Monthly Archives: January, 2022
ಸುದ್ದಿಗಳು
“ಫಲಾಪೇಕ್ಷೆ ಇಲ್ಲದ ಸೇವೆಯು ನಿಜವಾದ ಸಮಾಜ ಸೇವೆಯಾಗಿದೆ”- ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅಭಿಮತ
ಮೂಡಲಗಿ: ‘ಫಲಾಪೇಕ್ಷೆ ಬಯಸದೆ ನಿಸ್ವಾರ್ಥದಿಂದ ಮಾಡುವ ಸಮಾಜ ಸೇವಾ ಕಾರ್ಯಗಳು ಸಮಾಜವನ್ನು ತಲುಪುತ್ತವೆ’ ಎಂದು ಲಯನ್ಸ್ ಕ್ಲಬ್ 317ಬಿ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅವರು ಹೇಳಿದರು.ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2021-22ನೇ ಸಾಲಿನ ಸಾಮಾಜಿಕ ಕಾರ್ಯಚಟುವಟಿಕೆಗಳ ಸಮೀಕ್ಷೆ ಮತ್ತು ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟದಲ್ಲಿದ್ದವರಿಗೆ ಸಹಾಯ ಮತ್ತು ದಾನ...
ಸುದ್ದಿಗಳು
ಚಂಪಾ ಹಾಗೂ ಬಸಲಿಂಗಯ್ಯಾ ಹಿರೇಮಠ ನಿಧನಕ್ಕೆ ಬೆಳಗಾವಿ ಜಿಲ್ಲಾ ಕಸಾಪ ಸಂತಾಪ
ಕನ್ನಡ ಸಾಹಿತ್ಯ , ಜಾನಪದ ಲೋಕಕ್ಕೆ ತುಂಬಲಾರದ ನಷ್ಟ: ಶ್ರೀಮತಿ ಮಂಗಲಾ ಮೆಟಗುಡ್ಡ
ಬೆಳಗಾವಿ - ಪ್ರೊ.ಚಂದ್ರಶೇಖರ ಪಾಟೀಲ ಅವರು ಕನ್ನಡದ ಹಿರಿಯ ಕವಿ, ನಾಟಕಕಾರ, ಪತ್ರಿಕಾ ಸಂಪಾದಕ ಹಾಗೂ ಕಸಾಪ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದರು. ಕನ್ನಡ ಸಾರಸ್ವತ ಲೋಕದ ಮೇರು ವ್ಯಕ್ತಿತ್ವ ಸಾಹಿತ್ಯದ ಆತ್ಮ, ಕನ್ನಡದ ಶಕ್ತಿ, ಪರಿಶುದ್ದ ಮನಸ್ಸಿನ...
ಸುದ್ದಿಗಳು
ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಸನ್ನದ್ಧರಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿಯಲ್ಲಿ ಅವಳಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಈಗಿನಿಂದಲೇ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಾಲೂಕಾಡಳಿತಕ್ಕೆ ಸೂಚನೆ ನೀಡಿದರು.ಸೋಮವಾರ ಸಂಜೆ ಇಲ್ಲಿಯ ತಹಶೀಲ್ದಾರ ಕಛೇರಿಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ...
ಸುದ್ದಿಗಳು
ದಿಟ್ಟ ನಿಲುವಿನ ಸಾಹಿತಿ ಅಗಲಿಕೆ ; ಚಂಪಾ ನಿಧನಕ್ಕೆ ಗವಿಮಠ ಸಂತಾಪ
ಬೆಳಗಾವಿ - ಖ್ಯಾತ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರ ಅಗಲಿಕೆಯಿಂದ ಕರ್ನಾಟಕವು ಒಬ್ಬ ಗಟ್ಟಿಯಾದ ಹಾಗೂ ದಿಟ್ಟ ನಿಲುವಿನ ಸಾಹಿತಿ ಮತ್ತು ಹೋರಾಟಗಾರನನ್ನು ಕಳೆದುಕೊಂಡಂತಾಗಿದೆ ಎಂದು ಬೆಳಗಾವಿಯ ಹಿರಿಯ ರಂಗಕರ್ಮಿ, ಸಾಹಿತಿ ಬಿ.ಎಸ್.ಗವಿಮಠ ಅವರು ಇಂದಿಲ್ಲಿ ಹೇಳಿದರು.ಮಂಗಳವಾರ ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ಚಂಪಾ ಮತ್ತು ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ...
ಸುದ್ದಿಗಳು
ನೂತನ ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ ಸ್ಥಾಪನೆಗೆ ಒತ್ತಾಯ
ಮೈಸೂರು ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಸಾಲಿಗ್ರಾಮ ತಾಲ್ಲೂಕಿನಲ್ಲಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ನೂತನ ಘಟಕವನ್ನು ಆರಂಬಿಸಬೇಕೆಂದು ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಒತ್ತಾಯಿಸಿದ್ದಾರೆ.ಸಾಲಿಗ್ರಾಮ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಸಾಲಿಗ್ರಾಮವನ್ನು ರಾಜ್ಯ ಸರ್ಕಾರವು ಈಗಾಗಲೇ ತಾಲ್ಲೂಕೆಂದು ಘೋಷಣೆ ಮಾಡಿದೆ.ನೂತನ ತಾಲ್ಲೂಕು ಕಛೇರಿಯೂ ಆರಂಭಗೊಂಡಿದೆ.ಜೊತೆಗೆ ಎಲ್ಲ ತಾಲ್ಲೂಕು ಸೌಲಭ್ಯಗಳನ್ನು ದೊರಕಿಸಲು ಶಾಸಕ ಸಾ.ರಾ.ಮಹೇಶ್ ಹಾಗೂ ರಾಜ್ಯಸರ್ಕಾರ...
