ಬಣ್ಣ ಮುಖ್ಯವಲ್ಲ ಗುಣ ಮುಖ್ಯ
ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು ಹೇರಳವಾಗಿದ್ದ ಕಾರಣ ಆ ಊರಿನಲ್ಲಿ ಆಹಾರಕ್ಕೆ ಕೊರತೆಯಿರಲಿಲ್ಲ.ಇಂತಹ ಊರಿನಲ್ಲಿ ಕೆಂಪಿರುವೆ ಮತ್ತು ಕಪ್ಪಿರುವೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದವು. ಆ ಹಣ್ಣಿನ ಮರಗಳೆ ಇವರ ಆಟದ ಮೈದಾನವಾಗಿದ್ದವು.ಅಲ್ಲಿಯ ಹಣ್ಣುಗಳನ್ನು ತಿಂದು ದಷ್ಟಪುಷ್ಟವಾಗಿ ಆರೋಗ್ಯದಿಂದವು.
ಹೀಗೆ ಅನೋನ್ಯವಾಗಿದ್ದ ಆ ವೇಳೆಯಲ್ಲಿ ಮಿಡತೆಯೊಂದು ಅತಿಥಿಯಾಗಿ ಬಂದಿತು. ಆಗ ಅವೆರಡು ಇರುವೆಗಳು ಮಿಡತೆಯ ಅತಿಥಿ ಸತ್ಕಾರವನ್ನು ಮಾಡಿದವು.ಇವುಗಳ ಅನೋನ್ಯ ಸ್ನೇಹವನ್ನು ಕಂಡು ಮಿಡತೆಗೆ ಅಸೂಯೆಯಾಯಿತು.
ಹೇಗಾದರೂ ಮಾಡಿ ಇವುಗಳ ಸ್ನೇಹವನ್ನು ಮುರಿಯಬೇಕು ಎಂದು ನಿರ್ಧರಿಸಿತು ಅದರಂತೆ ಒಂದು ಸಂಜೆ ಕಪ್ಪಿರುವೆಯನ್ನು ಕರೆದು “ನೋಡು ಗೆಳೆಯ ನೀನು ಏಕೆ ಅಷ್ಟು ಕಪ್ಪಗಿರುವೆ? ಎಂದಿತು.”ಆಗ ಗೊತ್ತಿಲ್ಲ ,ಅದು ನನ್ನ ಹುಟ್ಟು ಬಣ್ಣ ಎಂದಿತು” ಆಗ ಮತ್ತೆ ಮಿಡತೆ ಇಲ್ಲ ನೋಡು ಆ ಕೆಂಪಿರುವೆ ನಿನ್ನ ಬಿಟ್ಟು ಯಾವುದೋ ಫಲಾಹಾರ ತಿನ್ನುತ್ತದೆ. ಅದಕ್ಕೆ ಅದು ಕೆಂಪಾಗಿದೆ ಎಂದಿತು.
ಮಿಡತೆಯ ಮಾತಿನಿಂದ ಕಪ್ಪಿರುವೆ ಚಿಂತೆಯಲಿ ಊಟ ,ತಿಂಡಿ ಕೆಂಪಿರುವೆಯ ಸ್ನೇಹ ಎಲ್ಲವನ್ನು ಬಿಟ್ಟು ಚಿಂತೆಗಿಡಾಯಿತು. ಕೆಂಪಿರುವೆ ಕರೆದರೂ ಹೋಗದಾಯಿತು.ತನ್ನ ಬಣ್ಣದ ಬಗ್ಗೆ ಅಸೂಯೆ ಮೂಡಿಸಿಕೊಳ್ಳತೊಡಗಿತು.
