- Advertisement -
ಸಿಂದಗಿ ಮತಕ್ಷೇತ್ರದಲ್ಲಿ ಬರುವ ಮಂಗಳೂರು ಗ್ರಾಮದಲ್ಲಿ ನಡೆದ 2023-24 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 25.00 ಲಕ್ಷ ರೂ ಮೊತ್ತದ ಶ್ರೀ ಮಲ್ಲಿಕಾರ್ಜುನ ಗುಡಿಯಿಂದ ಶ್ರೀ ಭೀಮಾಶಂಕರ್ ಮಠದ ವರಿಗೆ ಸಿಸಿ ರಸ್ತೆ ಕಾಮಗಾರಿಗೆ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 5.00 ಲಕ್ಷ ರೂ ಮೊತ್ತದಲ್ಲಿ ಶ್ರೀ ಶಿವಪ್ಪ ಮುತ್ತ್ಯಾನ ಗದ್ದುಗೆ ಹತ್ತಿರ ಸಮುದಾಯ ಭವನಕ್ಕೆ ಶಾಸಕರಾದ ಅಶೋಕ ಮನಗೂಳಿ ಯವರು ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ. ತಾಲೂಕಾ ಬ್ಲಾಕ್ ಅಧ್ಯಕ್ಷರಾದ ಸುರೇಶ ಪೂಜಾರಿ, ಬಾಗಪ್ಪಗೌಡ ಪಾಟೀಲ. ಶಾಂತಗೌಡ ಬಿರಾದಾರ್ ಶಿವು ಪೀರಶೆಟ್ಟಿ, ಗುರಣ್ಣ ಹುಮನಾಬಾದ, ಶರಣಪ್ಪ ರೇವುರ್, ಮಲ್ಲಪ್ಪ ಮಾವುರ, ಶಂಕರ ಬಡಿಗೇರ್, ಸೋಮುಗೌಡ ಬಿರಾದಾರ್, ಶ್ರೀಶೈಲ್ ಕೊರಹಳ್ಳಿ, ವಿಠಲ ರೇವುರ, ಶಾಂತಪ್ಪ ರೇವುರ, ಮಲ್ಲಿಕಾರ್ಜುನ ವಾಲಿಕಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.