ಸಿಂದಗಿ: ರಾಜ್ಯ ಸರ್ಕಾರ ಜೈನ ಮುನಿಗಳಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ನೀಡಬೇಕೆಂದು ತಾಲೂಕು ಸಕಲ ಜೈನ ಸಮಾಜದ ವತಿಯಿಂದ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಆರ್.ಪೋರವಾಲ ಮಾತನಾಡಿ, ಚಿಕ್ಕೋಡಿಯಲ್ಲಿ ಜೈನ ಮುನಿಗಳನ್ನು ಅಮಾನವೀಯವಾಗಿ ಕೊಲೆ ಮಾಡಿದ್ದು ಖಂಡನೀಯ, ಜೀವಿಸು ಜೀವಿಸಲು ಬಿಡಿ ಎಂಬ ಧೇಯದೊಂದಿಗೆ...
ಸಿಂದಗಿ: ಮಕ್ಕಳ ಸಾಹಿತ್ಯ ಪ್ರೌಢಸಾಹಿತ್ಯದಷ್ಟೇ ಪರಿಪೂರ್ಣವಾದ ಸಾಹಿತ್ಯ. ಹೀಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗಳಲ್ಲಿ ಮಕ್ಕಳ ಸಾಹಿತ್ಯ ಪ್ರಶಸ್ತಿಗಳ ವಿಸ್ತಾರ ಹೆಚ್ಚಿಸಬೇಕು ಎಂದು ವಿದ್ಯಾಚೇತನ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯ, ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಹೇಳಿದರು.
ಪಟ್ಟಣದ ಕ್ರಿಯೇಟಿವ್ ಕಿಡ್ಸ್...
ಮಕ್ಕಳ ಕವಿತೆ
ಒಂದು ಎರಡು
ತಿನ್ನಲು ಬೇಕು ಲಡ್ಡು
ಮೂರು ನಾಲ್ಕು
ಇಡ್ಲಿ ಚಟ್ನಿ ಸಾಕು
ಐದು ಆರು
ತಿಳಿ ಬದುಕಿನ ಸಾರ
ಏಳು ಎಂಟು
ಶ್ರಮದೊಂದಿಗೆ ನಂಟು
ಒಂಬತ್ತು ಹತ್ತು
ಯಶದ ಮೆಟ್ಟಿಲು ಹತ್ತು
ಲೀಲಾ ರಜಪೂತ ಹುಕ್ಕೇರಿ
ಪ್ರೇಮಾಂತರಂಗ
ನಿನ್ನ ಸೆಳೆತ ಕಲಾತ್ಮಕ ಸಂವೇದನೆ
ಬಯಸಬಹುದು ಎನಿಸಿರಲಿಲ್ಲ
ನಿನ್ನ ನಾ ಅಂದು
ಆದರೂ ನಿನ್ನ ನುಡಿಗಳಲ್ಲೇನೋ ಸೆಳೆತ
ಸೌಂದರ್ಯ ಕಪ್ಪು ಬಿಳುಪಿನಲ್ಲಿಲ್ಲ
ಸುಂದರವಾದ ಆಲೋಚನೆ, ಸುಂದರವಾದ ಕ್ರಿಯೆ,
ಭೌತಿಕವು ದೈವಿಕತೆಯ ಕುರುಹು
ಬರೀ ಭ್ರಾಂತಿ ಇರದ ಲೋಕ
ಬೇಕುಬೇಡಗಳ ಪೂರೈಸುವ ಬಂಧನ
ಹೃದಯಾಂತರದ ಮಿಡಿತ
ಬಾಹ್ಯ ಕಣ್ಣು ನೋಡದ
ಆಂತರಿಕ ಸ್ಪಂದನೆ
ಬರೀ ಮಾತುಗಳು ಮನೆ ಕಟ್ಟಲಾಗದ ಸ್ಥಿತಿ
ಆತ್ಮ ಮತ್ತು ಆತ್ಮಗಳ ಮಿಲನ ಸ್ಥಿತಿ
ಮೇಲ್ಮೈ ದೃಷ್ಟಿಗೆ ಗೋಚರಿಸದ ಆಂತರ್ಯ
ಎರಡು ಜೀವಗಳ ಮನದಾಳದ...
ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಹಸಿರಿನೊಂದಿಗೆ ವಿವಿಧ ನಮೂನೆಯ ರಂಗು ರಂಗಿನ ಹೂಗಳು ಕಣ್ಮನ ಸೆಳೆಯುತ್ತವೆ. ಕೆಲವು ಮಹಿಳೆಯರು ಇಂಥ ಚಿತ್ತಾಕರ್ಷಕ ಹೂಗಳನ್ನು ಬೆಳೆಯುವ ಸಲುವಾಗಿ ಮಳೆಗಾಲಕ್ಕೆ ಕಾಯುತ್ತಿರುತ್ತಾರೆ. ಇಳೆಗೆ ತಂಪು ತಂದ ಮಳೆರಾಯ ಸಕಲ ಜೀವಿಗಳಿಗೂ ನವೋಲ್ಲಾಸ ನೀಡುತ್ತಾನೆ.