ಹೀಗಿರುವಾಗ ಬೆಳ್ಳಗಾಗಲು ಒಂದು ಉಪಾಯ ಮಾಡಿ ಮೂಲೆ ಮನೆಯ ಅಜ್ಜಿಯ ಮನೆಯ ಹಿಟ್ಟಿನ ಭರಣಿಯಲ್ಲಿ ಉರುಳಾಡಿ ಬಣ್ಣ ಮಾಡಿಕೊಂಡು ಕೆಂಪಿರುವೆ ಹತ್ತಿರ ಬಂದಿತು. ಇದರ ಸ್ಥಿತಿ ಕಂಡು ಕೆಂಪಿರುವೆ ನಗತೊಡಗಿತು.ಮತ್ತು ತನ್ನಿಂದ ದೂರಾದ ಸಂಚಿನ ಬಗ್ಗೆ ಕಾರಣ ತಿಳಿದುಕೊಂಡಿತು. ಅಷ್ಟರಲ್ಲಿ ಮಳೆ ಬಂದು ಕಪ್ಪಿರುವೆ ಮೈ ಬಣ್ಣ ಮೊದಲಿನಂತಯಿತು. ಆಗ ಕೆಂಪಿರುವೆ ಹೇಳಿತು ‘ನೋಡು, ಗೆಳೆಯ ಸ್ನೇಹ,ಪ್ರೀತಿಗೆ ಬಣ್ಣ ಮುಖ್ಯವಲ್ಲ ಓಳ್ಳೆಯ ಗುಣ ಮುಖ್ಯ ನಾನು ನಿನ್ನ ಯಾವತ್ತು ಕೀಳಾಗಿ ಕಂಡಿಲ್ಲ ನೀನೆ ಅನ್ಯರ ಮಾತು ಕೇಳಿ ನನ್ನಿಂದ ದೂರಾದೆ ಎಂದಿತು” ಅಂದಿನಿಂದ ಅವರು ಸ್ನೇಹದಿಂದ ಮತ್ತಷ್ಟು ಹತ್ತಿರವಾದವು
ಇರುವೆ ನೀತಿ
ಅದು ಚಿಕ್ಕೂರು ಅಲ್ಲಿ ರಾಮಪ್ಪನೆಂಬ ರೈತನಿದ್ದ. ನೀತಿವಂತನಾಗಿ ಊರಿನಲ್ಲಿ ತನ್ನದೇ ಆದ ಘನತೆಯನ್ನು ಹೊಂದಿದ್ದ. ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ತಾನೇ ಮಾರುಕಟ್ಟೆ ಕಂಡುಕೊಂಡಿದ್ದ.ಹೀಗಾಗಿ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟುಕೊಂಡಿದ್ದ. ರಾಮಪ್ಪ ನ್ಯಾಯಪರವಾಗಿದ್ದ ಕಾರಣ ಅವನ ಮಾತಿಗೆ ವಿಶೇಷ ಬೆಲೆ ಇತ್ತು. ಊರಿನಲ್ಲಿ ಜಗಳ ತಗಾದೆಗಳಾದರೆ ರಾಮಪ್ಪನೇ ಬಗೆಹರಿಸುತ್ತಿದ್ದ.ಹೆಂಡತಿ ರತ್ನವ್ವ ಕೂಡಾ ಗಂಡನ ಆದರ್ಶಗಳಿಗೆ ಹೆಗಲು ಕೊಟ್ಟಿದ್ದಳು.
ಕೆಲ ದಿನಗಳಲ್ಲಿ ರಾಮಪ್ಪನಿಗೆ ಅವಳಿ ಜವಳಿ ಮಕ್ಕಳಾದರು. ಮೊದಲನೆಯವನು ಸೋಮ ಎರಡನೆಯವನು ಭೀಮ ಹೀಗೆ ತನ್ನ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಸಂಸ್ಕಾರ ನೀಡಿ ಬೆಳೆಸಿದ. ಹಳ್ಳಿಯಲ್ಲಿ ಬೆಳೆದ ಕಾರಣ ಅಪ್ಪನ ಕೆಲಸಕ್ಕೆ ನೆರವಾಗುತ್ತಾ ತಮ್ಮ ಶಿಕ್ಷಣವನ್ನು ಪೂರೈಸಿದರು.ದೊರೆತ ಶಿಕ್ಷಣದಿಂದ ಅಪ್ಪನ ಕೃಷಿ ಕೆಲಸಗಳಿಂದ ದೂರವಾಗಿ ಮುಂದೆ ಪಟ್ಟಣ ವ್ಯಾಮೋಹಕ್ಕೆ ಒಳಗಾಗಿ ಇಬ್ಬರಿಗೂ ಒಳ್ಳೆಯ ಕೆಲಸ ದೊರಕಿತು.
