ಮೂಡಲಗಿ: ನೌಕರರ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿರುವ ಕಡತಗಳ ಶೀಘ್ರ ವಿಲೆವಾರಿ ಹಾಗೂ ಕಾಲಮಿತಿಯೊಳಗೆ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಕಛೇರಿಯು ಸುಲಲಿತವಾಗಿ ಸಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಬುಧವಾರ ಬಿಇಒ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರ ಸ್ವಾಗತ ಸಮಾರಂಭದದಲ್ಲಿ ಭಾಗವಹಿಸಿ ಮಾನಾಡಿ, ಶಿಕ್ಷಣ ಇಲಾಖೆಯು ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ...
ಬೆಂಗಳೂರು ಹತ್ತಿರ ಪ್ರಸಿದ್ಧ ಕ್ಷೇತ್ರ, ಕಾಕೋಳು ಚತುಭು೯ಜ ವೇಣುಗೋಪಾಲ ದೇವರ ಸನ್ನಿಧಾನದಲ್ಲಿ, ಅದರಲ್ಲೂ ದೇವಸ್ಥಾನದ 90 ನೇ ವಷ೯ದ ಬ್ರಹ್ಮ ರಥೋತ್ಸವ ಸಂಭ್ರಮ, ಅವಿಸ್ಮರಣೀಯ ಉತ್ಸವ ವೀಕ್ಷಿಸುವುದೇ ಭಕ್ತ ಜನರಿಗೆ ಪುಣ್ಯ ಸಮಯ.
ಈ ಪುಣ್ಯ ಕಾಲದಲ್ಲಿ, ಸಂಸ್ಕೃತಿ ಚಿಂತಕ ಮತ್ತು ಅಂಕಣಕಾರರಾದ ಡಾ॥ ಗುರುರಾಜ ಪೋಶೆಟ್ಟಿಹಳ್ಳಿಯವರು ಅತ್ಯಂತ ಸಂದೇಶಯುಕ್ತ ಆಧ್ಯಾತ್ಮಿಕ ಚಿಂತನೆಯ ಸಂಗ್ರಹಯೋಗ್ಯ 40...
ತುಂತುರು ಮಳೆ
ವರುಣನಾಗಮನದಿ ಭುವಿಗೆ ಕಳೆ
ಬಾಣಂಚಿನ ಮಡಿಲಿನಿಂದ ಜಾರಿ
ಭೂಮಾತೆಯ ಒಡಲ ಸೇರಿ
ತಂಪೆರಗಿತು ಸುತ್ತಲೂ ಹರಡಿ
ಮೈ ಜಾಡಿಸುವ ಗುಬ್ಬಚ್ಚಿಗಳು
ಗರಿಗೆದರುವ ಸುಂದರ ನವಿಲುಗಳು
ಎಲೆಗಳಿಂದ ಜಾರುವ ನೀರ ಬಿಂದುಗಳು
ಆ ಬಿಂದುಗಳ ಹೊತ್ತು ನಿಂತ ಸುಮಗಳು
ತಂಪಾದ ಗಾಳಿಯ ಇಂಪಿನ ಒಡನಾಟ
ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ
ರೋಮಾಂಚನಗೊಳಿಸುವ ವಾತಾವರಣ
ಮುಂಗಾರಿನ ಮಳೆಯ ಈ ಸಂಚಲನ
ಸದ್ದು ಗದ್ದಲಗಳಿಗೆ ಕೊಂಚ ವಿರಾಮ
ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ
ತುಂತುರು ಮಳೆಯ ಆಸ್ವಾದಿಸೋಣ
ಮಳೆ...
ನಮ್ಮೂರಿನ ಹೆಮ್ಮೆಯ ಕುವರ, ಹೇಮಾವತಿ ನದಿ ತಟದ ಗೊರೂರು ಎಂಬ ಪುಟ್ಟ ಗ್ರಾಮದ ಕೀರ್ತಿ ಪತಾಕೆಯನ್ನು ಸಪ್ತ ಸಾಗರಗಳನ್ನೂ ದಾಟಿಸಿ ದೂರದ ಅಮೆರಿಕದಲ್ಲಿ ಹಾರಾಡಿಸಿದ ಖ್ಯಾತ ಬರಹಗಾರ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್" ರವರ ಜನ್ಮದಿನ.
ವಿಷಯ ಸಂಗ್ರಹ : ಗೊರೂರರ ಸುಪುತ್ರಿ ಶ್ರೀಮತಿ ವಸಂತಮೂರ್ತಿ ( ಹಾಲಿ ವಾಸ ಕೆನಡಾ ) ರವರೊಂದಿಗೆ ನೇರ...
ಪ್ರಸ್ತುತ ರಾಜ್ಯದ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ನಮ್ಮ ಕರುನಾಡ ರಾಜ್ಯದ ಮುಂದಿನ ದಿನಗಳು ಭೀಕರವಾಗಿವೆ ಎಂದು ಪ್ರಜ್ಞಾವಂತರಾದವರಿಗೆ ಅನ್ನಿಸದೇ ಇರಲಾರದು. ಮೊನ್ನೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಡತೆ ಒಂದು ರೀತಿಯ ಧೂರ್ತತನವೆಂದು ವ್ಯಾಖ್ಯಾನಿಸಬಹುದಾಗಿದೆ ಯಾಕೆಂದರೆ, ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರುಗಳು ಶತಾಯಗತಾಯ ಗೆಲ್ಲಲೇ ಬೇಕೆಂಬ ಉಮ್ಮೇದಿನಲ್ಲಿ ಘೋಷಿಸಿದ ಗ್ಯಾರಂಟಿಗಳು ದೇವರಾಣೆಯಾಗಿಯೂ ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಅಲ್ಲವೇ...
