spot_img
spot_img

ಬಿ.ಎಂ.ಟಿ.ಸಿ ಅಧಿಕಾರಿಯ ದರ್ಪ; ಸಾರಿಗೆ ಸಚಿವ ಶ್ರೀ ರಾಮುಲು ಅವರಿಗೆ ಒಂದು ಮನವಿ…

Must Read

- Advertisement -

ಮಾನ್ಯ ಸಚಿವರೇ, ಬಿ.ಎಂ.ಟಿ.ಸಿ , ಸದಾ ಕಾಲ ನಷ್ಟ ದಲ್ಲಿ ಎಂದು ಬೊಬ್ಬೆ ಹೊಡೆಯುವ ಮುನ್ನ ಸಿಲಿಕಾನ್ ಸಿಟಿಯ ಬಿ.ಎಂ.ಟಿ.ಸಿ ಆಡಳಿತ ಮಂಡಳಿಯವರ ಉದ್ಯೋಗಿಗಳು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ ಎಂದು ಒಮ್ಮೆ ನೋಡಿ ಕೊಂಡು ಆತ್ಮಾವಲೋಕನ ಮಾಡಿ ಕೊಳ್ಳಬೇಕು ಎಂಬುದು ನನ್ನ ವಿನಂತಿ.

ರಾಜ್ಯದ ಸಾರಿಗೆ ಸಚಿವ ಶ್ರೀ ರಾಮುಲು ಅವರೇ, ಸೆಪ್ಟೆಂಬರ್ 26 ರ ಭಾನುವಾರ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಬಸ್ ಪಾಸ್ ವಿತರಿಸುವ ಕೌಂಟರ್ ಗಳು ಬಾಗಿಲು ಮುಚ್ಚಿದ್ದವು.ಬಿ.ಎಂ.ಟಿ.ಸಿ ಬಸ್ ನಿಲ್ದಾಣದಲ್ಲಿ ಇರುವ ವಿಚಾರಣೆ ಕೊಠಡಿ ಯ ಅಧಿಕಾರಿಯನ್ನು ಸಂಪರ್ಕಿಸಿ , ನನ್ನ ಐ .ಡಿ ಕಾರ್ಡ್ ಅನ್ನು ನವೀಕರಣ ಮಾಡಿ ಕೊಡುವಂತೆ ಹಾಗೂ ಅಕ್ಟೋಬರ್ ತಿಂಗಳ ಮಾಸಿಕ ಪಾಸ್ ವಿತರಿಸುವಂತೆ ಕೇಳಿಕೊಂಡಾಗ ಮಧ್ಯಾಹ್ನ 2.15 ರ ಸಮಯ, ಆದರೆ ವಿಚಾರಣೆ ಕೊಠಡಿಯಲ್ಲಿ ಇದ್ದ ಅಧಿಕಾರಿ ಮಾತ್ರ ದರ್ಪದ ನುಡಿಗಳನ್ನು ಆಡಿ 3 ವರುಷಕ್ಕೆ ಒಮ್ಮೆ ನವೀಕರಣ ಮಾಡುವ ಐ ಡಿ ಕಾರ್ಡ್ ಅನ್ನು ತಿಂಗಳ 1 ರಿಂದ 25 ನೇ ತಾರೀಕಿನ ವರೆಗೆ ಮಾತ್ರ ಮಾಡಲಾಗುತ್ತದೆ, ಅಕ್ಟೋಬರ್ ತಿಂಗಳ ಐ. ಡಿ ಕಾರ್ಡ್ ಇನ್ನೂ ಬರಬೇಕು ಎಂದು ಸುಳ್ಳು ಹೇಳಿ ನನ್ನನು ಸಾಗ ಹಾಕುವ ಹಾದಿ ಹಿಡಿದರು.

