Monthly Archives: October, 2020

ಕವನಗಳು

ಜೀವನದ ಪಯಣ ಸಾಗುತ್ತಿದೆ ಜೀವನದ ಪಯಣ ಬಾಳ ದೋಣಿ ಪಥದಲ್ಲಿ ಹುಟ್ಟು ಹಾಕಿ ಸಾಗಿಸುವ ಪಯಣಿಗನು ಆ ನಾವಿಕನು ಈ ದಡದಿಂದ ಆ ದಡಕ್ಕೆ ಸಾಗುವುದರೊಳಗೆ ಯೌವನದಿಂದ ಮುಪ್ಪು ಆವರಿಸುತ್ತದೆ ಬಾಳ ದೋಣಿಯ ಪಥದಲ್ಲಿ ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಜೀವಿಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿವೆ ಮೈಮರೆತು ಈ ಬಾಳ ದೋಣಿಯ ಜೀವದ ಪಯಣದಲ್ಲಿ ನಾನು ಒಬ್ಬ ಪಯಣಿಗ ಪಯಣ ಮುಗಿಯುವುದರೊಳಗೆ...

ಕವನ

( ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಹತ್ಯಾಚಾರಕ್ಕೊಳಗಾದ ಮನಿಷಾ ಎಂಬ ಬಾಲಕಿಯ ಕುರಿತು ಶರಶ್ಚಂದ್ರ ತಳ್ಳಿ ಕವನ ) ಮನಿಷಾ! ಮುಂದಿನ ಜನುಮಗಳಲಿ...? ನಿನ್ನ ದೇಹವು ಕತ್ತಲೆಯ ಚಾಪೆಯಾಗುತ್ತದೆ ಎಂದೆನಿಸಿದಾಗ- ಅವರ ಕೊರಳ ಕೊಳವೆ ಕಡಿಬೇಕಿತ್ತು ನಿನ್ನ ಚಿತೆಯ ಬೆಂಕಿ ಕೆನ್ನಾಲಿಗೆ ಚಾಚುತಿದೆ ಎಂದೆನಿಸಿದಾಗ- ಕೈಗೆ ಸಿಕ್ಕ ಕಲ್ಲಿನಲಿ ಹಲ್ಲಿಗೆ ಜಜ್ಜಬೇಕಿತ್ತು ಮನಿಷಾ!ನಿನ್ನೆದೆಗೂಡನು ಕುಲುಮೆಯಲಿ ಬೇಯಿಸುತ್ತಾರೆ ಎಂದೆನಿಸಿದಾಗ- ಪೆನ್ನನು ಆಯುಧ ಮಾಡಿ, ಒಂದಿಬ್ಬರ ಕಣ್ಣಿಗಿರಿಯಬೇಕಿತ್ತು ನಿನ್ನ ಜೀವದ ಕಥೆ ಮುಗಿದೇ ಹೋಯಿತು ಎಂದೆನಿಸಿದಾಗ- ಅಬ್ಬಕ್ಕನಂತೆ ಅಬ್ಬರಿಸಿ ಒಂದೆರಡು ಹೆಣವಾದರೂ ಉರುಳಿಸಬೇಕಿತ್ತು ನಿನ್ನ ಬದುಕಿನ ವಿದಾಯ ಹರಾಜಾಗುತಿದೆ ಎಂದೆನಿಸಿದಾಗ- ಹುರಿಗೊಂಡ ಅವರ ಅಂಗಗಳನು...

ಕವನ: ಅಕ್ಷರದಾಂಜಲಿ

ಅಕ್ಷರದಾಂಜಲಿ ಆಗಸದಂಚಿನ ನೇಸರನೆಲ್ಲಿ ಮರೆಯಾದನು ಮಗುವಿನಂತಹ ಮನಸಿನ ಗಾನ ಗಂಧರ್ವನು ಮರೆಯಾದ ಸುಕೋಮಲ ಸುಮವೊಂದು ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು ಸ್ವರ ಸಾಮ್ರಾಟನ ಅಪಧಮನಿಗಳಲಿ ಸಂಗೀತದ ಸ್ವರ ಲಾಲಿತ್ಯವು ತುಂಬಿರಲು ಏರಿದೆತ್ತರದಲೂ ನಮ್ರತೆಯ ಸಾಕಾರವು ಎಷ್ಟು ಜನರ ಮನವ ಕದ್ದ ಗಾರುಡಿಗನು ನಾದದ ತಪಸ್ವಿಯಾಗಿ ಅರಳಿದಂತೆ ಸಾಗರವೇ ತಾನಾದರೂ ಬಿಂದುವಿನಂತೆ ತುಂಬಿದ ಕೊಡ...