ಜೋತಿಷ್ಯ
✨️🌼ಏಕಾದಶಿಯ ಫಲದ ಕಥೆ 🌼✨️
🌿 ತಮ್ಮಯ್ಯ ಎಂಬುವನು ಹೊಸದಾಗಿ ಮದುವೆಯಾಗಿದ್ದನು. ಹೊಸ ಬಟ್ಟೆ ಹಾಕಿಕೊಂಡು ಮಾವನ ಮನೆಗೆ ಹೊರಟಿದ್ದ. ಹಬ್ಬ ಮುಗಿಸಿ ಹೆಂಡತಿಯನ್ನು ಕರೆದುಕೊಂಡು ಬರಲು ಹೊರಟಿದ್ದನು. ಅವನು ಹೋಗುವ ಹಾದಿಯಲ್ಲಿ ಒಂದು ಹಸು ನೀರು ಕುಡಿಯಲು ಹಳ್ಳದ ಹತ್ತಿರ ಬರುತ್ತಿತ್ತು. ಅದನ್ನು ಇವನು ನೋಡಿದ. ಹಸು ಹಳ್ಳದಲ್ಲಿ ಇಳಿದು ನೀರು ಕುಡಿಯಲು ಹೋದಾಗ ಅದರ ಕಾಲು ಕೆಸರಿನಲ್ಲಿ...
ಜೋತಿಷ್ಯ
🌼ದಿನ ಭವಿಷ್ಯ (11/01/2022)🌼
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಸಮಯವು ಕೆಲವು ಮಿಶ್ರ ಪರಿಣಾಮವನ್ನು ಹೊಂದಿದೆ. ಆದರೆ ನಿಮ್ಮ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ನೀವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ನೀವು ಯಾವುದೇ ಸಾಮಾಜಿಕ ಸೇವಾ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರೆ, ನಿಮ್ಮ ವಿಶೇಷ ಕೊಡುಗೆ ಅದರಲ್ಲಿ ಉಳಿಯುತ್ತದೆ. ನಿಮಗೆ...
ಲೇಖನ
ಗುರು ಚಂಪಾರಿಗೆ ಅಶ್ರುತರ್ಪಣ; ಶಿವಾನಂದ ಬೆಳಕೂಡ
ಸಾಹಿತ್ಯವಲಯದ ಎರಡನೇ ತಲೆಮಾರಿನ ಕೊಂಡಿಯೊಂದು ಕಳಚಿ ಬಿದ್ದಾಗ ಒಮ್ಮೆಲೇ ಆಕಾಶದಲ್ಲಿನ ನಕ್ಷತ್ರಗಳು ಕಳಚಿಕೊಂಡು ಭೂಮಿಗೆ ಬಿದ್ದಂತೆ ; ಮತ್ತೊಮ್ಮೆ , ಸೂರ್ಯನೇ ಒಂದು ಗಳಿಗೆ ಅಸ್ತಂಗತನಾಗಿ ಜಗವೆಲ್ಲ ಕತ್ತಲಾಗಿ ದಿಕ್ಕು ಕಾಣದಂತಹ ಅನುಭವ ನನಗೆ.ಗುರುವೆಂಬ ಅರಿವನ್ನೇ ಮರೆತು ವಿದ್ಯಾರ್ಥಿಗಳ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಕಲಿಸುತ್ತಿದ್ದ ಸ್ನೇಹಜೀವಿ ನಮ್ಮೆಲ್ಲರ ಪ್ರೀತಿಯ ಗುರು ಚಂಪಾ.ಸಂಕ್ರಮಣ...
ಸುದ್ದಿಗಳು
ಕಲಾವಿದ ಬಿ. ಮಾರುತಿ ಕಲಾಕೃತಿಗಳಲ್ಲಿ ನಿಸರ್ಗದ ಅನಾವರಣ
ಧಾರವಾಡ : ಹಿರಿಯ ಚಿತ್ರ ಕಲಾವಿದ ಬಿ. ಮಾರುತಿ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ನಿಸರ್ಗದ ವಿಭಿನ್ನ ದೃಶ್ಯಗಳು ಸಹಜವಾಗಿ ಅನಾವರಣಗೊಂಡಿವೆ ಎಂದು ಕನ್ನಡ ಪತ್ರಿಕೋದ್ಯಮದ ಪಾರಂಪರಿಕ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಅಭಿಪ್ರಾಯಪಟ್ಟರು.ಅವರು ಸೋಮವಾರ ಇಲ್ಲಿಯ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ...
ಸುದ್ದಿಗಳು
ಬಸವಲಿಂಗಯ್ಯ ಹಿರೇಮಠ ಮತ್ತು ಚಂಪಾ ಅವರ ಶೃದ್ಧಾಂಜಲಿ ಕಾರ್ಯಕ್ರಮ
ಬೆಳಗಾವಿ: ಹಿರಿಯ ರಂಗಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ಸಾಹಿತಿ ಚಂದ್ರಶೇಖರ ಪಾಟೀಲರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಗಜಾನನ ನಾಯ್ಕ ಅವರು ಅಗಲಿದ ಸಾಹಿತಿಗಳ ಕುರಿತು ಮಾತನಾಡಿದರು.ರಂಗ ಕಲಾವಿದರಾದ ಬಸವಲಿಂಗಯ್ಯನವರು ರಂಗ ಶಿಕ್ಷಣವನ್ನು ನಿನಾಸಂನಲ್ಲಿ ಪಡೆದು, ಉತ್ತರಕರ್ನಾಟಕದ ಗಮನಾರ್ಹ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...