- Advertisement -

ನಾನು ಅವರಿಗೆ ಐ. ಡಿ ಕಾರ್ಡ್ ನವೀಕರಣ ಪ್ರತಿನಿತ್ಯ ಮಾಡಿ ಕೊಡ ಬೇಕಲ್ಲವೇ ಎಂದಾಗ ನನ್ನ ಬಳಿ ಜಗಳಕ್ಕೆ ಬಂದು ಕಛೇರಿ ಒಳಗೆ ಬನ್ನಿ ಎಂದು ಕರೆದರು. ನಾನು ಅವರ ಕಚೇರಿ ಮುಂದೆ ನಿಂತು ಒಳಗೆ ಹೋಗದೆ ಪ್ರಯಾಣಿಕರಿಂದ ಬರುವ ಲಾಭ ನಿಮಗೆ ಬೇಕು ಆದರೆ ಪ್ರಯಾಣಿಕರಿಗೆ ಸ್ಪಂದಿಸುವ ರೀತಿ ನೀತಿ ನಿಮಗೆ ಗೊತ್ತಿಲ್ಲ ಎಂದು ನುಡಿದು, ಅಲ್ಲಿಂದ ಹೊರಟು ಬಸ್ ನಿಲ್ದಾಣದಲ್ಲಿ ಇದ್ದ ಟಿ.ಸಿ ಬಳಿ ಕೇಳಿದಾಗ ಪ್ರತಿ ನಿತ್ಯ ಐ. ಡಿ ಕಾರ್ಡ್ ನವೀಕರಣ ಮಾಡಿ ಕೊಡಬೇಕು ಹಾಗೂ ಮುಂದಿನ ತಿಂಗಳ ಬಸ್ ಪಾಸ್ ಅನ್ನು ತಿಂಗಳ 25 ನೇ ತಾರೀಖಿನಿಂದ ವಿತರಿಸಲಾಗುತ್ತದೆ ಎಂದು ನುಡಿದರು.

ಈ ಅಧಿಕಾರಿಯ ದರ್ಪ ನೋಡಿ ಸಾರಿಗೆ ಸಚಿವರೇ….

ಸಿಲಿಕಾನ್ ಸಿಟಿ ಯ ಹೃದಯ ಭಾಗ ಆಗಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಇರುವ ಬಿ.ಎಂ.ಟಿ.ಸಿ ಕಛೇರಿ ಯ ಸಹಾಯಕ ಕೇಂದ್ರದಲ್ಲಿ ಸೆಪ್ಟೆಂಬರ್ 26 ರ ಮಧ್ಯಾಹ್ನ 2.30 ವೇಳೆಗೆ ಬಸ್ ಪಾಸ್ ನ ಐ.ಡಿ ಕಾರ್ಡ್ ಅನ್ನು ನವೀಕರಣ ಮಾಡಲು ಹೋದ ನನಗೆ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಐ. ಡಿ ಕಾರ್ಡ್ ಖಾಲಿ ಆಗಿದೆ ಎಂದು ಒಮ್ಮೆ ಹೇಳಿದರೆ ಮತೊಮ್ಮೆ 25 ನೇ ತಾರೀಖಿನ ವರೆಗೆ ಮಾತ್ರ ನೀಡುವುದು ಎಂದು ದರ್ಪದಿಂದ ಮಾತನಾಡಿದರು.ಅಕ್ಟೋಬರ್ ತಿಂಗಳ ಪಾಸ್ ನೀಡುವಂತೆ ಮನವಿ ಮಾಡಿದರೆ ಅದಕ್ಕೆ ಅವರು 1 ನೇ ತಾರೀಖಿನಿಂದ ನೀಡಲಾಗುತ್ತದೆ ಎಂಬ ಉಡಾಫೆಯ ಉತ್ತರ ನೀಡಿದರು.

