ಭರತಭೂಮಿಯಲ್ಲಿ ಸಾವಿರಾರು ವಷ೯ಗಳ ಇತಿಹಾಸವನ್ನು ಹೊಂದಿದ ಸುದೀಘ೯ ಪರಂಪರೆಯನ್ನು ಹೊಂದಿರುವ ಭಾಷೆಗಳಲ್ಲಿ ಕನ್ನಡ ಭಾಷೆ ಮುಂಚೂಣಿಯಲ್ಲಿದೆ.
ಇಂತಹ ವೈಭವದ ನುಡಿಗೆ ಗಡಿಭಾಗದಲ್ಲಿ ಚೈತನ್ಯ ತುಂಬಿ ನುಡಿ ನಗಾರಿ ಬಾರಿಸಿದವರು ಬಹಳ ಜನರಿದ್ದಾರೆ.ಅಂತಹವರಲ್ಲಿ ಕನ್ನಡಕ್ಕೆ ಅನ್ಯಾಯವಾದಾಗ ಕನ್ನಡದ ಧ್ವಜ ಹಿಡಿದು ಮರಾಠಿ ಪ್ರಾಬಲ್ಯದ ಗ್ರಾಮಗಳಲ್ಲಿ ಕನ್ನಡ ಬೆಳೆಸಿದ ಮಹನೀಯರಲ್ಲಿ ಖಡಕಲಾಟದ ಕನ್ನಡದ ಸೇನಾನಿ ದಿ.ರವೀಂದ್ರ ವ್ಹದಡಿ ಪ್ರಮುಖರು.ಸದಾ ಕನ್ನಡವನ್ನೆ ಉಸಿರಾಗಿಸಿಕೊಂಡು ಬಾಳಿ ಬದುಕಿ ಮರೆಯಾದ ಕನ್ನಡದ ಹೃದಯವಂತ ಜೀವಿ.
ಕನ್ನಡನಾಡಿನ ನಿಪ್ಪಾಣಿಯ ಗಡಿಭಾಗದ ಕೆಲವೇ ಅಂತರದಲ್ಲಿ ಖಡಕಲಾಟ ಎಂಬ ದೊಡ್ಡದಾದ ಗ್ರಾಮವಿದೆ.ಅಲ್ಲಿ ವಿವಿಧ ಕನ್ನಡದ ಮನೆತನಗಳು ಬಾಳಿ ಬದುಕಿ ಎಲೆಮರೆಕಾಯಿಯಂತೆ ಕೆಲಸ ಮಾಡಿವೆ ಅದರಲ್ಲಿ ವ್ಹದಡಿ ಮನೆತನವು ಒಂದು.ಈ ಮನೆತನದ ಶಿವಲಿಂಗ ಮತ್ತು ಶಾಂತಾಬಾಯಿ ದಂಪತಿಗಳ ಮುದ್ದಿನ ಮಗನಾಗಿ ದಿನಾಂಕ: ೦೫ ಡಿಸೆಂಬರ್ ೧೯೫೪ ರಲ್ಲಿ ರವೀಂದ್ರ ಜನಿಸಿದರು.
ಮನೆತನದ ಪ್ರಾಬಲ್ಯ ಮತ್ತು ಘನತೆಯಂತೆ ನಡೆದ ರವೀಂದ್ರ ಬಾಲ್ಯದಿಂದಲೂ ತುಂಬಾ ಚತುರ ಚಾಣಾಕ್ಷ ಮತಿಯಾಗಿದ್ದ. ಹುಟ್ಟಿನಿಂದಲೂ ಮನೆತನದ ಹಿರಿಯರ ಬಳುವಳಿಯಂತೆ ಕನ್ನಡದ ಬಗ್ಗೆ ಆಸಕ್ತಿ ಉಳ್ಳವನಾಗಿದ್ದ .ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಉನ್ನತ ಶಿಕ್ಷಣವನ್ನು ನಿಪ್ಪಾಣಿ ಬೆಳಗಾವಿ ವಿವಿಧ ನಗರಗಳಲ್ಲಿ ಪಡೆದು ವೈದ್ಯವೃತ್ತಿ ಆಯ್ದುಕೊಂಡು ಜನಸೇವೆಯೇ ಜನಾದ೯ನನ ಸೇವೆ ಎಂದು ತಿಳಿದು ತವರಿಗೆ ಮರಳಿ ದವಾಖಾನೆ ಪ್ರಾರಂಭಿಸಿದ.
