ಕಸಾಪ ದ ೧೧೧ನೇ ಸಂಸ್ಥಾಪನಾ ದಿನಾಚರಣೆ

ಮುನವಳ್ಳಿ: “ಏಕೀಕರಣ ಹೋರಾಟದ ಸಂದರ್ಭದಲ್ಲಿ ಹರಿದುಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದಾಗಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ನವರನ್ನು ಸ್ಮರಿಸುವ ಮೂಲಕ ಕನ್ನಡ ಕಾರ್ಯ ಮಾಡಬೇಕು. ನಾವೆಲ್ಲರೂ ಕನ್ನಡ ಪುಸ್ತಕ ಓದಬೇಕು. ಕನ್ನಡ ನಾವು ಮಾತನಾಡುವ ಜೊತೆಗೆ ಕನ್ನಡ ಬೆಳೆಸುವ ಮೂಲಕ ಕನ್ನಡ ಸಾಹಿತ್ಯ ಕ್ಕೆ ಇತಿಹಾಸ ಕೂಡ ತಿಳಿಸುವ ಕಾರ್ಯ ಮಾಡಬೇಕು” ಎಂದು ಮದ್ಲೂರ ಸರಕಾರಿ ಪ್ರೌಢ ಶಾಲೆ ಯ ಶಿಕ್ಷಕರಾದ ಲಕ್ಷ್ಮಣ ನಾಗಣ್ಣವರ ಹೇಳಿದರು.

ಅವರು ಪಟ್ಟಣದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ಸವದತ್ತಿ ತಾಲೂಕು ಘಟಕದ ವತಿಯಿಂದ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 111 ನೇ ಸಂಸ್ಥಾಪನಾ ದಿನಾಚರಣೆ ಯ ಕಾರ್ಯಕ್ರಮ ದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇದೇ, ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ರಾದ ಸಿ ಬಿ ದೊಡಗೌಡರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯ ಶಿಕ್ಷಕರಾದ ಬಿ ಬಿ ಹುಲಿಗೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಮುನವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಮೋಹನ ಸರ್ವಿ ಕನ್ನಡ ಭಾಷೆಯ ಮಹತ್ವ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಪರಿಷತ್ತಿನ ಅಧ್ಯಕ್ಷರಾದ ವೈ ಎಂ ಯಾಕೊಳ್ಳಿ ಮಾತನಾಡಿ “ಸಾಹಿತ್ಯ ಪದಕ್ಕೆ ವಿಶೇಷ ಅರ್ಥ ವಿದೆ. ಸಮಸ್ತ ಕನ್ನಡಿಗರ ಪರಿಷತ್ ಭಾಷೆಯ ಮಾತನಾಡುವವರ ಪರಿಷತ್ತು.2000 ಸಾವಿರ ದತ್ತಿ ಇಟ್ಟಂತಹ ಸಂಸ್ಥೆ ಕನ್ನಡದ ಕೆಲಸ ಭಾಷಾಭಿಮಾನಿಗಳಿಂದ ಜರುಗುವ ಮೂಲಕ ಕನ್ನಡ ಭಾಷಾಭಿಮಾನ ನಮ್ಮಲ್ಲಿ ಬರಬೇಕು” ಎಂದು,ಕರೆ,ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಿವಿಬಿ ನರಗುಂದ. ಸಿಬಿ ದೊಡಗೌಡರ, ಸುರೇಶ್ ಜಾವೂರ,  ಗುರುನಾಥ ಪತ್ತಾರ, ಕದಳಿ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರಾದ ಅನ್ನಪೂರ್ಣ ಲಂಬೂನವರ, ರಾಜೇಶ್ವರಿ ಬಾಳಿ, ಮಹಾವಿದ್ಯಾಲಯದ ಉಪನ್ಯಾಸಕ ರಾದ ಆರ್, ಎಸ್, ಪೂಜೇರ, ಎಂ, ಗಿರೀಶ, ಎ. ಎಂ. ಮಕಾನದಾರ, ಎ. ಐ. ಸಂಕನ್ನವರ, ಕೆ. ಬಿ. ಕುರುಬಗಟ್ಟಿ, ಗುದಗಾಪೂರ, ಕನ್ನಡ ಉಪನ್ಯಾಸಕರಾದ ಎಂ, ಸಿ ಬಾಂಡೇಕರ, ಜಿ. ಬಿ. ಕೊಪ್ಪದ, ಜಿ ಎಸ್ ಹಿರೇಮಠ, ಭಾರತಿ ತೆಗ್ಗಿಹಾಳ, ಮದ್ಲೂರ ಪ್ರೌಢ ಶಾಲೆ ಶಿಕ್ಷಕರಾದ ಬಸವಣ್ಣೆಪ್ಪ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ನಾಡಗೀತೆ ಜರುಗಿತು. ಉಪನ್ಯಾಸಕಿ ಜಿ ಎಸ್ ಹಿರೇಮಠ ಕಾರ್ಯ ಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಸುಮಾ ಕುರಿ ಕನ್ನಡ ನಾಡು ನುಡಿಯ ಅಭಿಮಾನದ ಗೀತೆಯನ್ನು ಹಾಡಿದರು. ವೈ ಬಿ ಕಡಕೋಳ ಸ್ವಾಗತಿಸಿದರು. ಜಿ. ವೈ ಕರಮಲ್ಲಪ್ಪನವರ ವಂದಿಸಿದರು

LEAVE A REPLY

Please enter your comment!
Please enter your name here