ್ಕೃತಿಕ ಕಾರ್ಯದರ್ಶಿ ಅಂಬಿಕಾ ಲಿಗಾಡೆ ಉಪಸ್ಥಿತರಿದ್ದರು.

ಕಾರ್ಯಕ್ರಮ ಆರಂಭದಲ್ಲಿ ಬಸವೇಶ್ವರರ ಮತ್ತು ಪುಟ್ಟರಾಜರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ವೇದಿಕೆಯಲ್ಲಿ ಇದ್ದ ಗಣ್ಯರು ದೀಪ ಬೆಳಗಿಸಿ ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿದರು.

ಡಾ. ನಂದಿನಿ ವಚನ ಪ್ರಾರ್ಥನೆ ಮಾಡಿದರು. ರಾಜಶೇಖರ ಹಿರೇಮಠ ಸರ್ವರಿಗೂ ಸ್ವಾಗತಿಸಿದರು

ಸೋಮಶೇಖರ್ ಮತ್ತು ಪ್ರಕಾಶ್ ಲಿಗಾಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಕಾರ್ಯದರ್ಶಿ ಎಂ. ಸಾಮ್ ವಂದನಾರ್ಪಣೆ ಮಾಡಿದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group