ಆತ ಶಿಕ್ಷಣವ ಮುಗಿಸಿ ಗ್ರಾಮಕ್ಕೆ ಬಂದಾಗ ಖಡಕಲಾಟ ಎಲ್ಲಾ ಮರಾಠಿಮಯವಾಗಿತ್ತು ಆಯ್ದ ಕನ್ನಡ ಮನೆತನಗಳಾದ ಪಾಟೀಲ್,ಅಂಕಲಿ,ಕೂಟ, ಸಾವಂತ್ರೆ ,ಕಮತೆ,ಭಡಗಾಂವೆ, ಕೆರಗುಟೆ, ಮುಂತಾದ ಮನೆತನಗಳು ಮತ್ತು ಹಾಲುಮತ ,ಜೈನ ಮತ್ತು ಇತರ ಸಮಾಜಗಳು ಕನ್ನಡದ ಅಸ್ತಿತ್ವ ಉಳಿಸಿ ತಮ್ಮ ಮಕ್ಕಳನ್ನೆಲ್ಲಾ ಕನ್ನಡ ಶಾಲೆಗೆ ಸೇರಿಸಿ ಅಭಿಮಾನ ಮೆರೆದಿದ್ದವು.ರವೀಂದ್ರರ ಮನೆತನದ ಹಿರಿಯರಾದ ಲಿಂ ಅಡಿವ್ಯಪ್ಪ ವ್ಹದಡಿಯವರು ಮೂಲತಃ ಖಡಕಲಾಟದಲ್ಲಿ ಕನ್ನಡಕ್ಕೆ ನೆಲೆ ತಂದು ಕೊಟ್ಟವರು.
ಖಡಕಲಾಟ ಹಿರಿಯರಾದ ಬಾಪುಗೌಡ ಪಾಟೀಲ್,ಕಲಗೌಡ ಪಾಟೀಲ್,ಕಾಕಾಗೌಡ ಪಾಟೀಲ್,ನರಸಗೌಡ ಪಾಟೀಲ್ ಸಹಿತ ಹಲವು ಹಿರಿಯರ ಆಶಯದಂತೆ ಕನ್ನಡದ ಕೆಲಸಕ್ಕೆ ಕೈಹಾಕಿ ಕನ್ನಡ ಕಟ್ಟುವ ಗುರಿ ಇಟ್ಟು ಮುನ್ನಡೆದ ರವೀಂದ್ರ.ಮುಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಬಾಳಯಾತ್ರೆ ಪ್ರಾರಂಭಿಸಿದರು
ಖಡಕಲಾಟ ಕನ್ನಡ ಶಾಲೆ ೧೯೫೧ ರಲ್ಲಿ ಸ್ಥಾಪನೆಯಾದರೂ ಕನ್ನಡದ ಸ್ಥಿತಿಗತಿ ತುಂಬಾ ಗಂಭೀರವಾಗಿತ್ತು ಮರಾಠಿ ತುಂಬಾ ಪ್ರಬಲವಾಗಿ ಬೆಳೆದಿತ್ತು.ಕನಾ೯ಟಕ ಏಕೀಕರಣಗೊಂಡರೂ ಕನ್ನಡದ ಕಲರವ ಇಲ್ಲದ ತಾಣ ಇದಾಗಿತ್ತು.