ಕವನ: ಗಾಂಧಿ ಬೀಜ

ಗಾಂಧಿ ಬೀಜ ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟೆಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗು ಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ ಅರಮನೆ ಗುರುಮನೆ ಸೆರೆಮನೆಗಳಲೂ ಕಿಡಿನುಡಿ ಕೆನ್ನಾಲಿಗೆ ಚಾಚಿ...

ಗಾಂಧಿ ತಾತನ ಕವನಗಳು: ಡಾ.ಭೇರ್ಯ ರಾಮಕುಮಾರ್, ರೇಷ್ಮಾ ಕಂದಕೂರ, ಪುಷ್ಪಾ ಮುರಗೋಡ,ಶರಶ್ಚಂದ್ರ,ರಾಧಾ ಶಾಮರಾವ, ಗಿರಜಾ ಮಾಲಿಪಾಟೀಲ, ಬಸಮ್ಮ ಹಿರೇಮಠ….ಕವನಗಳು

ಇವರೇ ಗಾಂಧಿ ಅಜ್ಜ ಕೈಲಿ ಕೋಲು, ಬಿರುಸು ನಡಿಗೆ ಬಾಯಲ್ಲಿ ಸತ್ಯ, ಶಾಂತಿ ಮಂತ್ರ ರಾಷ್ಟ್ರದ ಒಳಿತಿಗಾಗಿ ಹೋರಾಡಿಯೂ, ಅಧಿಕಾರ ಕೈಬೀಸಿ ಕರೆದಾಗ, ನಿರ್ಲಿಪ್ತವಾಗಿ ಕುಳಿತವರು... ಇವರೇ ನಮ್ಮ ಗಾಂಧಿ ಅಜ್ಜ. ರಾಷ್ಟ್ರಮಾತೆಯ ಕಣ್ಣು,ಕಿವಿ,ಬಾಯಿ ಮುಚ್ಚಿ ಠೇಂಕರಿಸುತ್ತಿದ್ದ ಕೆಂಪು ಜನರಿಗೆ ಸತ್ಯಾಗ್ರಹದಿಂದ ಪಾಠ ಕಲಿಸಿದವರು , ಸರಳ ನಡೆ-ನುಡಿ- ಜೀವನದಿಂದ ವಿಶ್ವಕ್ಕೇ ಮಾದರಿಯಾದವರು ಇವರೇ ನಮ್ಮ ಗಾಂಧಿ ಅಜ್ಜ.... ಪತ್ನಿ,ಪುತ್ರರ ಮರೆತು, ಹೊಣೆಯರಿತು ಸ್ವಾತಂತ್ರ್ಯ ಹೋರಾಟ ಸಂಘಟಿಸಿ, ಕಾಯ್ದೆ ಮುರಿದು, ಚಳವಳಿ ತೆಗೆದು ಲಕ್ಷಾಂತರ ಜನರಿಗೆ ಕೆಚ್ಚು...

ಅಕ್ಟೋಬರ್ 2, ಗಾಂಧಿ ಜಯಂತಿ ವಿಶೇಷ ಚಿಂತನ

ಸತ್ಯ ಪಥದ ನಿತ್ಯ ಸಂತ ಇಂಟ್ರೋ ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಅತ್ಯಂತ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ನವ್ಯಜಗದ ಸಂತನೇ ಈ ಮಹಾತ್ಮಗಾಂಧೀಜಿ. ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ...
- Advertisement -spot_img

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -spot_img
close
error: Content is protected !!
Join WhatsApp Group