Monthly Archives: October, 2020

ಅಂಚೆ ಸಪ್ತಾಹದ ಕವನ

ಅಂಚೆ ಅಣ್ಣನಿಗೆ ನಮೋ... ಶಾಕುಂತಲೆಗೆ ಕಾಳಿದಾಸನ ಸಂದೇಶ ಅರುಹಿದ ಮೇಘದ ಪ್ರತಿರೂಪ ನೀನು, ಸಾಮ್ರಾಜ್ಯದಿಂದ ಸಾಮ್ರಾಜ್ಯಕೆ, ರಾಜಮನೆತನದಿಂದ ರಾಜಮನೆತನಕೆ ಸಂದೇಶ ಅರುಹಿದ ಶ್ವೇತಪಾರಿವಾಳದ ಪ್ರತಿರೂಪ ನೀನು..ನಾಡು ನುಡಿಯ ಹೃದಯದ ಬಡಿತ ನೀನು..... ಗೆಜ್ಜೆ ಕೋಲು ಹಿಡಿದು..ಅನುದಿನ ಹಳ್ಳಿಯ ರಸ್ತೆಗಳಲಿ ಓಡುತ್ತಾ ಪತ್ರಸಂದೇಶವ ತಲುಪಿಸುತ್ತಿದ್ದೆ ನೀ.. ಓದು-ಬರಹ ಬಾರದ ಮುಗ್ಧ ಜನಕೆ, ಸಂದೇಶ ವಾಚಿಸುವ ಗುರುವಾಗಿದ್ದೆ ನೀ.... ನಾಗರೀಕತೆಯ ಚಕ್ರ ಉರುಳಿದಂತೆ ಓಟವ ಬಿಟ್ಟು..ಸೈಕಲ್ಲೇರಿದೆ.. ನೂರಾರು..ಸಾವಿರಾರು ಜನರ ಪ್ರೀತಿ ಗಳಿಸಿದೆ.. ಹಳ್ಳಿಹಳ್ಳಿಗಳಲಿ ಅಂಚೆಕಛೇರಿಗಳ ಆರಂಭ, ಜನರ ಸಂದೇಶ ವಾಹನೆಗೆ ಕಛೇರಿಯ...

ಕವನ: ಅನ್ನದಾತ ಅಯ್ಯೋ ಪಾಪ!

ಹೊಲವ ಉಳುವ ರೈತ ಪಾಪ ಹಲುಬುವಂತೆ ಆಗಿದೆ !! ತನ್ನ ಕುಣಿಯ ತಾನೇ ತೋಡಿ ಕೂರೋ ಹಾಗೆ ಮಾಡಿದೆ!! ಎಲ್ಲ ಜನರ ಹೊಟ್ಟೆ ತುಂಬ್ಸೋ ಅನ್ನದಾತ ಪ್ರಭು ಇಂವ ಇವನ ಮನೆಯೆ ಹೊಟ್ಟೆ-ಬಟ್ಟೆ ಕೊರತೆಯಿಂದ ಕೊರಗಿದೆ!! ಮಂಜೇ ಇರಲಿ,ಮಳೆಯೆ ಬರಲಿ ಸಂಜೆವರೆಗೂ ದುಡಿಯುವ ಗುಟುಕು ಗಂಜಿಗಾಗಿ ಅಂಜಿ ಜೀವಮಾನ ಸವೆಸುವ!! ಬಿಸಿಲ ಧಗೆಯ ಬೆವರ ಜಳಕ ಶ್ರಮಕೆ ಇಲ್ಲ ಸಾರ್ಥಕ ಶ್ರಮವ ಪಡದೆ ಬೇರೆ ಜನರು ಮೆರೆಯುತಿಹರು ಸ್ವಾರ್ಥವ!! ದೇಶದ ಬೆನ್ನೆಲುಬು ಎಂದು ನುಡಿಯುತಿಹರೆ ಸುಮ್ಮನೆ ಹೊಗಳಿಕೆಯ ಭಾಷಣವ ಬಿಗಿದು ಕಟ್ಟಿ...

