ಬೆಳಗಾವಿ: ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಜನಸಾಮಾನ್ಯರ ಸಹಭಾಗಿತ್ವ ಅತೀ ಮುಖ್ಯ. `ಸಂಸದರ ಆದರ್ಶ ಗ್ರಾಮ ಯೋಜನೆ’ ಯಶಸ್ವಿಯಾಗಬೇಕಾದರೆ ಗ್ರಾಮದ ಜನರೆಲ್ಲಾ ಒಗ್ಗಟಿನಿಂದ ಈ ಕಾರ್ಯಕ್ಕೆ ಕೈಜೊಡಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಗ್ರಾಮಸ್ಥರಲ್ಲಿ ವಿನಂತಿಸಿದರು.
ಶನಿವಾರ ಆ. 19 ರಂದು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ ಬೆಳಗಾವಿ...
ಬೀದರ - ಬಸವಕಲ್ಯಾಣದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಾಲು ಮುಟ್ಟಿ ಶರಣಾದ ಶರಣು ಸಲಗರ.
ಅನುಭವ ಮಂಟಪ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಕಾಲಿಗೆ ನಮಸ್ಕರಿಸಿದ ಶಾಸಕ ಶರಣು ಸಲಗರ ಅವರು, ಅನುಭವ ಮಂಟಪದ ಕಾರ್ಯ ಬೇಗ ಮುಗಿಸುವಂತೆ, ಕಲ್ಯಾಣದ ಅಭಿವೃದ್ಧಿ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಶಾಸಕರ...
ಆರ್.ವೈ.ಪಾಟೀಲ್:ವೇದಾಂತ ಫೌಂಡೇಶನ್, ಎಜುಕೇಶನ್ ಇಂಡಿಯಾ ಸಹಯೋಗದೊಂದಿಗೆ ವೀರನಾರಿಯರ ಸತ್ಕಾರ.
ಬೆಳಗಾವಿ: ಹುತಾತ್ಮ ಸೈನಿಕರ ವೀರ ಪತ್ನಿಯರ ಜೀವನ ಸಂಘರ್ಷದಿಂದ ಕೂಡಿದೆ. ತಮ್ಮ ಮಕ್ಕಳ ಶಿಕ್ಷಣ ಪೂರ್ಣಗೊಳಿಸುವ ಮತ್ತು ಅವರಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುವ ಸವಾಲು ಅವರ ಮುಂದೆ ಇರುತ್ತದೆ. ಸಮಾಜವು ಇಂತಹ ವೀರ ಸೈನಿಕರ ಪತ್ನಿಯರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ ಎಂದು ಜುವಾರಿ ಕಂಪನಿಯ ಉಪಾಧ್ಯಕ್ಷ...
ಬೀದರ: ಕುಡಿಯುವ ನೀರಿಗಾಗಿ ದಿಢೀರನೆ ಗ್ರಾಮಸ್ಥರು, ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದಲ್ಲಿ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ನೀರಿಗಾಗಿ ದಿಢೀರನೆ ಪ್ರತಿಭಟನೆಗಿಳಿದರು. ಗ್ರಾಮಸ್ಥರ ಕುಡಿಯುವ ನೀರಿಗಾಗಿ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಸರ್ಕಾರದಿಂದ...
ಮೂಡಲಗಿ: ಪಟ್ಟಣದ ಪುರಸಭೆ ಹತ್ತಿರ ಇರುವ ನಂದಿನಿ ಮಾರಾಟ ಮಳಿಗೆಯಲ್ಲಿ ನಾಗರ ಪಂಚಮಿ ನಿಮಿತ್ತ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಸವ ಮಳಿಗೆಯನ್ನು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸತ್ಕಾರ ಸ್ವೀಕರಿಸಿ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಂದಿನಿ ಸಿಹಿ ಉತ್ಸವ...
ಬೀದರ - ಬಿಜೆಪಿ ಹೈಕಮಾಂಡ್ ಅಳೆದು ತೂಗಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುತ್ತದೆ. ಯಾರೂ ಯಾವುದೇ ಕಲ್ಪನೆ ಮಾಡಿಕೊಳ್ಳಬೇಕಾಗಿಲ್ಲ ಎಂದು ಬಸನಗೌಡಾ ಪಾಟೀಲ ಯತ್ನಾಳ ಹೇಳಿದರು.