ಇಂತಹ ಸಂದಭ೯ದಲ್ಲಿ ಸದ್ದಿಲ್ಲದೇ ಕನ್ನಡದ ಕೆಲಸ ಪ್ರಾರಂಭಿಸಿದ.ಎಲ್ಲರಲ್ಲಿ ಒಂದಾಗಿ ಬದುಕಿದ.ನಿಪ್ಪಾಣಿಗೆ ಬಂದಿದ್ದ ಕನ್ನಡದ ಕಟ್ಟಾಳೂ ಪಾಟೀಲ್ ಪುಟ್ಟಪ್ಪನವರನ್ನು ದಿವಂಗತ ಬಸವಪ್ರಭು ನೇಷ್ಠಿ ಅವರೊಂದಿಗೆ ಸಂಪಕಿ೯ಸಿ ಖಡಕಲಾಟಕ್ಕೆ ಪಾಟೀಲ್ ಪುಟ್ಟಪ್ಪನವರನ್ನು ಕರೆಸಿ ಗ್ರಾಮದಲ್ಲಿ ಸರಳ ಸಮಾರಂಭ ಮಾಡಿ ಸನ್ಮಾನಿಸಿದ್ದರು.
ಖಡಕಲಾಟ ಬಗ್ಗೆ ತನ್ನ ಭಾಷಣಗಳಲ್ಲಿ ಪಾಪು ಅವರು ಕಾಲಕಾಲಕ್ಕೆ ಉಲ್ಲೇಖಿಸಿದ್ದಾರೆ.ಚಿಂಚಣಿ ಮಠದ ಕಾಯಯ೯ಕ್ರಮಕ್ಕೆ ಆಗಮಿಸಿದ್ದ ಪಾಪು ಹಿಂದಿನ ಖಡಕಲಾಟಕ್ಕೆ ಆಗಮಿಸಿದ ನೆನಪನ್ನು ಮೆಲುಕು ಹಾಕಿದ್ದರು.
ಹೀಗೆ ಕನ್ನಡದ ಸೇವೆ ಮಾಡುತ್ತ ಅನ್ಯಾಯಗಳು ಸಂಭವಿಸಿದಾಗ ಸಮಾನಮನಸ್ಕರಾದ ಲಿಂ ಮಲ್ಲಪ್ಪ ವಿಜಯನಗರೆ,ಚಂದು ಹಲಗಲೆ ಅವರ ಜೊತೆಗೂಡಿ ಅನ್ಯಾಯದ ವಿರುದ್ದ ನಿಸ್ವಾಥ೯ದಿಂದ ಹೋರಾಡಿ ಬಡವರ ಪರ ಕೆಲಸ ಮಾಡಿದ್ದಾರೆ.
ಹೀಗೆ ಕನ್ನಡದ ಕಾಯಕ ಮುಂದುವರೆಸಿ ದಿಟ್ಟ ಕನ್ನಡದ ನಿಣ೯ಯಗಳನ್ನು ಕೈಗಳ್ಳುತ್ತಾ ಕೆಲವು ಕಹಿ ಅನುಭವಗಳನ್ನುಂಡು ಧೈಯ೯ಶಾಲಿಯಾಗಿ ಕನ್ನಡ ಬೆಳೆಸಿದ್ದಾರೆ.ಏಕೀಕರಣಗೊಂಡು ಅಧ೯ ಶತಮಾನ ಕಳೆದರೂ ಕನ್ನಡದ ನಾಡಧ್ವಜ ಖಡಕಲಾಟದಲ್ಲಿ ಹಾರಾಡಿರಲಿಲ್ಲ.ಇದರತ್ತ ಗಮನ ಹರಿಸಿ ಚಿಂಚಣಿ ಮಠಕ್ಕೆ ತೆರಳಿ ಚಚಿ೯ಸಿದರು.
ಕನ್ನಡ ಬಾವುಟ ಹಾರಿಸುವ ಪಣತೊಟ್ಟ ಇವರಿಗೆ ಚಿಂಚಣಿ ಅಲ್ಲಮಪ್ರಭು ಮಹಾಸ್ವಾಮಿಜಿ ,ದಿ ರಾವಸಾಬ ಢಂಗ,ದಿ.ಮಲ್ಲಪ್ಪ ಡುಕರೆ ಬೆನ್ನೆಲುಬಾಗಿ ನಿಂತರು.ಇವರೆಲ್ಲರ ಸಹಕಾರದೊಂದಿಗೆ ೦೧ ನವೆಂಬರ ೧೯೯೪ ರಲ್ಲಿ ಪ್ರಥಮ ಬಾರಿಗೆ ಕನ್ನಡದ ಕಾಯ೯ಕ್ರಮ ಹಮ್ಮಿಕೊಂಡು ಚಿಂಚಣಿಯ ಕನ್ನಡದ ಸ್ವಾಮಿಗಳಾದ ಶ್ರೀ ಮ.ನಿ.ಪ್ರ.ಸ್ವ ಅಲ್ಲಮಪ್ರಭು ಮಹಾಸ್ವಾಮಿಜಿ ಅವರನ್ನು ಖಡಕಲಾಟಕ್ಕೆ ಬರಮಾಡಿಕೊಂಡು ಕನ್ನಡದ ಧ್ವಜಾರೋಹಣ ಸಾವ೯ಜನಿಕವಾಗಿ ನೆರೆವೆರಿಸಿದರು.