ಕವನ: ಓ ರೈತಾ..ಸಿಡಿದೇಳು..ಪುಟಿದೇಳು..

ಓ ರೈತಾ...ಕುಣಿಯ ತೋಡುವ ಆಸೆ ಬಿಡು... ನಿನ್ನ ಶೋಷಣೆಯ ಪ್ರತಿಭಟಿಸಿ ಸಿಡಿದೇಳು,ಪುಟಿದೇಳು, ಜಗದ ಜನಕೆಲ್ಲಾ ಅನ್ನದಾತ, ನಿನ್ನ ಕುಣಿಯ ನೀನೇ ತೋಡುವ ಕ್ರೂರ ದುರ್ಗತಿ ನಿನಗೇಕೆ ಬಂತು ? ಜನಿಸಿದಂದಿನಿಂದ ಕೊನೆಯುಸಿರುವವರೆಗೂ ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ??? ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ ಗಿರಕಿ ಹೊಡೆಯುತ್ತ ಕುಣಿಯುತ್ತಿರುವಾಗ, ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ, ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ, ಬಸವನ ಕಾಯಕ ತತ್ವ ನಿನ್ನ ಉಸಿರು , ನಿನಗೇಕೆ...

ಇಂದು ಜಾಗತಿಕ ವಲಸೆ ಹಕ್ಕಿಗಳ ದಿನ

ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 1993 ರಲ್ಲಿ ಅಮೆರಿಕದ ಸ್ಮಿತ್ ಸೋನಿಯನ್ ವಲಸೆ ಪಕ್ಷಿಗಳ ಕೇಂದ್ರ 'ಜಾಗತಿಕ ವಲಸೆ ಹಕ್ಕಿಗಳ ದಿನ' ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ನಂತರದ ವರ್ಷಗಳಲ್ಲಿ ಮತ್ತಷ್ಟು ದೇಶಗಳ ಸಂಘಸಂಸ್ಥೆಗಳು ಕೈ ಜೋಡಿಸಿ ಗಮನಸೆಳೆದ ಹಿನ್ನೆಲೆಯಲ್ಲಿ ಸಂಯುಕ್ತ ರಾಷ್ಟ್ರಗಳ ವಲಸೆ ಹಕ್ಕಿಗಳ ಸಂರಕ್ಷಣಾ ಒಪ್ಪಂದದ ಅಡಿಯಲ್ಲಿ 2006 ರಿಂದ ಮೇ ತಿಂಗಳ...

ಪುಸ್ತಕ ಪರಿಚಯ: ವಾಲಿ ಮಾಸ್ತರ ಕಕಮರಿ ಅಭಿನಂದನ ಗ್ರಂಥ

ಪುಸ್ತಕದ ಹೆಸರು : ವಾಲಿ ಮಾಸ್ತರ ಕಕಮರಿ ಅಭಿನಂದನ ಗ್ರಂಥ ಸಂಪಾದಕರು : ಡಾ. ಮಹಾಂತೇಶ ಉಕ್ಕಲಿ ಅಥಣಿ ಪ್ರಥಮ ಮುದ್ರಣ : 2020, ಪುಟಗಳು 200 ಬೆಲೆ : ಉಚಿತ ಪ್ರಕಾಶಕರು : ಅಪ್ಪಾಸಾಬ ಗುರುಬಸಪ್ಪ ವಾಲಿಯವರ “ಅಮೃತ ಮಹೋತ್ಸವ ಅಭಿನಂದನ ಗ್ರಂಥ ಅಥಣಿ” ಮುದ್ರಕರು : ಮಹಾಲಕ್ಷ್ಮೀ ಆಫ್‍ಸೆಟ್ ಅಥಣಿ ಡಾ. ಮಹಾಂತೇಶ ಉಕ್ಕಲಿ ಅವರ ಸಂಪಾದಕತ್ವದಲ್ಲಿ 75 ನೇ ವರ್ಷದ...