ಈ ವಿಷಯವನ್ನು ಅಪ್ಪನಿಗೆ ತಿಳಿಸಲು ಬಂದರು. ರಾಮಪ್ಪ “ಮೇಟಿ ವಿದ್ಯೆ” ಯ ಮಹತ್ವವನ್ನು ತಿಳಿಸಿ ನೌಕರಿ ಆಸೆಯನ್ನು ಬಿಡಲು ವಿನಂತಿಸಿದ. ಅಪ್ಪನ ಮಾತು ಮಕ್ಕಳಿಗೆ ಅರಗಲೇ ಇಲ್ಲ. ಸರಿ ಮಕ್ಕಳೇ ಈಗ ನೀವು ಸ್ವತಂತ್ರರು ನಿಮ್ಮ ಆಸೆಗೆ ನಾನು ಅಡ್ಡಿಯಾಗುದಿಲ್ಲ ಎಂದು ಹೇಳಿದ ರಾಮಪ್ಪ. ಮುಂದೆ ಪಟ್ಟಣವನ್ನು ಸೇರಿ ಸರಕಾರಿ ನೌಕರಿಗೆ ಶರಣಾದರು. ಪಟ್ಟಣದಲ್ಲಿ ಬದುಕತೊಡಗಿದರು.ಕೆಲ ದಿನಗಳಲ್ಲಿ ಮದುವೆಯನ್ನು ಮಾಡಿಕೊಂಡರು.ಇತ್ತ ರಾಮಪ್ಪ ಕೃಷಿ ಮಾಡುತ್ತಾ ಕಾಲ ಕಳೆಯತೋಡಗಿದ. ಮದುವೆಯಾದ ನಂತರ ಸೋಮ ಮತ್ತು ಭೀಮರ ಸಂಬಳ ಮನೆತನ ನಡೆಸಲು ಸಾಲದಾಯಿತು.ಲಂಚಕ್ಕೆ ಕೈ ಚಾಚಿ ಅಪ್ಪನ ಮರ್ಯಾದೆಯನ್ನು ಕಳೆಯತೊಡಗಿದರು. ಒಮ್ಮೆ ತಮ್ಮ ಊರಿನವನಿಂದ ಬಂದ ವ್ಯಕ್ತಿಯಿಂದ ಲಂಚ ತಗೆದುಕೊಂಡ ಸುದ್ದಿ ರಾಮಪ್ಪನಿಗೆ ತಿಳಿದು ರಾಮಪ್ಪ ಬೇಸರ ಪಟ್ಟುಕೊಂಡ. ಮಕ್ಕಳು ವಿಲಾಸಿ ಜೀವನಕ್ಕೆ ಘನತೆ ಗೌರವಗಳನ್ನು ಕಳೆದುಕೊಂಡರು ಎಂದು ಬೇಸರಪಟ್ಟುಕೊಂಡ.ಸಂಬಳ ಸಾಲದೆ ವಿಪರೀತ ಸಾಲ ಸೋಲ ಮಾಡಿ ದಿವಾಳಿಯಾಗತೊಡಗಿದರು.ಇನ್ನು ರಾಮಪ್ಪ ಸುಮ್ಮನಿರದೇ ಮಕ್ಕಳನ್ನು ಊರಿಗೆ ಕರೆಸಿಕೊಂಡು ಬುದ್ದಿ ಹೇಳಲು ತಿರ್ಮಾನಿಸಿದ. ಅದರಂತೆ ಊರಿಗೆ ಬಂದ ಇಬ್ಬರನ್ನು ತನ್ನ ತೋಟದ ಮನೆಗೆ ಕರೆಸಿಕೊಂಡು ಹಿತ್ತಲಿನ ಬಳಿ ಇರುವ ಇರುವೆ ಗೂಡಿನ ಬಳಿ ಸಾಲಗಿ ಹೋಗುವ ಇರುವೆಗಳನ್ನು ತೋರಿಸಿ ನೋಡಿ ಮಕ್ಕಳೇ ಈ ಇರುವೆಗಳು ಸಾಲು (ಶಿಸ್ತಿನ ಜೀವನ) ಬಿಡುವುದಿಲ. ಹಾಗೆಯೇ ಮಳೆಗಾಲಕ್ಕೆ ತಮ್ಮ ಮುಂದಿನ ಬದುಕಿಗೆ ಆಹಾರವನ್ನು ಸಂಗ್ರಹಿಸುತ್ತವೆ.ಜೀವನದಲ್ಲಿ ವಿಲಾಸಿ ಜೀವನ ನಡೆಸಿದರೆ ಇದ್ದ ಸಂಪತ್ತು ಕರಗುತ್ತಾ ಸಾಗುವುದು. ಇಳಿಗಾಲಕ್ಕೆ ನಿಮ್ಮ ಕಷ್ಟಗಳಿಗೆ ಕೂಡಿಟ್ಟ ಹಣ ನಿಮ್ಮ ನೆರವಿಗೆ ಬರುವುದು. ಇರುವೆಯ ಹಾಗೇ ಜೀವನ ಕ್ರಮವನ್ನು ಶಿಸ್ತು ಬದ್ದವಾಗಿ ನಡೆಸಿಕೊಂಡು ಹೋಗಬೇಕು. ಎಂದಾಗ ತಮ್ಮ ತಪ್ಪಿನ ಅರಿವಾಗಿ ಅಪ್ಪನ ಗದ್ದೆ ಕೆಲಸಕ್ಕೆ ಮರಳಿದರು. ತಮ್ಮ ಬದುಕನ್ನು ಸಾಗಿಸುತ್ತಾ ಮನ್ನಡೆಯುತ್ತಾರೆ.
ವಿನೋದ ರಾ ಪಾಟೀಲ ಶಿಕ್ಷಕ ಶ್ರೀರಂಗಪೂರ ಸವದತ್ತಿ