Monthly Archives: June, 2020

ಕವನ-ಹನಿ-ಹಾಯ್ಕು

ಹನಿ ಹನಿ ಇಬ್ಬನಿ ಸಂಸಾರ ಸೂತ್ರಕ್ಕೆ ತಕ್ಕಂತೆ ಇದ್ದರೆ ಎಲ್ಲಾ ಸಸಾರ ಬಿಡಬೇಕು ಒಮ್ಮೊಮ್ಮೆ ಇಬ್ಬರೂ ಹಟ ಇಲ್ಲವಾದರೆ ಬಾಳು ಸೂತ್ರ ಹರಿದ ಗಾಳಿಪಟ!! ಸುಮಂಗಲೆ ಮಂಗಳನ ಅಂಗಳವ ತಲುಪಿದರೆ ಏನು? ಮಂಗಳಸೂತ್ರದ ಬೆಲೆಯ ಅರಿತಿಹಳು ಹೆಣ್ಣು ಏಳು ಬೀಳುಗಳಲಿ ಗಂಡನಿಗೆ ಸಮನಾಗಿ ಮುದ್ದಾದ ಮಕ್ಕಳಿಗೆ ಮೊದಲನೇ ಗುರುವಾಗಿ ಸತಿಯಾಗಿ ಮತಿಯಾಗಿ ಬಾಳಿದರೆ ಸಾಕಲ್ಲವೇ? ನಮಗೇಕೆ ಬೇರೆ ಗೊಡವೆ? ಸ(ವಿ)ರಸ ಊಟದೊಳಗಿರಬೇಕು ಉಪ್ಪಿನಕಾಯಿಯಂತೆ ಉಪ್ಪಿನಕಾಯಿ ಊಟವಾದರೆ ಪಿತ್ತ ಕೆರಳುವುದಂತೆ ಎಲ್ಲಕ್ಕೂ ಮಿತಿಯುಂಟು ಮೀರಿದರೆ ಕಗ್ಗಂಟು ಸಮರಸದ ನಂಟು ಸ್ವರ್ಗಕ್ಕದು ಮೆಟ್ಟಿಲು.... ಎಂಟೇ.... ಎಂಟು...!! ಸತಿ ಪತಿ ಸಂಸಾರದ ಪಥದಲ್ಲಿ ಸತಿ ಸರಸತಿ ಆದರೆ ಪತಿ ಪರಬ್ರಹ್ಮ ಇಬ್ಬರಿಗೂ ಇರುವುದು ಅವರವರದೆ ಧರ್ಮ ನಡು ನಡುವೆ ಬರದಂತೆ ತಡೆದರಾಯ್ತು...

ಕವನ (ಜೂನ್ 21 ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಈ ಕವನ)

*ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ* ಸರಳ ವ್ಯಕ್ತಿತ್ವದ,ಸೇವಾ ತತ್ಪರ ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ, ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರನರ್ತನ, ಊರು ತೊರೆದು ತೋಟ ಸೇರಿದ ಕುಟುಂಬ, ಸುಂದರ ಹಸಿರು ಪರಿಸರದಲ್ಲಿ ಅಪ್ಪನ ಜನನ.... ಗದ್ದೆ ,ತೋಟ ಕಂಡರೆ ವಿಪರೀತ ಪ್ರೀತಿ, ವೃತ್ತಿಯಲಿ ಶಿಕ್ಷಕ,ಪ್ರವೃತಿಯಲಿ ಕೃಷಿಕ, ಹಸು ಕಟ್ಟಿ,ಸೆಗಣಿ ಬಾಚಿ,ತೋಟ ಬಳಸಿ, ಸೈಕಲ್ಲೇರಿ ಶಾಲೆಗೆ ಹೊರಡುತ್ತಿದ್ದ ಸಮಯಪಾಲಕ,ಅಪರೂಪದ ಶಿಕ್ಷಕ ನಮ್ಮಪ್ಪ... ಹುಟ್ಟಿದೂರಿಗೆ ಪಾಠ ಹೇಳುವ ಐನೋರಾಗಿ, ಕರ್ತವ್ಯ ನಿರ್ವಹಿಸಿದ ಊರವರಿಗೆ ತಿಳಿಹೇಳುವ ಮಾರ್ಗದರ್ಶಕರಾಗಿ, ವ್ಯಾಜ್ಯಗಳ ಪರಿಹರಿಸುವ...