ಬೀದರ್ ಜಿಲ್ಲೆ ಹುಮ್ನಾಬಾದ ತಾಲೂಕಿನ ಹಳ್ಳಿಖೇಡ್ ಗ್ರಾಮದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಶ್ರಾವಣ ಮುಗಿಯುವುದರೊಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ 2024 ರಲ್ಲಿ ನರೇಂದ್ರ ಮೋದಿ ...
ಮೂಡಲಗಿ ಸಿ.ಆರ್.ಸಿ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಶುಕ್ರವಾರದಂದು ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿ.ಪ್ರಾ ಶಾಲೆ, ಸ.ಕ.ಗಂ.ಶಾಲೆ ಮತ್ತು ಸ.ಉ.ಶಾಲೆ ಆವರಣದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ಅತಿಥಿಗಳಾಗಿ ಪುರಸಭೆ ಸದಸ್ಯರಾದ ಶ್ರೀಮತಿ ಖುರಷಾದ.ಅ.ನದಾಫ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಯಮನಪ್ಪ ಸನ್ನಪ್ಪಗೋಳ ಮತ್ತು ಮುಖಂಡರಾದ ರಾಮು ಝಂಡೇಕುರುಬರ, ಬಸು ಝಂಡೇಕುರುಬರ...
ಗುರ್ಲಾಪೂರ: ಸ್ಥಳೀಯ ಸರಕಾರಿ ಪ್ರೌಢಶಾಲೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಗೀತಾ ಕರಗಣ್ಣಿ ಇವರ ಅಧ್ಯಕ್ಷತೆಯಲ್ಲಿ ನೆರೆವೇರಿತು.
ಅಧ್ಯಕ್ಷರಾಗಿ ರಾಮಪ್ಪ. ಎನ್ ಹಳ್ಳೂರ, ಉಪಾಧ್ಯಕ್ಷರಾಗಿ ರೇವಪ್ಪ ಸಿ ಸತ್ತಿಗೇರಿ ಹಾಗೂ ಸದಸ್ಯರಾಗಿ ಮಹಾಲಿಂಗ ಮುಗಳಖೋಡ, ಮಹಾಲಿಂಗ ಶಿವಾಪೂರ,ಲಕ್ಷ್ಮಣ...
ಮೂಡಲಗಿ: ವಿಕಲಚೇತನ ಗುರುತಿನ ಯುಡಿಐಡಿ ಕಾರ್ಡ ದೇಶಾದ್ಯಂತ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತಿದ್ದು, ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸಮನ್ವಯ ಶಿಕ್ಷಣ, ಪುನರ್ವಸತಿ ಯೋಜನೆ, ಪಿಂಚಣಿ, ರೈಲ್ವೆ ರಿಯಾಯತಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ ಪೂರಕವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆರೋಗ್ಯ ಇಲಾಖೆಯಿಂದ...
ಆರೋಗ್ಯ ಕೇಂದ್ರಕ್ಕೆ ಬೇಕು ಕಾಯಕಲ್ಪ
ಮೂಡಲಗಿ - ನಾಗರಿಕರಿಗಾಗಿ ಅದರಲ್ಲೂ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನುಕೂಲವಾಗಬಲ್ಲ ನಾಗರಿಕ ಸೌಲಭ್ಯಗಳ ಸಂಕೀರ್ಣ ನಿರ್ಮಾಣವಾಗಿ ಆರು ವರ್ಷ ಕಳೆದರೂ ಜನರಿಗೆ ಉಪಯೋಗವಾಗದೆ ಹಾಳಾಗಿ ಹೋಗುತ್ತಿದೆ.
ಜಿಲ್ಲಾ ಪಂಚಾಯತ ಬೆಳಗಾವಿಯ ಯೋಜನೆ ಅಡಿಯಲ್ಲಿ ೨೦೧೭ ರಲ್ಲಿ ೨೦೧೭-೧೮ KHSDRP ಯೋಜನೆಯಡಿ ಸುಮಾರು ೩೦ ಲಕ್ಷ ರೂ. ಗಳ...
ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...