ಮೂರು ಓವರ್ ಗಳಲ್ಲಿ ವಿಕೆಟ್ ಪಡೆದ ಬೌಲರ್ ಗೆ ಹೆಚ್ಚುವರಿ ಓವರ್ ನೀಡಬೇಕು- ಸುನೀಲ್ ಗವಾಸ್ಕರ್

ಮೊದಲ ಮೂರು ಓವರ್ ಗಳಲ್ಲಿ ವಿಕೆಟ್ ಪಡೆದ ಬೌಲರ್ ಗೆ ಹೆಚ್ಚುವರಿಯಾಗಿ ಇನ್ನೊಂದು ಓವರ್ ಬೌಲಿಂಗ್‌ ಕೊಡಬೇಕು ಎಂದು ಖ್ಯಾತ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಹಾಗೆಯೇ ಒಂದು ಓವರ್ ಗೆ ಎರಡು ಬೌನ್ಸರ್ ಹಾಕಲು ಅವಕಾಶ ನೀಡಬೇಕು. ಬೌಲರ್ ಬಾಲ್ ಹಾಕುವ ಮೊದಲೇ ನಾನ್ ಸ್ಟ್ರೈಕ್ ನಲ್ಲಿರುವ ದಾಂಡಿಗೆ ಕ್ರೀಸ್ ಬಿಡುವುದನ್ನು ಗಂಭೀರತೆಯಿಂದ ಪರಿಸೀಲಿಸಬೇಕು...

ಕವನ: ಪ್ರೇಮದ ದೇವತೆ

ಪ್ರೇಮದ ದೇವತೆ!! ಕೇಳದ ದನಿಯೊಂದು ಕೂಗಿ ಕರೆದ ಭಾವಾನುರಾಗದಿ ಮೆರೆದ ಒಲವ ಮದ.. ನನ್ನವಳೇ ಕರೆದಂತೆ ನನ್ನ ಒಳಮನವ.. ಒಲವ ಧಾರೆಯು ಮಳೆಯ ಸುರಿಸಿದಂತೆ! ಕಾಣದ ಪ್ರೇಮದ ಸಾಗರದಿ ವಿಹರಿಸಿದಂತೆ.. ಸವೆದ ಪ್ರೀತಿಯ ನೆನಪು ಹಾಡಿದಂತೆ!! ಇರುಳ ಮೇಘದ ಅಡಿಯಲಿ, ಸಿಡಿಸಿದೆ ನೀ ಪ್ರೇಮದ ಕಿಡಿ.. ಆಹುತಿಯಾಗಿದೆ ನನ್ನೀ ಹೃದಯ, ಅಪ್ಪುಗೆಯೊಂದಿಗೆ ನಿನ್ನ ಉದಯ.. ಅವಿತುಕೊಳ್ಳಲೇ ನಾ ಈಗ ನಿನ್ನಲಿ, ಮರೆಯಾಗಲೇ ನಿನ್ನದೇ ಉಸಿರಲಿ!! ಲೀನವಾಗಲೇ ನಿನ್ನ ಎದೆ ಬಡಿತದಲಿ!! ನಯನ. ಎನ್ 1st...

ಕೇಂದ್ರ ಸಚಿವ ರಾಮ್ ವಿಲಾಸ ಪಾಸ್ವಾನ್ ನಿಧನ

ಹೊಸದಿಲ್ಲಿ - ಕೇಂದ್ರ ಸಚಿವ, ದಲಿತ ನಾಯಕ ರಾಮ್​ ವಿಲಾಸ್​ ಪಾಸ್ವಾನ್​ ಇಂದು ನಿಧನರಾಗಿದ್ದಾರೆ. ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕರಾದ ರಾಮ್ ವಿಲಾಸ್​ ಪಾಸ್ವಾನ್​, 8 ಬಾರಿ ಸಂಸದರಾಗಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಪಾಸ್ವಾನ್ ನಿಧನದ ಬಗ್ಗೆ ಅವರ ಪುತ್ರ ಚಿರಾಗ್​ ಪಾಸ್ವಾನ್​ ಟ್ವೀಟ್ ಮಾಡಿದ್ದಾರೆ. " ಪಪ್ಪ ಇನ್ನು...

