ಅಜ್ಜಿ ತಿಳಿಸುವ ವಿಧಾನ ಅನುಸರಿಸಿ ಸಾಕು
ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳ ಸಮಸ್ಯೆ ಎಂದರೆ ಡೆಲಿವರಿ ಆದ ನಂತರ ಉಳಿಯುವ ಬೊಜ್ಜು. ಮೊದಲು ತೆಳ್ಳಗೆ ಇದ್ದವರು ಒಂದು ಮಗುವಾದನಂತರ ಮೈ ಕೈ ಊದಿಕೊಂಡು ಗುಂಡಗೆ ಆಗಿಬಿಡುತ್ತಾರೆ.
ಡೆಲಿವರಿ ಆದ ನಂತರ ಉಳಿಯುವ ಹೊಟ್ಟೆ ಕರಗಿಸಲು ಸಿಂಪಲ್ ಮನೆ ಮದ್ದನ್ನು ಎಲ್ಲರೂ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ಹೊಟ್ಟೆಯ ಕೆಳಗೆ ಇರುವಂತಹ ಬೊಜ್ಜು ಕರಗಿಸಬೇಕು ಅಂದರೆ ನಾವು ತಿಳಿಸುವ ಈ ಒಂದು ಮನೆಮದ್ದನ್ನು ನೀವು ಅನುಸರಿಸ ಬೇಕಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿರುವುದರಿಂದ ಅದು ಜೀರ್ಣವಾಗದೆ ನಮ್ಮ ಹೊಟ್ಟೆಯಲ್ಲಿ ಹಾಗೆಯೇ ಉಳಿದು ಬಿಡುತ್ತದೆ ಈ ಬೊಜ್ಜು ದೇಹದ ತೂಕವನ್ನು ಹೆಚ್ಚಿಸುವುದಲ್ಲದೆ ನಮ್ಮ ಬಾಹ್ಯ ಸೌಂದರ್ಯಕ್ಕೆ ಕೂಡ ಅಡ್ಡಿಯನ್ನುಂಟು ಮಾಡುತ್ತದೆ. ಹಾಗಾಗಿ ಇಂದು ಬೊಜ್ಜನ್ನು ಕರಗಿಸುವ ಮನೆ ಮದ್ದಿನ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ತಿಳಿಸುತ್ತೇವೆ.
ಈ ಒಂದು ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು 100 ಗ್ರಾಂ ಜೀರಿಗೆ, 100 ಗ್ರಾಂ ಅಜಿವಾನ ಹಾಗೂ 100ಗ್ರಾಂ ಸೋಂಪಿನ ಕಾಳು.
ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಅನ್ನು ಇಟ್ಟು ಅದಕ್ಕೆ ಜೀರಿಗೆ ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ ನಂತರ ಅದನ್ನು ಒಂದು ತಟ್ಟೆಗೆ ತೆಗೆದಿಟ್ಟು ನಂತರ ಅದೇ ಬಾಣಲಿಗೆ ಮತ್ತೆ ಅಜಿವಾನವನ್ನು ಹಾಕಿಕೊಂಡು ಅದನ್ನು ಕೂಡ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
ನಂತರ ಸೊಂಪಿನ ಕಾಳು ಹಾಕಿ ಅದನ್ನು ಕೂಡ ಹುರಿದು ಕೊಳ್ಳಬೇಕು. ಈ ರೀತಿ ಮೂರು ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ನಂತರ ಎಲ್ಲವನ್ನೂ ಮಿಕ್ಸ್ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು.
ಈಗ ಒಂದು ಪಾತ್ರೆಗೆ ಅರ್ಧ ಲೀಟರ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ನಂತರ ಈ ನೀರಿಗೆ ತಯಾರಿಸಿದ ಮಿಶ್ರಣವನ್ನು ಒಂದು ಟೇಬಲ್ ಸ್ಪೂನ್ ಹಾಕಿ ಮೂರು ನಿಮಿಷಗಳ ಕಾಲ ಕುದಿಸಿ ಕೊಳ್ಳಬೇಕು.
ನಂತರ ಒಂದು ನೀರನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಂಡು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಇರುವಂತಹ ಬೊಜ್ಜು ಬಹುಬೇಗನೆ ಕಡಿಮೆಯಾಗುತ್ತದೆ.
ಕೇಶವ ನಾರಾಯಣ