ಅಪ್ಪಾss ಐ ಲವ್ ಯೂ ಪಾ….!!

*ಅಪ್ಪ* ಎಷ್ಟೇ ಪ್ರಯತ್ನಿಸಿದರು ಬರೆಯಲಾಗುತ್ತಿಲ್ಲ ಅಪ್ಪಾ... ನೀನ್ಯಾಕೊ ಪದಗಳಿಗೆ ಸಿಗುತ್ತಿಲ್ಲ...!! ಹೆಗಲ ಮೇಲೆ ಹೊತ್ತು ಜಗವತೋರಿದವನು ಎದೆಗೆ ಅವುಚಿಕೊಂಡು ಮುದ್ದಿಸಿದವನು ನೀನು ಅಪ್ಪಾ..... ನೀನ್ಯಾಕೋ ರಾಗಕೆ ಸಿಗುತ್ತಿಲ್ಲ...!! ಸಮಾನ ಹಕ್ಕು ಕೊಟ್ಟು ಹೆಮ್ಮೆ ಪಟ್ಟವನು ನೀನು ನಿಷ್ಠೆಯನು ನಿತ್ಯ ರೂಢಿಯಲಿ ತಂದವನು ಅಪ್ಪಾ.... ನಿನ್ಯಾಕೊ ಅರಿವಿಗೆ ಸಿಗುತ್ತಿಲ್ಲ....!! ಮೌಲ್ಯಗಳನು ಪುಟಕ್ಕಿಟ್ಟ ಕುಶಲಕರ್ಮಿ ನೀನು ಪ್ರೀತಿಯ ಸಿರಿವಂತಿಕೆ ಉಣಸಿದ ಸಾಹುಕಾರ ಅಪ್ಪಾ.... ನೀನ್ಯಾಕೊ ಲೆಕ್ಕಕ್ಕೆ ಸಿಗುತ್ತಿಲ್ಲ.....!! ಸತತ ದುಡಿದ ಕಾಯಕಯೋಗಿ ನೀನು ಜಗದ ಸುಖವನೆಲ್ಲಾ ನನ್ನ ಬೊಗಸೆಗೆ ತಂದವ ನೀನು..... ಅಪ್ಪಾ ನೀನ್ಯಾಕೊ ವ್ಯಾಖ್ಯಾನಕ್ಕೆ ಸಿಗುತ್ತಿಲ್ಲ...!! *ಡಾ. ನಿರ್ಮಲಾ ಬಟ್ಟಲ* *ಅಪ್ಪ* ಅಪ್ಪ ಎಂಬ ಪದವು ಅಮೃತವು ತಂದೆಯೆಂದರೆ ತನ್ಮಯವು//ಪ// ಮನೆ...

ಗಲವಾನ್ ಸೇತುವೆ ಕಾರ್ಯ ಮುಕ್ತಾಯ !

ಚೀನಾ ಜೊತೆಗಿನ ಸಂಘರ್ಷದ ಹೊರತಾಗಿಯೂ ಭಾರತದ ಇಂಜಿನಿಯರ್ ಗಳು ಪೂರ್ವ ಲಡಾಕ್ ನ ಗಲವಾನ್ ನದಿಯ ಮೇಲೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾರ್ಯ ಮುಗಿಸಿದ್ದಾರೆ. ಈ ಸೇತುವೆಯಿಂದಾಗಿ ಭಾರತದ ಯೋಧರು ನದಿಯನ್ನು ಸುಲಭವಾಗಿ ದಾಟಿ ದಾರ್ಬುಕ್ ನಿಂದ ದಕ್ಷಿಣದ ಕೊನೆಯ ಪೋಸ್ಟ್ ಆದ ದೌಲತ್ ಬೇಗ್ ಓಲ್ಡೀ ವರೆಗಿನ 255 ಕಿ. ಮೀ...