ಆಗ ನಾನು ಒಂದನೇ ತರಗತಿಯಲ್ಲಿ ಒದುತಿದ್ದೆ.ನನ್ನ ಮನೆಗೆ ಬಂದು ನನ್ನಲ್ಲಿ ಕನ್ನಡದ ಉತ್ಸಾಹದ ಬೀಜಬಿತ್ತಿ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲೂ ತಿಳಿಸಿ ಕನ್ನಡದ ಶಾಲು ಹಾಕಿ ನನ್ನಲ್ಲಿ ಕನ್ನಡ ಬೇರುರುವಲ್ಲಿ ಕಾರಣರಾದರು.
ನಿಜಕ್ಕೂ ನಾನು ಇಂದು ಕನ್ನಡದ ಸೇವೆ ಮಾಡುತಿದ್ದರೆ ಅದು ಅವರು ನನಗೆ ಕೊಟ್ಟ ಕನ್ನಡದ ದೀಕ್ಷೆ ಕಾರಣ ಎಂದು ಅಭಿಮಾನದಿಂದ ಹೇಳುತ್ತೇನೆ.
ನನ್ನನ್ನು ಪ್ರತಿ ಕನ್ನಡ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಸದಾ ನೀನು ಕನ್ನಡದ ಸೇವೆ ಮಾಡಬೇಕು ಎಂದು ಮೇಲಿಂದ ಮೇಲೆ ಹೇಳುತ್ತಿದ್ದರು.
ಏನೇ ಆಗಲಿ ಅವರ ಬೇರೆ ವಿಷಯಗಳೆನೇ ಇರಲಿ ನನಗೆ ಮಾತ್ರ ಅವರೇ ಕನ್ನಡದ ಗುರು ಭಾವಿಸಿದ್ದೆ.ನನ್ನನ್ನು ಚಿಂಚಣಿ ಮಠಕ್ಕೆ ಕರೆದೊಯ್ದು ಕನ್ನಡದ ಶರಣರ ಸಂಪಕ೯ಕ್ಕೆ ತಂದಿದ್ದರು.ಇದೆಲ್ಲಾ ನನ್ನ ಜೀವನದ ಅವಿಸ್ಮರಣೀಯ ದಿನಗಳು ಎನ್ನುತ್ತೆನೆ.
ಮುಂದೆ ಹಿಗೆಯೇ ಕನ್ನಡದ ಸೇವೆ ಮುಂದುವರೆಸಿ ಕನ್ನಡ ಕಾಯ೯ಕ್ರಮ ಹಮ್ಮಿಕೊಳ್ಳುತ್ತಾ ನಿಪ್ಪಾಣಿ ಕನ್ನಡದ ಹಿರಿಯರಾದ ದಿ ಬಸವಪ್ರಭು ನೇಷ್ಠಿಯ ರೊಂದಿಗೆ ಒಡನಾಟ ಹೊಂದಿ ಅವರ ಮಾಗ೯ದಶ೯ನದಲ್ಲಿ ಕನ್ನಡ ಬೆಳೆಸ ತೊಡಗಿದರು.ನಿಪ್ಪಾಣಿಯ ವಿವಿಧ ಕನ್ನಡ ಚಳುವಳಿಗಳಲ್ಲಿ ಭಾಗವಹಿಸಿ ಕನ್ನಡ ಪ್ರೇಮ ಮೆರೆದಿರುವರು.
