ಬೆಂಗಳೂರು: ಸಣ್ಣದಾಗಿ ನೆಗಡಿ, ಕೆಮ್ಮಿನಿಂದ ಶುರುವಾದದ್ದು ಸತತ ಐದಾರು ದಿನ ಇದ್ದರೆ ಮೊದಲು ಫ್ಲೂ ಅಥವಾ ಟೈಫಾಯಿಡ್ ಅಂತಿದ್ದರು. ಕೆಲವೊಮ್ಮೆ ತಿಂಗಳಗಟ್ಟಲೇ ಹಾಸಿಗೆ ಹಿಡಿದಿದ್ದೂ ಉಂಟು. ಆದರೂ ಅಪಾಯದಿಂದ ಪಾರಾಗಿ ಬರುತ್ತಿದ್ದರು. ಈಗ ಸ್ವಲ್ಪ ಜ್ವರ ಬಂದರೂ ಅದಕ್ಕೆ ಕೊರೋನಾ ಎಂಬ ಹೆಸರು.
ಅದನ್ನು ಕೇಳಿದ ತಕ್ಷಣವೇ ರೋಗಿ ಅರ್ಧ ಸತ್ತೇ ಹೋಗಿರುತ್ತಾನೆ. ಅದರ ಪ್ರಯೋಜನ ಯಾರ್ಯಾರೋ ಪಡೆದುಕೊಳ್ಳುತ್ತಾರೆ. ಒಂದೊಮ್ಮೆ ಕೊರೋನಾ ಇದೆ ಎಂದು ದೃಢಪಟ್ಟರೆ ಧೃತಿಗೆಡಬೇಕಾಗಿಲ್ಲ. ಮನೆಯಲ್ಲಿಯೇ ಪ್ರಾಥಮಿಕ ಉಪಚಾರ ಮಾಡಿಕೊಳ್ಳಬಹುದು. ಹೇಗೆಂದರೆ ; ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರಿನಲ್ಲಿ ನಿಂಬೆರಸ ಹಾಕಿ ಕುಡಿಯಬೇಕು.
ಆದಷ್ಟು ಬಿಸಿ ನೀರು ಅಥವಾ ಪಾನೀಯ ಸೇವಿಸುತ್ತಾ ಇರಬೇಕು. ತಂಪು ಪಾನೀಯ ಬೇಡವೇ ಬೇಡ.
ಪೋಷಕಾಂಶಯುಕ್ತ ಆಹಾರ, ಅಧಿಕ ತರಕಾರಿ, ಹಣ್ಣುಗಳ ಸೇವನೆ ಮಾಡಿ.
ವಿಟಮಿನ್ ಸಿ ಇರುವ ಮೊಸಂಬಿ, ನಿಂಬೆಹಣ್ಣು, ಕಿವಿಹಣ್ಣು, ಕಿತ್ತಲೆ ಹಣ್ಣು ಸೇವಿಸಬೇಕು.
ತಿಂದ ತಟ್ಟೆ, ಲೋಟಗಳನ್ನು ಬಿಸಾಡುವಾಗ ಎಚ್ಚರಿಕೆ ವಹಿಸುವುದು. (ಆದಷ್ಟು ಯೂಸ್ ಆಂಡ್ ಥ್ರೋ ಪಾತ್ರ ಬಳಸಿ).
ಮನೆಯಲ್ಲಿದ್ದರೂ ಸದಾ ಎನ್- 95 ಮಾಸ್ಕ್ ಧರಿಸಿ, ಇತರರಿಂದ ದೂರವಿರಿ.
ಆಗಾಗ ದೇಹದ ಉಷ್ಣತೆ ನೋಡಿಕೊಂಡು ಆರೋಗ್ಯಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ.
ಮನೆಯ ಇತರರ ಸದಸ್ಯರಿಂದ ಸ್ಟ್ರಿಕ್ಟ್ ಆಗಿ ದೂರವಿದ್ದು, ಒಬ್ಬರು ಮಾತ್ರ ನಿಮಗೆ ಅಗತ್ಯ ವಸ್ತುಗಳನ್ನು ನೀಡಲಿ. ಅದೂ 3 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.
ಕೊರೋನಾ ಎಲ್ಲರಲ್ಲೂ ಹಲವು ಲಕ್ಷಣಗಳನ್ನು ಹೊತ್ತು ತರುವುದಿಲ್ಲ. ಉದಾಹರಣೆಗೆ ನಟಿ ಐಶ್ವರ್ಯಾ ರೈಯನ್ನೇ ತೆಗೆದುಕೊಳ್ಳಿ. ಅವರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಕೊರೋನಾ ಇರುವುದು ದೃಢಪಟ್ಟಿತ್ತು. ಎಷ್ಟೋ ಜನ ಕೂಡ ಹೋಂ ಕ್ವಾರಂಟೈನ್ ಕೊರೋನಾ ವಿರುದ್ಧ ಜಯ ಸಾಧಿಸಿದ್ದಾರೆ.
ಯಾವುದಕ್ಕೂ ಧೈರ್ಯವೇ ಹಾಗೂ ಸ್ಥೈರ್ಯವೇ ಮುಖ್ಯ.