ಶರಣ ಶರಣೆಯರೆಲ್ಲರಿಗೂ ಶರಣು ಶರಣಾರ್ಥಿಗಳು 🙏🙏🙏🙏

ಹನ್ನೆರಡನೆ ಶತಮಾನದ ಶಿವಶರಣರು ರಚಿಸಿದ ವಚನ ಸಾಹಿತ್ಯವು ಶರಣರ ಅನುಭವದ ನುಡಿಗಳು ಜೀವನದ ಸಹಜ ಘಟನೆಗಳನ್ನು ಅತ್ಯಂತ ಅಥ೯ಪೂಣ೯ವಾಗಿ ಹೇಳಿದ ಶರಣರ ಮಾತುಗಳೇ ಇಂದು ವಚನಗಳಾಗಿವೆ. ಕಾಯಕ ತತ್ವಕ್ಕೆ ಆದ್ಯತೆ ನೀಡಿ,ಬದ್ಧತೆಯ ಬದುಕು ನಿವ೯ಹಿಸಿದ 12 ನೇ ಶತಮಾನದ ಶರಣರ ನಡೆ ನುಡಿ ಒಂದಾಗಿದ್ದವು. ಈ ಕಾರಣಕ್ಕೆ 13 ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ...

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸವಿನೆನಪು

ಕಾರ್ಯೇಷು ದಾಸಿ :ಕರಣೇಶು ಮಂತ್ರಿ ಭೋಜ್ಯೇಶು ಮಾತಾ, ರೂಪೇಶು ಲಕ್ಷ್ಮಿ, ಶಯನೇಶು ರಂಭಾ: ಕ್ಷಮಯಾ ಧರಿತ್ರಿ, ಸತ್ಕರ್ಮ ಯುಕ್ತ ಕುಲ ಧರ್ಮಪತ್ನಿಯಾಗಿ ಭರತ ಕುಲ ಸ್ತ್ರೀ ನಿನಗಿಂದು ನಮನ. ಭಾರತದ ಸ್ವತಂತ್ರ ಹೋರಾಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಶೂರತನ ಮೆರೆದ ಮಹಿಳೆಯರಲ್ಲಿ ಒಬ್ಬಳಾದ ಝಾನ್ಸಿರಾಣಿ ಮಹಿಳಾ ಕುಲದ ಧೀರತ್ವದ ಕಳಶವಾಗಿ ಅಚ್ಚಳಿಯದೆ ಭಾರತೀಯರ ಮನದಲ್ಲಿ ನೆಲೆಸಿದ್ದಾಳೆ. ಕಾಶಿಯ ವಾರಣಾಸಿಯ...

App ಡಿಲೀಟ್ ಮಾಡೋಣ; ಚೀನಾ ವಿರುದ್ಧ ಹೋರಾಡೋಣ

ಚೀನಾದ ವಿಷಯದಲ್ಲಿ ನಾವು ದೇಶಕ್ಕೆ ಸಲ್ಲಿಸಬೇಕಾದ ಸೇವೆಯೆಂದರೆ ಚೀನಾಕ್ಕೆ ಸಂಬಂಧಪಟ್ಟ ಎಲ್ಲ App ಗಳನ್ನು Uninstall ಮಾಡುವುದು. ನಾವು ಕಣ್ಣು ಹಾಕಿಕೊಂಡಿರುವುದರಿಂದ ಲ* ಚೀನಾವು ಅದರಿಂದ ಬಿಲಿಯನ್ನುಗಟ್ಟಲೆ ಗಳಿಸಿ ಹಣವನ್ನು ನಮ್ಮ ದೇಶದ ವಿರುದ್ಧವೇ ಬಳಸುತ್ತಿದೆ ಆದ್ದರಿಂದ ನಾವೆಲ್ಲ ಕೂಡಲೇ ಮಾಡಿ ತಕ್ಕ ಪಾಠ ಕಲಿಸಬೇಕಾಗಿದೆ ಅವರ ಜೊತೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಕೂಡ ಹರಿಸಬೇಕಾಗಿದೆ. ನಮ್ಮ...

ದೇಶಹಿತದ ವಿಷಯದಲ್ಲಿ ಒಗ್ಗಟ್ಟೇಕೆ ಸಾಧ್ಯವಾಗುತ್ತಿಲ್ಲ ?