ಖಡಕಲಾಟ ಕನ್ನಡ ಶಾಲೆಯ ಉಸ್ತುವಾರಿ ಸಮಿತಿ ಸದಸ್ಯರಾಗಿ ಮುಂದೆ ಅಧ್ಯಕ್ಷರಾಗಿ,ವಿವಿಧ ಸಂಘಟನೆಗಳ ನೇತಾರರಾಗಿ,ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಮಾಜಸೇವಕನಾಗಿ ಬದುಕಿ ಕನ್ನಡಕ್ಕಾಗಿ ನಿಸ್ವಾಥ೯ದಿಂದ ಬದುಕಿ ಬಾಳಿದ್ದಾರೆ.ಕನ್ನಡಕ್ಕೆ ಅನ್ಯಾಯವಾದಾಗ ಸಿಡಿಲಿನಂತೆ ಅಬ್ಬರಿಸಿ ನ್ಯಾಯ ಪಡೆದಿದ್ದಾರೆ.
ಅವರ ಕನ್ನಡಪರ ಹೋರಾಟಗಳನ್ನು ನಾನು ಸಮೀಪದಿಂದ ಕಂಡಿದ್ದೇನೆ.ಯಾವುದಕ್ಕೂ ರಾಜಿ ಆಗದೇ ನ್ಯಾಯ,ಧಮ೯,ನಿಪ್ಠೆಯಿಂದ ಬದುಕಿ ಜೀವನ ಮಾಡಿದ್ದಾರೆ. ವಿವಿಧ ಸಾಹಿತಿಗಳ ಸಂಪಕ೯ದ ವ್ಯಕ್ತಿಯಾಗಿ ವಿಶೇಷವಾಗಿ ಚಿಂಚಣಿ ಮಠದ ಅಪ್ಪಟ ಕನ್ನಡದ ಭಕ್ತ ಇವರು.ಕನ್ನಡದ ಸೇವೆ ಮಾಡಿದ ಇವರ ಉದಾತ್ತ ಧೋರಣೆಯ ಪರಿಶ್ರಮದ ಫಲವಾಗಿ ಇಂದು ಖಡಕಲಾಟದಲ್ಲಿ ೧೭೦೦ ಮಕ್ಕಳು ಕನ್ನಡ ಕಲಿಯುತಿದ್ದಾರೆ ಇದು ಹೆಮ್ಮೆಯ ಸಂಗತಿಯಾಗಿದೆ.
ಇಂತಹ ಅಪರೂಪದ ಕನ್ನಡ ಸೇನಾನಿ ಕನ್ನಡದ ಸೇವೆ ಮುಂದುವರೆಸಿ ಎಂದು ನಮಗೆಲ್ಲಾ ತಿಳಿಸಿ ೧೫ ಆಗಸ್ಟ್ ೨೦೦೭ ರಂದು ಸ್ವಾತಂತ್ರ್ಯ ದಿನದಂದೆ ಮಣ್ಣಲ್ಲಿ ಮಣ್ಣಾಗಿ ಮರೆಯಾದರು. ಇಂದಿನ ನನ್ನ ಕನ್ನಡದ ಸೇವೆಗೆ ಅವರೇ ಪ್ರೇರಕರು.ಇಂದು ನಿಪ್ಪಾಣಿ ಪರಿಸರದ ಖಡಕಲಾಟ ಕನ್ನಡದ ಭದ್ರಕೋಟೆಯಾಗಿದೆ ಎಂದರೆ ಅದಕ್ಕೆ ಇವರು ಪ್ರಮುಖ ಕಾರಣರು. ಇವರಿಗೆ ನನ್ನ ಪ್ರಣಾಮಗಳು.ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ ಅವರನ್ನು ಭಕ್ತಿಯಿಂದ ಸ್ಮರಿಸೋಣ
ಮಾಹಿತಿ
- ಶ್ರೀ ಕಾಕಾ ವ್ಹದಡಿ
- ಶ್ರೀ ಶಿವಮೂರ್ತಿ ಸಂಕಾಜೆ
- ಶ್ರೀ ಚಂದು ಹಲಗಲೆ
ಲೇಖನ
- ಪ್ರೋ.ಮಿಥುನ ಅಂಕಲಿ
- ಖಡಕಲಾಟ