ಕವನ: ತುಂತುರು ಮಳೆ

Must Read

 

ತುಂತುರು ಮಳೆ

ವರುಣನಾಗಮನದಿ ಭುವಿಗೆ ಕಳೆ

ಬಾಣಂಚಿನ ಮಡಿಲಿನಿಂದ  ಜಾರಿ 

ಭೂಮಾತೆಯ ಒಡಲ ಸೇರಿ 

ತಂಪೆರಗಿತು ಸುತ್ತಲೂ ಹರಡಿ

ಮೈ ಜಾಡಿಸುವ ಗುಬ್ಬಚ್ಚಿಗಳು

ಗರಿಗೆದರುವ ಸುಂದರ ನವಿಲುಗಳು 

ಎಲೆಗಳಿಂದ ಜಾರುವ ನೀರ ಬಿಂದುಗಳು 

ಆ ಬಿಂದುಗಳ ಹೊತ್ತು ನಿಂತ ಸುಮಗಳು

ತಂಪಾದ ಗಾಳಿಯ ಇಂಪಿನ ಒಡನಾಟ 

ಗಾಳಿಯಲ್ಲಿ ತುಂತುರು ಹನಿಗಳ ಚೆಲ್ಲಾಟ 

ರೋಮಾಂಚನಗೊಳಿಸುವ ವಾತಾವರಣ 

ಮುಂಗಾರಿನ ಮಳೆಯ ಈ ಸಂಚಲನ

ಸದ್ದು ಗದ್ದಲಗಳಿಗೆ ಕೊಂಚ ವಿರಾಮ 

ಸಂಚಾರ ವಿಹಾರಕ್ಕೆ ಹಾಕುವ ಕಡಿವಾಣ

ತುಂತುರು ಮಳೆಯ ಆಸ್ವಾದಿಸೋಣ

ಮಳೆ ನಿಂತು ಹೋದ ಮೇಲೆ ಮತ್ತದೇ ಪಯಣ



ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ ಬಿ ಆರ್ ಪಿ ಚ. ಕಿತ್ತೂರು

Latest News

ತೆರಿಗೆಗಳ ಬಗ್ಗೆ ಎಲ್ಲರಲ್ಲಿ ಅರಿವು ಮುಖ್ಯ : ಪ್ರೊ. ಎಂ.ವಾಯ್. ಕಂಬಾರ

ಮೂಡಲಗಿ: ಸರಕು ಮತ್ತು ಸೇವಾ ತೆರಿಗೆ ಚೌಕಟ್ಟು ಭಾರತದಲ್ಲಿ ಜುಲೈ 1, 2017 ರಿಂದ ಜಾರಿಗೆ ಬಂದಿರುವ ಏಕರೂಪದ, ಗುರಿ-ಆಧಾರಿತ, ಪರೋಕ್ಷ ತೆರಿಗೆ ವ್ಯವಸ್ಥೆಯಾಗಿದೆ. ಇದು...

More Articles Like This

error: Content is protected !!
Join WhatsApp Group