ಇಡೀ ಪ್ರಕೃತಿಯೇ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತಿರುವಾಗ ಹೂಗಳ ಪ್ರೇಮಿಗಳಾದ ಹೆಂಗಳೆಯರು ಪರಿಸರದ ಸೌಂದರ್ಯ ವರ್ಧನೆಯಲ್ಲಿ...
ಈಗಾಗಲೇ ಕಬ್ಜ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಸಂದೀಪ್ ಮಲಾನಿ ಅವರು ಪ್ಯಾನ್ ಇಂಡಿಯಾ ಚಿತ್ರವಾದ ದಲಿತ ದೇವೋಭವ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಈಗಾಗಲೇ ಅದ್ದೂರಿಯಾಗಿ ಸೆಟ್ ನಿರ್ಮಾಣವಾಗುತ್ತಿದ್ದು ಈ ಚಿತ್ರದ ಚಿತ್ರೀಕರಣವು ಸಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ.
ಈ ಚಿತ್ರಕ್ಕೆ ನೀಲೇಶ್ ಆರ್ ನಿರ್ದೇಶನ ಮತ್ತು ಸ್ಕ್ರೀನ್ ಪ್ಲೇ ಮಾಡುತ್ತಿದ್ದು ಎಂ ಸಿ ಹೇಮಂತ...
ಗದಗ: ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ತ್ರಿಭಾಷಾ ಕವಿ’ ಗುರು ಪುಟ್ಟರಾಜರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಳ್ಳುವ ಘನ ಉದ್ದೇಶದಿಂದ, ಕಳೆದ ೨೩ ವರ್ಷಗಳಿಂದಲೂ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುತ್ತಾ ಬಂದಿದೆ. ಅದರಂತೆ ಈ ವರ್ಷವೂ ಕೂಡಾ ಈ ಪ್ರಶಸ್ತಿಗಾಗಿ ೨೦೨೧-೨೨ ಮತ್ತು...
ಮೂಡಲಗಿ: ಮಕ್ಕಳ ಸಮಗ್ರವಾದ ಬೆಳವಣಿಗೆಯಲ್ಲಿ ಪ್ರಮುಖವಾಗಿ ಕೌಶಲ್ಯಗಳು ಮತ್ತು ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಶಾಲಾ ಹಂತದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳ ಜೊತೆಯಲ್ಲಿ ಮೈಗೂಡಿಸಿದಾಗ ಮಾತ್ರ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್ ಮೀಶಿ ವಿವರಿಸಿದರು.
ಅವರು ಶನಿವಾರ ಸಮೀಪದ ಪಟಗುಂದಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಮತ್ತು ಉರ್ದು ಶಾಲೆಯಲ್ಲಿ...
ಸಿಂದಗಿ: ಪಟ್ಟಣದ ಸಿ.ಎಮ್. ಮನಗೂಳಿ ಕಲಾ ಮಹಾವಿದ್ಯಾಲಯದ ಕನ್ನಡ ವಿಷಯದ ಪ್ರಾಧ್ಯಾಪಕ ರಾಹುಲ್ ಕಾಂಬಳೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಖಿದ್ಮಾ ಫೌಂಡೇಶನ್ ಸಾಹಿತ್ಯ ಕ್ಷೇತ್ರಕ್ಕೆ ಕೊಡ ಮಾಡುವ 2023 ನೇ ಸಾಲಿನ ಕಾವ್ಯಶ್ರೀ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ರಾಹುಲ್ ಕಾಂಬಳೆ ಅವರಿಗೆಕಾವ್ಯಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸಿ ಎಮ್. ಮನಗೂಳಿ...
ಸಿಂದಗಿ: ಒಂದು ಮನೆ ನಿರ್ಮಾಣವಾಗಲು ಬೇಕಾಗಿರುವ ಕೂಲಿ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಕರೆಯುವವರು. ಸರ್ಕಾರದಿಂದ ಕೊಡಲಾಗುವ ಎಲ್ಲ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬೇಕು ಎಂದು ನ್ಯಾಯವಾದಿ ಎಸ್.ಬಿ.ಪಾಟೀಲ್ ಹೇಳಿದರು.
ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಿಗೆ ಹಮ್ಮಿಕೊಳ್ಳಲಾದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪೇಂಟ್ ಮಾಡುವವರು, ಗೌಂಡಿ, ಬಡಗಿ, ಎಲೆಕ್ಟ್ರೀಷಿಯನ್, ನೀರು ಹಾಕುವವರು, ಇಟ್ಟಂಗಿ ತಯಾರಿಸುವರು,...
ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...