ನಿತ್ಯವೂ ಕುಲಗೋಡ ಕೋವಿಡ್ ಕೇಂದ್ರದ ರೋಗಿಗಳಿಗೆ ಊಟ ಉಪಾಹಾರ
ಕುಲಗೋಡ: ಕೋವಿಡ್ ಸೋಂಕಿತರು ಇದ್ದರೆ ಅದೇ ಕುಟುಂಬದ ಸದಸ್ಯರು ಊಟ ಉಪಾಹಾರವನ್ನು ಆಸ್ಪತ್ರೆ ಬಾಗಿಲಲ್ಲಿ ಇಟ್ಟು ಹೋಗುತ್ತಿರುವ ಹಾಗೂ ಮನೆಯಲ್ಲಿ ಸೋಂಕಿತರಿದ್ದರೆ ಅವರ ರೂಮ್ ಮುಂದೆ ಊಟ ಉಪಾಹಾರ ಇಡುತ್ತಿರುವ ಇಂದಿನ ದಿನಗಳಲ್ಲಿ ಮುಧೋಳ ಜನ ಹಿತ ಟ್ರಸ್ಟ್ ಸೋಂಕಿತ ರ ಸ್ನೇಹಿಯಾಗಿ ಅವರು ಚಿಕಿತ್ಸೆ ಪಡೆಯುತ್ತಿರುವ ಸ್ಥಳಕ್ಕೆ ಹೋಗಿ ಊಟ ಉಪಾಹಾರ ನೀಡುವುದರ ಜೊತೆಗೆ ಶೀಘ್ರ ಗುಣಮುಖರಾಗಿ ನಮ್ಮ ಜತೆಗೆ ಬನ್ನಿ ಎನ್ನುವ ಸಿಹಿ ಮಾತು ರೋಗಿಯ ಅರ್ಧ ರೋಗ ಕಡಿಮೆ ಮಾಡುತ್ತಿದೆ. ರೋಗಿಗಳ ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ ಮುಧೋಳದ ಜನಹಿತ ಟ್ರಸ್ಟ್ ಸದಸ್ಯರು. ಅದೂ ಯಾವುದೇ ಪ್ರಚಾರದ ಅಪೇಕ್ಷೆ ಇಲ್ಲದೆ ಮಾಡುತ್ತಿರುವ ಸೇವೆ ಸಾರ್ವತ್ರಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ.
ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಮಾನ್ಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಇವರ ಕ್ಷೇತ್ರದ ಜನರ ಹಿತಕ್ಕಾಗಿ ಗ್ರಾಮದ ಎಸ್.ಸಿ.ಎಸ್.ಟಿ ಹಾಸ್ಟೆಲನಲ್ಲಿ 30 ಬೆಡ್ ಗಳ ಕೋವಿಡ್ ಸೆಂಟರ ತೆಗೆದಿದ್ದು 30 ಜನ ಸೋಂಕಿತರು ಆರೈಕೆಯಾಗುತ್ತಿದ್ದು ಕಳೆದ ವಾರದಿಂದ ಪ್ರತಿ ದಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ರುಚಿಯಾದ ಹಾಗೂ ಶುಚಿಯಾದ ಊಟ ಫ್ರುಟ್ಸ್ ಸಲಾಡ್ ಉಪಾಹಾರ ನೀಡುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷ ರಾಜು (ನಾರಾಯಣ) ಯಡಹಳ್ಳಿ ಹೇಳಿದ್ದಾರೆ.
ಮುಂಜಾನೆ ಶುದ್ಧ ನೀರಿನ ಬಾಟಲ್ ಹಾಗೂ ಉಪಹಾರ ನೀಡುತ್ತೇವೆ ಎಂದು ಗ್ರಾಮದ ಮುಖಂಡ ಬಸನಗೌನ ಪಾಟೀಲ ಹೇಳಿದ್ದಾರೆ.
ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಜೊತೆಗೆ ಶುದ್ಧ ನೀರಿನ ಬಾಟಲ್ ನೀಡಲಾಗುತ್ತಿದೆ ಸುಭಾಸ ವಂಟಗೋಡಿ ವಿವರಿಸುತ್ತಿದ್ದಾರೆ.
ನಿತ್ಯವೂ: ಮುಂಜಾನೆ 7 ಕ್ಕೆ ಚಹಾ,ಹಾಲು.ಬಿಸ್ಕೆಟ್. 8:30 ಕ್ಕೆ ಉಪಹಾರ. ಮದ್ಯಾಹ್ನ 1 ಕ್ಕೆ ಊಟ. ಸಂಜೆ 4 ಕ್ಕೆ ಚಹಾ ಮತ್ತು ಬಿಸ್ಟೆಟ್, ಹಣ್ಣು, ಡೈಯ್ ಪ್ರೂಟ್ಸ. ರಾತ್ರಿ 8 ಕ್ಕೆ ಊಟ. ಹಾಗೂ ಪ್ರತಿ ಗಂಟೆಗೆ ಒಮ್ಮೆ ಬಿಸಿ ನೀರು ವವಸ್ಥೆ ಮಾಡಲಾಗಿದೆ.
ಟ್ರಸ್ಟ್ ಹಾಗೂ ಸ್ನೇಹಿರಾದ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ, ತಮ್ಮಣ್ಣಾ ದೇವರ, ಜನಹಿತ ಟ್ರಸ್ಟ್ ಮುಖ್ಯಸ್ಥ ಶಂಕರ ಹಾದಿಮನಿ. ಶಿಕ್ಷಕರಾದ ಕೆ.ಬಿ ಬಾಗಿಮನಿ, ಎಸ್.ಎಸ್ ತಳವಾರ. ಹಾಗೂ ಎಸ್.ಸಿ.ಎಸ್.ಟಿ ಹಾಸ್ಟೇಲ್ ಸಿಬ್ಬಂದಿ , ಆರೋಗ್ಯ ಇಲಾಖೆ ಕುಲಗೋಡ ಇದ್ದರು.
ಬಾಲಚಂದ್ರ ಜಾರಕಿಹೊಳಿ ಇವರ ಆದೇಶದಂತೆ ಕೋವಿಡ್ ಸೆಂಟರಗಳಿಗೆ ಗ್ರಾಮಸ್ಥರ ಮತ್ತು ಆಧಿಕಾರಿಗಳ,ಜನಪ್ರತಿನಿಧಿಗಳ ಸಹಕಾರದಿಂದ ಕುಲಗೋಡ ಸೋಕಿಂತರ ಪಾಲನೆಗೆ ಮುಂದಾಗಿದ್ದು ಸೆಂಟರ ಇರುವವರೆಗೂ ನಿತ್ಯವೂ 500 ಹೆಚ್ಚು ಸೋಂಕಿತರಿಗೆ ಉಪಹಾರ,ಊಟದ ವ್ಯವಸ್ಥೆ ಮಾಡಲು ಜನಹಿತ ಟ್ರಸ್ಟ ಸಿದ್ದವಾಗಿದೆ. ಜನರು ಮನೆಯಲ್ಲಿ ಕ್ವಾರೆಂಟೈನ್ ಆಗದೆ ಕುಟುಂಬದ ಹಿತಗಾಗಿ ಸೆಂಟರಗಳಲ್ಲಿ ಔಷಧೋಪಚಾರ ಪಡೆಯಬೇಕು. ಶಾಸಕರ ಕರೋನ ಮುಕ್ತ ತಾಲೂಕಿಗೆ ಹೆಗಲಾಗಬೇಕು.
ಜನಹಿತ ಟ್ರಸ್ಟ ಅಧ್ಯಕ್ಷ ರಾಜು ಯಡಹಳ್ಳಿ
ವರದಿ: ಶಂಕರ ಹಾದಿಮನಿ.