ಬೀದರ - ಸರಿಯಾಗಿ ಮಳೆ ಇಲ್ಲದೇ ರೈತ ಬಸವಳಿಯುತ್ತಿರುವ ಸಮಯದಲ್ಲಿ ರೈತರಿಗೆ ಮತೊಂದು ಬರೆ ಹಾಕುವಂತೆ ನಕಲ ರಸಗೊಬ್ಬರ ತಯಾರಿಕೆ ಮತ್ತು ಮಾರಾಟ ಮಾಡುವ ಖದಿಮರ ಗ್ಯಾಂಗ್ಒಂದರ ಮೇಲೆ ಬೀದರ್ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಲಾಗಿದೆ.
ಕೇಂದ್ರ ರಸಗೊಬ್ಬರ ಸಚಿವರ ತವರೂರು ಬೀದರ್ ನಲ್ಲಿಯೇ ಡಿಎಪಿ ರಸಗೊಬ್ಬರ ನಕಲು ಮಾಡುವ...
ಮೂಡಲಗಿ: ‘ಭಜನೆ ಮತ್ತು ಸಂಗೀತ ಕಲೆಗೆ ಇಟನಾಳದ ಐಹೊಳೆ ಕುಟುಂಬದವರ ಕೊಡುಗೆ ಅಪಾರವಾಗಿದೆ” ಎಂದು ಇಟನಾಳದ ಸಿದ್ದೇಶ್ವರ ಆಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.
ಸಮೀಪದ ಇಟನಾಳ ಗ್ರಾಮದಲ್ಲಿ ಶಿವಶರಣ ಶಾಬುಜಿ ಐಹೊಳಿ ಹಾಗೂ ಶರಣೆ ಅವಬಾಯಿ ಐಹೊಳೆ ಅವರ ಪುಣ್ಯಸ್ಮರಣೆ ಹಾಗೂ ಸಂಗೀತ, ಭಜನೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಗೀತವು ಸರ್ವಕಾಲಿಕವಾಗಿ ಶಾಶ್ವತವಾಗಿ...
ಇದನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ. ಹೊಟ್ಟೆಗೆ ತೆಗೆದುಕೊಳ್ಳುವುದು ಸ್ವಲ್ಪ ಉಷ್ಣ ಆದರೂ ಉತ್ತಮ ಔಷಧಿ ಗುಣಗಳನ್ನು ಹೊಂದಿದೆ.
ಪುನರ್ನವ ಯಾವ ಅವಯವ ಡ್ಯಾಮೇಜ್ ಆದರೂ ಪುನಃ ಮೊದಲಿನ ಸ್ಥಿತಿಗೆ ತರುತ್ತದೆ.
ಕೊಮ್ಮೆಗಿಡ ಅಥವಾ ಪುನರ್ನವ ಬೇರಿನ ಕಷಾಯವನ್ನು ಕುಡಿದರೆ ಕಾಲುಗಳ ಊತ ಕಡಿಮೆಯಾಗುತ್ತದೆ.
ಎಲೆಗಳನ್ನು ಪಲ್ಯ ಮಾಡಿ ಸೇವಿಸಿದರೆ ರುಮ್ಯಾಟಿಕ್(ಸಂಧಿವಾತ) ಸಮಸ್ಯೆ ದೂರವಾಗುತ್ತದೆ.
ಬೇರನ್ನು ನೀರಲ್ಲಿ...
ಧಾರವಾಡಃ ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆರ್. ಆರ್. ಸದಲಗಿ ಅಧಿಕಾರ ಸ್ವೀಕರಿಸಿದರು.
ಬೆಳಗಾವಿ ಜಿಲ್ಲೆಯ ಯರಗಟ್ಟಿಯವರಾದ ಸದಲಗಿ ಯವರು ಈ ಹಿಂದೆ ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ನಂತರ ಮುಂಡರಗಿ ಹಾಗೂ ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಇಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು, ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ...
ಮೈಸೂರು - ಗುರುವಿನ ಗುಲಾಮ ಆಗುವ ತನಕ ದೊರೆಯಣ್ಣ ಮುಕುತಿ ಎಂದು ದಾರ್ಶನಕರು ಹೇಳಿದ್ದಾರೆ ಅಂದರೆ ಏನೂ ತಿಳಿಯದ ಸಾಮಾನ್ಯ ಒಬ್ಬ ಮನುಷ್ಯನಿಗೆ ಜೀವನದ ಮೌಲ್ಯಗಳನ್ನು ಜೀವನದ ಅರ್ಥ, ಗುರಿಗಳನ್ನು ಸಾಧಿಸಲು ಇರುವ ಮಾರ್ಗಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೇ ತಿಳಿಯಲು ಸಾಧ್ಯವಿಲ್ಲ ಎಂದು ವಿಶ್ರಾಂತ ಡಿಡಿಪಿಐ ಮಂಜುಳಾ ಹೇಳಿದರು.
ನಗರದ ಜೂ-೩ ರಂದು ಶ್ರೀ ಸತ್ಯಸಾಯಿ ಬಾಬಾ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...