- Advertisement -

ಅಸಲಿ ವಿಷಯ

ಇಷ್ಟಕ್ಕೂ ಅಸಲಿ ವಿಷಯವೇನೆಂದರೆ ಬಿ.ಎಂ.ಟಿ.ಸಿ ಬಸ್ ಪಾಸ್ ವಿತರಣೆ ಮಾಡುವ ಹಿಂಭಾಗದ ಕಚೇರಿಯಲ್ಲಿ ಸಿಬ್ಬಂದಿಗಳು ಇಲ್ಲದೆ ಬಾಗಿಲು ಮುಚ್ಚ ಲಾಗಿತ್ತು. ಅವರೆಲ್ಲ ಎಲ್ಲಿ ಹೋಗಿದ್ದರೋ ಗೊತ್ತಿಲ್ಲ.

ಬಿ.ಎಂ.ಟಿ.ಸಿ ಬಸ್ ನಿರ್ವಾಹಕರ ಉತ್ತರ

ಬಸ್ ನಿಲ್ದಾಣದಲ್ಲಿ ಇದ್ದ ಟಿ.ಸಿ ಬಳಿ ಹಾಗೂ ಸಿಬ್ಬಂದಿ ಬಳಿ ಕೇಳಿದಾಗ ಅವರು ನಿಮ್ಮ ಐ ಡಿ ಕಾರ್ಡ್ ಅನ್ನು 3 ವರುಷ ಅವಧಿಗೆ ಮಾಡಲಾಗುತ್ತದೆ ಹಾಗೂ ಒಂದು ವಾರ ಇರುವಾಗ ಅದನ್ನು ನವೀಕರಿಸಬೇಕು ಹಾಗೂ ಪ್ರತಿ ತಿಂಗಳ 25 ರ ನಂತರ ಹೊಸ ಪಾಸ್ ಅನ್ನು (ಮುಂಬರುವ ತಿಂಗಳ) ವಿತರಣೆ ಮಾಡಲಾಗುತ್ತದೆ. ಆದರೆ ಅಲ್ಲಿಯ ಅಧಿಕಾರಿ ಮಾತ್ರ ಯಾಕೆ ಹಾಗೆ ಹೇಳಿದರು ಗೊತ್ತಿಲ್ಲ ಎಂದು ನುಡಿದು, ನೀವು ಬನಶಂಕರಿ ಬಸ್ ಡಿಪೋ ಗೆ ಹೋಗಿ ಅಲ್ಲಿ ನಿಮಗೆ ಕಾರ್ಡ್ ನವೀಕರಿಸಿ ಕೊಡುತ್ತಾರೆ ಎಂದರು. ನಾನು ಅವರಿಗೆ ತಿಳಿಸಿದೆ, 15 ದಿನಗಳ ಹಿಂದೆ ಹೋದಾಗ ತಿಂಗಳ 1 ನೇ ತಾರೀಕು ಮಾತ್ರ ವಿತರಣೆ ಮಾಡುತ್ತೇವೆ ನೀವು ಕೊಡುವ 100 ರೂ. ಗೆ ನಾವು ಮತ್ತೆ ಪ್ರಮುಖ ಡಿಪೋ ಗೆ ಹೋಗಿ ಹಣ ಪಾವತಿಸ ಬೇಕಾಗುತ್ತದೆ ಎಂದು ಅಂದು ಬನಶಂಕರಿ ಬಿ.ಎಂ.ಟಿ ಸಿ ಬಸ್ ನಿಲ್ದಾಣದಲ್ಲಿ ಇದ್ದ ಅಧಿಕಾರಿ ನನ್ನ ಬಳಿ ನುಡಿದಿದ್ದ ವಿಷಯವನ್ನು ಬಿ.ಎಂ.ಟಿ. ಸಿ ನಿರ್ವಾಹಕರ ಬಳಿ ತಿಳಿಸಿದೆ.

