ಹಾಸನ ನಗರದ ಹುಣಸಿನಕೆರೆ ಬಡಾವಣೆಯ ಶ್ರೀ ಕಾಶಿ ವಿಶ್ವನಾಥ ದೇವಾಲಯ ಜೀರ್ಣೊದ್ಧಾರ ಸಮಿತಿ ಹಾಗೂ ಕನ್ನಡ ರತ್ನ ಯುವಕರ ಸಂಘ, ಹುಣಸಿನಕೆರೆ ಬೀದಿ, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯಕ್ತ ಇದೇ ಫೆಬ್ರವರಿ 26ರ ಬುಧವಾರ ಸಂಜೆ 4 ರಿಂದ 6ರವರಗೆ 101 ಲೀ. ಹಾಲಿನ ಅಭಿಷೇಕ ನಂತರ ರಾತ್ರಿ 7ಕ್ಕೆ ಮಹಾ ಮಂಗಳಾರತಿ, 7.30ಕ್ಕೆ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.
ದೇವಾಲಯದ ಆವರಣದಲ್ಲಿನ ರಂಗ ವೇದಿಕೆಯಲ್ಲಿ ಸಂಜೆ 5.30ಕ್ಕೆ ಶ್ರೀ ಶಾರದ ಭಜನಾ ಮಂಡಳಿಯಿಂದ ಹಾಗೂ 6.30 ರಿಂದ ಶ್ರೀ ಛಾಯಾಪುತ್ರ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯುವುದು.
7.30 ರಿಂದ ಶ್ರೀಮತಿ ರಾಣಿ ಚರಾಶ್ರೀ ಮತ್ತು ಸಂಗಡಿಗರಿಂದ ಭಕ್ತಿ ಕೋಲಾಟ ಮತ್ತು ಭಕ್ತಿ ಗೀತೆ 830 ಇಂದ 9.30 ವರೆಗೆ ಶ್ರೀ ಭೂ ಹರಿಕೃಪ ಭಜನಾ ಮಂಡಳಿ, ಶ್ರೀಮತಿ ಜಯಶ್ರಿ ಬಾಲಕೃಷ್ಣ ಸಂಗಡಿಗರಿಂದ ಭಕ್ತಿ ಭಜನಾ ಕಾರ್ಯಕ್ರಮ, 11ಕ್ಕೆ ದುರ್ಗಮ್ಮ ದೇವಸ್ಥಾನ ದುರ್ಗಾ ದೇವಿ ಭಜನಾ ಮಂಡಳಿ ರವರಿಂದ ಭಜನೆ ಕಾರ್ಯಕ್ರಮೆ ಇರುವುದು. ರಾತ್ರಿ 11.30 ರಿಂದ ಬೆಳಗಿನ ಜಾವ 5.30 ವರೆಗೆ ಏಕಲವ್ಯ ಅಖಂಡ ಭಜನಾ ಮಂಡಳಿಯವರಿಂದ ಅಮೋಘ ಭಜನಾ ಕಾರ್ಯಕ್ರಮ ಇರುತ್ತದೆ.
ಮಾರನೇ ದಿನ 27ರ ಗುರುವಾರ ಇದೇ ದೇವರ ಸನ್ನಿಧಾನದಲ್ಲಿ ಮದ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಆರ್. ಕೃಷ್ಣಶೆಟ್ಟಿ, ಅಧ್ಯಕ್ಷರು ಸಮಿತಿಯ ಪರವಾಗಿ ವಿನಂತಿಸಿದ್ದಾರೆ.