ನಾವು ಕೇಳಿರುತ್ತೇವೆ ; ಜಪಾನೀಯರು ತಮ್ಮ ಪ್ರಧಾನಿಯ ಒಂದು ಕೆಲಸವನ್ನು ವಿರೋಧಿಸುತ್ತಾರೆ ಆದರೆ ದೇಶದ ಕುರಿತ ಅವರ ಒಂದು ಕರೆಗೆ ಒಂದೇ ದನಿಯೆಂಬಂತೆ ಬೆಂಬಲ ನೀಡುತ್ತಾರೆ. ಅಮೇರಿಕನ್ನರು ಟ್ರಂಪ್ ಅವರನ್ನು ಕೆಲವು ವಿಷಯಗಳಲ್ಲಿ ವಿರೋಧಿಸುತ್ತಾರೆ ಆದರೆ ದೇಶದ ಭದ್ರತೆ ವಿಷಯ ಬಂದಾಗ ಬೇಷರತ್ ಬೆಂಬಲ ಟ್ರಂಪ್ ಗೇ ನೀಡುತ್ತಾರೆ. ಆದರೆ ನಮ್ಮ ದೇಶದಲ್ಲಿ ? ದೇಶದ...

ಭದ್ರತಾ ಮಂಡಳಿಗೆ ಭಾರತ-ಅಮೆರಿಕ ಅಭಿನಂದನೆ

184 ಮತಗಳನ್ನು ಪಡೆಯುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಚುನಾವಣೆಯಲ್ಲಿ ಭಾರತ ವಿಜಯಿಯಾಗಿದ್ದು, ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವದಲ್ಲಿ ಸ್ಥಾನಪಡೆದಿದೆ. ಇದರಿಂದ ಭಾರತಕ್ಕೆ ವಿಶ್ವಮಟ್ಟದಲ್ಲಿ ರಾಜತಾಂತ್ರಿಕ ವಿಜಯ ಸಿಕ್ಕಂತಾಗಿದೆ. ಸತತ 8 ನೇ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತದ ಜೊತೆ ಕಾಲುಕೆರೆದು ಜಗಳಕ್ಕೆ ಬಂದಿರುವ ಚೀನಾಕ್ಕೆ ಸದ್ಯಕ್ಕೆ ಭಾರೀ ಹಿನ್ನಡೆ ದೊರೆತಂತಾಗಿದೆ. ಭಾರತಕ್ಕೆ...

ಕವನ: ವಿಹು ಗಿಳಿ

*ವಿಹು ಗಿಳಿ* ತುಂಟ ನಗೆಯ ಮುದ್ದುಕಂದ ನಿನ್ನ ಬೆಡಗು ಅಂದಚೆಂದ ಹಾಲುಗೆನ್ನೆ ಹೊನ್ನ ತುಟಿಯ ಸಣ್ಣ ಸಣ್ಣ ಹೆಜ್ಜೆ ನಡೆಯ , ಹವಳ ತುಟಿಯ ತುಂಬು ಮನೆಯಾ ಅರಳುಮರುಳ ನೋಟದಿ ಎಲ್ಲರ ಸೆಳೆಯುವಾ ಕಾಲನೆತ್ತಿ ಬೆರಳ ಬಾಯಲ್ಲಿಟ್ಟು ಹೊಟ್ಟೆ ಮೇಲೆ ಅಂಗಿ ತೊಟ್ಟು ಬಂಗಾರ ಬಳೆಯ ಕೈಯಲಿಟ್ಟು ಮುತ್ತಿನಂದದಿ ಹಾಸಿಗೆಯಲ್ಲಿ ಹೊಳೆಯುತಾ ಹೊರಳಿ ಮರಳಿ ಅತ್ತು-ಕರೆದು ಅಮ್ಮನೆದೆಯ ಹಾಲು ಕುಡಿದು ಮನೆಯಲಿ ಎಲ್ಲರ ಪ್ರೀತಿ ಅಮೃತದಿ ಮಿಂದು ಮಿನುಗುತಾರೆ ಯಂತೆ ಹೊಳೆಯುವಾ ನಡೆಯಲೆದರುತಾ ಹೆಜ್ಜೆಯಿಟ್ಟು ಅಳುತ ನಗುತ್ತಾ ತಿಂಡಿ...
- Advertisement -spot_img

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -spot_img
close
error: Content is protected !!
Join WhatsApp Group