ಬಿ.ಎಂ.ಟಿ ಸಿ ವಿಚಾರಣೆ ಕೊಠಡಿ ಅಧಿಕಾರಿಯ ದರ್ಪ ಸೆಪ್ಟೆಂಬರ್ 26 ರ ಮಧ್ಯಾಹ್ನ 2. 30 ರ ಹೊತ್ತಿನಲ್ಲಿ ಈ ರೀತಿ ನಡೆದಿತ್ತು. ಸಾರಿಗೆ ಸಚಿವರೇ ಇಂತಹ ದರ್ಪ ತೋರುವ ಅಧಿಕಾರಿಗಳಿಂದ ಬಿ.ಎಂ.ಟಿ.ಸಿ ನಷ್ಟದ ಹಾದಿಯಲ್ಲಿದೆ ಎಂದರೆ ಪ್ರಾಯಶಃ ತಪ್ಪಾಗಲಾರದು.ಸಚಿವರೇ ಇತ್ತ ನೋಡಿ, ನಾಗರಿಕರ ಸಮಸ್ಯೆಗೆ ಪರಿಹಾರ ನೀಡಿ ಅಕ್ಟೋಬರ್ 1 ರಿಂದ ನವೀಕರಣ ಗೊಂಡ ಐ .ಡಿ ತೋರಿಸಿದರೆ ಹಾಗೂ ಹೊಸ ಬಸ್ ಪಾಸ್ ತೋರಿಸಿದರೆ ಪ್ರಯಾಣ ಮಾಡಲು ಅನುಕೂಲವಾಗುತ್ತದೆ. 1ನೇ ತಾರೀಖಿನಿಂದ ಹೊಸದಾದ ನವೀಕರಣ ಗೊಂಡ ಐ .ಡಿ ಕಾರ್ಡ್ ಇಲ್ಲದೆ ಹೋದರೆ ಬಿ.ಎಂ.ಟಿ.ಸಿ ಬಸ್ ನ ನಿರ್ವಾಹಕರು ಪ್ರಯಾಣ ಮಾಡಲು ಅನುಮತಿ ನೀಡುವುದಿಲ್ಲ.ಹಾಗೆಯೇ ಬಸ್ ಪಾಸ್ ವಿಚಾರಿಸುವ ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಕೊಠಡಿಯ ಮುಂಭಾಗದಲ್ಲಿ ಐ. ಡಿ ಕಾರ್ಡ್ ತೋರಿಸಿ ಬಿ.ಎಂ.ಟಿ.ಸಿ ಬಸ್ ಪಾಸ್ ಪಡೆಯಿರಿ ಎಂಬ ಸೂಚನೆ ನೀಡುವ ಚೀಟಿ ಬೇರೆ ಅಂಟಿಸಿದ್ದು ಐ. ಡಿ .ನವೀಕರಣ ಮಾಡಿ ಕೊಡಿ ಅಂದರೆ ಮಾತ್ರ ಕಾರ್ಡ್ ಖಾಲಿ ಆಗಿದೆ ಎಂಬ ಖಯಾಲಿ ಉತ್ತರ ನೀಡುತ್ತಾರೆ.ಪ್ರತಿ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುವ ಶ್ರಮ ಜೀವಿಗಳ ಬದುಕಿಗೆ ಕೊಳ್ಳಿ ಇಡುವ ಬಿ.ಎಂ.ಟಿ.ಸಿ ವಿಚಾರಣೆ ಕೊಠಡಿಯ ಅಧಿಕಾರಿಯ ದರ್ಪಕ್ಕೆ ಬ್ರೆಕ್ ಹಾಕಿ ಸಾಮಾನ್ಯ ಜನರ ಬದುಕು ಅನ್ನು ಹಸನು ಮಾಡಿ ಎಂಬುದಾಗಿ ತಮ್ಮಲ್ಲಿ ವಿನಂತಿ ಸಚಿವರೇ….


ತೀರ್ಥಹಳ್ಳಿ ಅನಂತ ಕಲ್ಲಾಪುರ

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group