ಶ್ರೀಕೃಷ್ಣನು ಮಹಾಭಾರತದಲ್ಲಿ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯ ಸಾರಾಂಶವನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಅತ್ಯುತ್ತಮವಾದ ಹಾಗೂ ಸುಂದರವಾದ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆಯಲ್ಲದೇ ಜೀವನದಲ್ಲಿ ಖಿನ್ನತೆಯನ್ನು ಅನುಭವಿಸುವವರಿಗೆ ನಮ್ಮ ಭಗವದ್ಗೀತೆಯು ಸಂಜೀವಿನಿಯಾಗಿರುವುದು ಅಕ್ಷರಶಃ ನಿಜ. ಇನ್ನು ಮಹಾಭಾರತದ ಅನೇಕ ಪ್ರಸಂಗಗಳು ಇಂದಿನ ಯುವ ಜನಾಂಗಕ್ಕೆ ಮಾದರಿ ಮತ್ತು ಪ್ರೇರಕ ಶಕ್ತಿಯಾಗಿರುವ ಮಹಾಕಾವ್ಯಗಳಲ್ಲೊಂದು !! ಶ್ರೀಕೃಷ್ಣ ಪರಮಾತ್ಮನು...
ಗ್ರಹಗತಿಯ ನಡೆಸುವುದು ತಾರೆಗಳ ಹೊಳೆಸುವುದು
ಸೂರ್ಯಚಂದ್ರಾದಿಗಳ ಬೆಳಗಿಸುವುದು
ಸಸ್ಯಸಂಕುಲ ಜೀವರಾಶಿಗಳ ಬೆಳೆಸುವುದು
ದೈವದದ್ಭುತ ಲೀಲೆ - ಎಮ್ಮೆತಮ್ಮ
ಶಬ್ಧಾರ್ಥ
ಗ್ರಹಗತಿ = ಗ್ರಹಗಳ ಚಲನೆ. ತಾರೆ = ಚುಕ್ಕಿ.ಸಂಕುಲ = ಗುಂಪು ರಾಶಿ = ಗುಂಪು. ಲೀಲೆ = ಆಟ, ವಿಲಾಸ
ತಾತ್ಪರ್ಯ
ಆಕಾಶದಲ್ಲಿರುವ ಗ್ರಹಗಳನ್ನು ಸೂರ್ಯನ ಸುತ್ತ ಮತ್ತು
ತನ್ನ ಸುತ್ತ ಸುತ್ತುವಂತೆ ಮಾಡುತ್ತಿದೆ. ಅಸಂಖ್ಯಾತ ನಕ್ಷತ್ರಗಳನ್ನು ಮಿಣಮಿಣ ಮಿನುಗುವಂತೆ ಮಾಡುತ್ತಿದೆ. ಸೂರ್ಯ ಮತ್ತು...