ಸುಶಾಂತ ಆತ್ಮಹತ್ಯೆ ಪ್ರಕರಣ ; ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಮುಂಬೈ ಹೈಕೋರ್ಟ್

ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ರಾಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹಾಗೂ ಬಾಲಿವುಡ್ ನಲ್ಲಿ ಡ್ರಗ್ಸ್ ನ ಪ್ರಭಾವ ಕುರಿತಂತೆ ಮುಖ್ಯ ಆರೋಪಿಯಾಗಿದ್ದ ರಿಯಾ ಚಕ್ರವರ್ತಿಗೆ ಇಂದು ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ. ಸುಶಾಂತ ಅವರ ಪ್ರೇಯಸಿಯಾಗಿದ್ದ ರಿಯಾ ವಿರುದ್ಧ ಡ್ರಗ್ಸ್ ಸೇವನೆ ಹಾಗೂ ಮಾರಾಟದ ಆರೋಪವಿದೆ. ಸುಶಾಂತ ಅವರಿಗೆ ಡ್ರಗ್ಸ್ ನೀಡಿರುವ ಆರೋಪ...

ಕವನ: ಜಗತ್ತಿನ ಗಾಂಧಿ

🌹ಜಗತ್ತಿನ ಗಾ0ಧಿ🌹 ಗಾ0ಧಿಯೆ0ಬ ಬ0ಡೆಗಲ್ಲಿನ ಆದರ್ಶ ವಿಚಾರಗಳಿಗೆ ಜಗತ್ತೆ ಮ0ಡಿಯೂರಿದೆ ಜಾಗತೀಕರಣದ ಬಿರುಗಾಳಿಯಲ್ಲಿ ನರಳುವ ಇ0ದಿನ ಸ0ಧಿ ಸಮಯದಿ ಸತ್ಯ ಶಾ0ತಿ ಅಹಿಂಸೆಯ ತ0ದೆ ಮತ್ತೆ ಮತ್ತೆ ನೆನಪಾಗುವರು ಹನ್ನೆರಡನೆಯ ಶತಮಾನದ ಮಹಾತ್ಮಾ ಬಸವೇಶ್ವರರು ಸಮಸಮಾಜ ಕಟ್ಟುವಲ್ಲಿ ಕ್ರಾಂತಿ ಮಾಡಿದರು. ಈ ಶತಮಾನದಿ ಸತ್ಯದ ಸರದಾರರು ಶಾ0ತಿಯ ದೂತರು ಅಹಿಂಸೆಯ ಪರಿಪಾಲಕರು ಮಹಾತ್ಮ ಗಾಂಧಿಜಿಯವರು. ಮಹಾತ್ಮಾ ಗಾ0ಧೀಜಿಯವರ ನೇತೃತ್ವದಲ್ಲಿ ಸ್ವಾತ0ತ್ರಕ್ಕಾಗಿ ತಾಯಿ ಭಾರತಾ0ಬೆಯ ಒಡಲ ಧ್ವನಿಗಳೆಲ್ಲ ಒ0ದೇ ಎ0ಬ ಒಗ್ಗಟ್ಟಿನ ಬಲಹುರಿಯಾಗಿ ಸಾಗಿದರು. ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾತ್ಮ ಗಾ0ಧೀಜಿಯವರ ಆದರ್ಶ ವಿಚಾರಗಳು ಅ0ದು ಅವಶ್ಯವಾಗಿದ್ದವು ಇ0ದೂ ಅವಶ್ಯವಾಗಿವೆ ಮು0ದೂ ಬೇಕಾಗಿವೆ. ಸಂಜಯ.ಜಿ.ಕುರಣೆ ಶಿಕ್ಷಕರು ತಾಲೂಕು. ಕಾಗವಾಡ...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group